ಸೌತ್ ಸಿನಿಮಾಗಳ (ಮೂಲಕ ಮೋಡಿ ಮಾಡಿರುವ ಕರಾವಳಿ ಸುಂದರಿ ಪೂಜಾ ಹೆಗ್ಡೆ (Pooja Hegde) ಮತ್ತೆ ಸುದ್ದಿಯಲ್ಲಿದ್ದಾರೆ. ಸಾಲು ಸಾಲು ಸಿನಿಮಾಗಳ ಸೋಲಿನಿಂದ ಕೆಂಗೆಟ್ಟಿರುವ ಪೂಜಾ, ಶಸ್ತ್ರಚಿಕಿತ್ಸೆಗೆ (Surgery) ಮುಂದಾಗಿದ್ದಾರೆ.
Advertisement
ಬ್ಯೂಟಿ ಜೊತೆ ಪ್ರತಿಭೆ ಇರುವ ನಟಿ ಪೂಜಾಗೆ ಅದ್ಯಾಕೋ ಲಕ್ ಕೈ ಕೊಟ್ಟಿದೆ. ಈ ಹಿಂದೆ ನಟಿಸಿದ ಸಿನಿಮಾಗಳಿಂದ ಸಾಕಷ್ಟು ಪ್ರಶಂಸೆಗೆ ಪಾತ್ರರಾಗಿದ್ದ ನಟಿಗೆ ಈಗ ಅದೃಷ್ಟ ಕೈ ಕೊಟ್ಟಿದೆ. ಸಾಲು ಸಾಲು ಸಿನಿಮಾಗಳ ಸೋಲಿನ ನಂತರ ಪೂಜಾ ಹೆಗ್ಡೆ ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ತಮ್ಮ ಸೌಂದರ್ಯದ ಕಡೆ ಮತ್ತಷ್ಟು ಗಮನ ಹರಿಸಲು ಮುಂದಾಗಿದ್ದಾರೆ. ಇದನ್ನೂ ಓದಿ: 2024ರ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ: ಮೋದಿ, ಹೇಮಾ ಮಾಲಿನಿಗೆ ರಾಖಿ ಸಾವಂತ್ ಥ್ಯಾಂಕ್ಸ್ ಹೇಳಿದ್ದೇಕೆ?
Advertisement
Advertisement
ಸಾಕಷ್ಟು ಕಲಾವಿದರು ತಮ್ಮ ವೃತ್ತಿಬದುಕಿನ ಬದಲಾವಣೆಗಾಗಿ ಶಸ್ತ್ರಚಿಕಿತ್ಸೆ ಮಾಡಲು ಮುಂದಾಗುತ್ತಾರೆ. ಅದೇ ಹಾದಿಯಲ್ಲಿ ಪೂಜಾ ಸಾಗುತ್ತಿದ್ದಾರೆ. ಮೂಗಿನ ಸರ್ಜರಿ ಮಾಡಿಸಲು ಪ್ಲ್ಯಾನ್ ಮಾಡಿದ್ದಾರೆ. ನಟಿಯ ಈ ನಿರ್ಧಾರ ಮುಂದೆ ವೃತ್ತಿ ಬದುಕಲ್ಲಿ ಹೊಸ ಬದಲಾವಣೆಯ ಜೊತೆ ಸಕ್ಸಸ್ ತಂದು ಕೊಡುತ್ತಾ ಕಾದುನೋಡಬೇಕಿದೆ. ಇದನ್ನೂ ಓದಿ: ಮಗಳ ಜೊತೆಗಿನ ಮುದ್ದಾದ ಫೋಟೋ ಹಂಚಿಕೊಂಡ ರಾಧಿಕಾ ಪಂಡಿತ್