‘ಸೀತಾರಾಮಂ’ (Seetharamam) ಬೆಡಗಿ ಮೃಣಾಲ್ ಠಾಕೂರ್ (Mrunal Thakur) ತೆಲುಗು- ಬಾಲಿವುಡ್ ಎರಡರಲ್ಲೂ ಉತ್ತಮ ಅವಕಾಶ ಬಾಚಿಕೊಳ್ತಿದ್ದಾರೆ. ಸದ್ಯ ಬಾಲಿವುಡ್‌ನ ಬಿಗ್ ಪ್ರಾಜೆಕ್ಟ್‌ವೊಂದರಲ್ಲಿ ಮೃಣಾಲ್ ಪಾಲಿಗೆ ದಕ್ಕಿದೆ. ಸ್ಟಾರ್ ನಟನ ಜೊತೆ ರೊಮ್ಯಾನ್ಸ್ ಮಾಡುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
Advertisement
ವಿಜಯ್ ದೇವರಕೊಂಡ (Vijay Devarakonda) ಜೊತೆಗಿನ ‘ಫ್ಯಾಮಿಲಿ ಸ್ಟಾರ್’ (Family Star) ಸಿನಿಮಾ ರಿಲೀಸ್‌ಗೆ ಸಿದ್ಧವಾಗಿದೆ. ಈ ಬೆನ್ನಲ್ಲೇ ಬಾಲಿವುಡ್‌ನ ಬಿಗ್ ಪ್ರಾಜೆಕ್ಟ್‌ವೊಂದರಲ್ಲಿ ನಟಿಸಲು ನಟಿ ರೆಡಿಯಾಗಿದ್ದಾರೆ. ಡೇವಿಡ್ ಧವನ್ ಮತ್ತು ವರುಣ್ ಧವನ್ (Varun Dhawan) ನಟನೆಯ ಪ್ರಾಜೆಕ್ಟ್‌ನಲ್ಲಿ ಮೃಣಾಲ್ ನಾಯಕಿಯಾಗಿ ಎಂಟ್ರಿ ಕೊಡುತ್ತಿದ್ದಾರೆ.
Advertisement
Advertisement
ರಿಯಲ್ ಲೈಫ್ ತಂದೆ ಮತ್ತು ಮಗ ಸಿನಿಮಾದಲ್ಲಿಯೂ ಮತ್ತೆ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ವರುಣ್ ಧವನ್‌ಗೆ (Varun Dhawan) ‘ಸೀತಾರಾಮಂ’ ಸುಂದರಿ ನಾಯಕಿಯಾಗಿದ್ದು, ಅವರ ಪಾತ್ರಕ್ಕೂ ಭಾರೀ ಪ್ರಾಮುಖ್ಯತೆ ಇದೆ. 2ನೇ ನಾಯಕಿಯ ಹುಡುಕಾಟದಲ್ಲಿದೆ ಚಿತ್ರತಂಡ. ಇದನ್ನೂ ಓದಿ:ದುಬೈನಲ್ಲಿ ಅಲ್ಲು ಅರ್ಜುನ್ ಮೇಣದ ಪ್ರತಿಮೆ ಅನಾವರಣ
Advertisement
ವರುಣ್-ಮೃಣಾಲ್ ಮೊದಲ ಬಾರಿಗೆ ಸಿನಿಮಾಗೆ ಜೊತೆಯಾಗಿ ನಟಿಸುತ್ತಿದ್ದಾರೆ. ಇದೊಂದು ಕಾಮಿಡಿ ಕಮ್ ರೊಮ್ಯಾಂಟಿಕ್ ಚಿತ್ರವಾಗಿದೆ. ಮೇ ಅಥವಾ ಜೂನ್‌ನಿಂದ ಚಿತ್ರೀಕರಣ ಶುರುವಾಗಲಿದೆ. ಇಬ್ಬರ ಜೋಡಿ ತೆರೆಯ ಮೇಲೆ ನೋಡೋಕೆ ಫ್ಯಾನ್ಸ್ ಕಾಯುತ್ತಿದ್ದಾರೆ.
ಈ ಚಿತ್ರದ ಜೊತೆಗೆ ಬಾಲಿವುಡ್‌ನ ‘ಪೂಜಾ ಮೇರಿ ಜಾನ್’ ಎಂಬ ಸಿನಿಮಾದಲ್ಲಿ ಮೃಣಾಲ್ ಠಾಕೂರ್ (Mrunal Thakur) ಕಾಣಿಸಿಕೊಂಡಿದ್ದಾರೆ. ತೆಲುಗಿನಲ್ಲಿಯೂ ಸ್ಟಾರ್ ನಟರ ಜೊತೆ ತೆರೆಹಂಚಿಕೊಳ್ತಿದ್ದಾರೆ.