ಮುದ್ದು ಮಗಳ ವಿಡಿಯೋ ಹಂಚಿಕೊಂಡ ‘ಆರ್‌ಆರ್‌ಆರ್’ ಹೀರೋ ರಾಮ್ ಚರಣ್

Public TV
2 Min Read
ram charan

‘ಆರ್‌ಆರ್‌ಆರ್’ (RRR) ಸಿನಿಮಾದ ಸೂಪರ್ ಸ್ಟಾರ್ ರಾಮ್‌ಚರಣ್ (Ram Charan) ಅವರು ಮುದ್ದು ಮಗಳು ಮನೆಗೆ ಬಂದಿರುವ ಸಂತಸದಲ್ಲಿದ್ದಾರೆ. ಕಳೆದ ಜೂನ್ 20ಕ್ಕೆ ಪತ್ನಿ ಉಪಾಸನಾ (Upasana) ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಮಗಳು ಹುಟ್ಟಿ ಒಂದು ತಿಂಗಳ ನಂತರ ಈಗ ಪುತ್ರಿಯ ಮುದ್ದಾದ ವೀಡಿಯೋ ಹಂಚಿಕೊಂಡಿದ್ದಾರೆ.

ram charan 2ಗ್ಲೋಬಲ್ ಸ್ಟಾರ್ ರಾಮ್ ಚರಣ್ ಅವರ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಮದುವೆಯಾಗಿ 11 ವರ್ಷಗಳ ನಂತರ ಮೊದಲ ಮಗುವಿನ ಆಗಮನ ಸಂತಸದಲ್ಲಿದ್ದಾರೆ. ಇತ್ತೀಚಿಗಷ್ಟೇ ಕ್ಲಿನ್ ಕಾರ ಕೊನಿಡೆಲಾ(Klin Kaara Konidela) ಎಂದು ಮಗಳಿಗೆ ನಾಮಕರಣ ಮಾಡಿದ್ದಾರೆ.

ram charan 1

ಮೆಗಾಸ್ಟಾರ್ ಚಿರಂಜೀವಿ ಪುತ್ರ (Megastar Chiranjeevi) ರಾಮ್ ಚರಣ್ ತೇಜ ಅವರು ‘ಮಹಾತೀರ’ ಚಿತ್ರದ ಮೂಲಕ ಪದಾರ್ಪಣೆ ಮಾಡಿ ಇಂದು ಸೌತ್ ಸೂಪರ್ ಸ್ಟಾರ್ ಆಗಿ ಬೆಳೆದಿದ್ದಾರೆ. ಅವರು ನಟಿಸಿದ ‘ಆರ್‌ಆರ್‌ಆರ್’ ಚಿತ್ರವು ಈ ವರ್ಷದ ಆಸ್ಕರ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಅವರು 2012ರಲ್ಲಿ ಅಪೋಲೋ ಹಾಸ್ಪಿಟಲ್ಸ್ ಗ್ರೂಪ್‌ನ ಅಧ್ಯಕ್ಷ ಪ್ರತಾಪ್ ಸಿ. ರೆಡ್ಡಿ ಅವರ ಮೊಮ್ಮಗಳು ಉಪಾಸನಾ ಕಾಮಿನೇನಿ ಅವರನ್ನು ವಿವಾಹವಾದರು.

ram charan

ರಾಮ್ ಚರಣ್ ಜೊತೆ ಮದುವೆಯಾದಾಗ ಉಪಾಸನಾ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರು. ‘ಮಗಧೀರ’ ಚಿತ್ರದ ನಂತರ ರಾಮ್ ಚರಣ್ ಖ್ಯಾತಿ ಉತ್ತುಂಗದಲ್ಲಿದ್ದ ಸಮಯ. ಇವರನ್ನು ಮದುವೆಯಾದ ಉಪಾಸನಾ ಅವರಿಗೆ ಸ್ವಲ್ಪವೂ ಸೂಕ್ತವಲ್ಲ ಎಂದು ಹಲವರು ಹೇಳಿದ್ದರು. ಮದುವೆಯಾಗಿ ಹಲವು ವರ್ಷಗಳಾದರೂ ಅವರು ಇನ್ನೂ ಮಕ್ಕಳಾಗಿಲ್ಲ ಎಂಬ ವಿಚಾರವಾಗಿ ಅನೇಕ ಟೀಕೆಗಳನ್ನು ಎದುರಿಸಿದರು. ಕೆಲವು ವರ್ಷಗಳ ಹಿಂದೆ ಉಪಾಸನ ಅವರನ್ನು ತಡವಾಗಿ ಗರ್ಭಧಾರಣೆಯ ಬಗ್ಗೆ ಪ್ರಶ್ನಿಸಲಾಯಿತು. ಅದಕ್ಕೆ ರಾಮ್‌ಚರಣ್ ಪತ್ನಿ ಪ್ರತಿಕ್ರಿಯೆ ನೀಡಿದ್ದರು. ವೃತ್ತಿಪರವಾಗಿ ಒಂದೊಳ್ಳೆಯ ಸ್ಥಾನಕ್ಕೆ ಹೋದ ಮೇಲೆ ಮಗು ಹೊಂದುವ ಬಗ್ಗೆ ಯೋಚನೆ ಮಾಡುತ್ತೇವೆ ಎಂದು ಹೇಳಿದ್ದರು. ಇದನ್ನೂ ಓದಿ:‘ಸಲಾರ್’ ಪಾರ್ಟ್‌ 2 ಬರೋದು ಪಕ್ಕಾ- ಬಾಯ್ಬಿಟ್ಟ ಜಗಪತಿ ಬಾಬು

ಈಗ 11 ವರ್ಷಗಳ ನಂತರ ರಾಮ್ ಚರಣ್- ಉಪಾಸನಾ ಬದುಕಲ್ಲಿ ಮುದ್ದು ಮಗಳ ಆಗಮನವಾಗಿದೆ. ಮೆಗಾಸ್ಟಾರ್ ಕುಟುಂಬದಲ್ಲಿ ಮಗಳು ಹುಟ್ಟಿದ ದಿನ ಖುಷಿ ಹೇಗಿತ್ತು. ರಾಮ್ ಚರಣ್- ಉಪಾಸನಾ ತಮ್ಮ ಸಂತಸದ ಬಗ್ಗೆ ಈ ವೀಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಮಗಳ ವೀಡಿಯೋ ರಿವೀಲ್ ಮಾಡಿದ್ದಾರೆ.

Share This Article