Connect with us

ರಾಜ್ಯಾದ್ಯಂತ `ರಾಜಕುಮಾರ’ನ ಹವಾ- ದಾವಣಗೆರೆಯಲ್ಲಿ ಅಪ್ಪು ಅಭಿಮಾನಿಗಳಿಗೆ ಲಾಠಿಚಾರ್ಜ್

ರಾಜ್ಯಾದ್ಯಂತ `ರಾಜಕುಮಾರ’ನ ಹವಾ- ದಾವಣಗೆರೆಯಲ್ಲಿ ಅಪ್ಪು ಅಭಿಮಾನಿಗಳಿಗೆ ಲಾಠಿಚಾರ್ಜ್

– ಮಧ್ಯರಾತ್ರಿಯಿಂದಲೇ ಭಾರೀ ಸಡಗರ

ಬೆಂಗಳೂರು: ರಾಜ್ಯಾದ್ಯಂತ ಪವರ್ ಸ್ಟಾರ್ ಪುನಿತ್ ರಾಜ್‍ಕುಮಾರ್ ಅಭಿನಯದ `ರಾಜಕುಮಾರ’ ಸಿನಿಮಾದ ಹವಾ ಜೋರಾಗಿದೆ. ದಾವಣಗೆರೆ, ಬಳ್ಳಾರಿ ಶೀವಮೊಗ್ಗ ಸೇರಿದಂತೆ ಹಲವೆಡೆ ಮಧ್ಯರಾತ್ರಿಯೇ ಪ್ರದರ್ಶನ ಕಂಡಿದೆ. ದಾವಣಗೆರೆಯಲ್ಲಂತೂ ರಾಜಕುಮಾರನನ್ನು ನೋಡಲು ಸಾವಿರಾರು ಅಭಿಮಾನಿಗಳು ಮುಗಿಬಿದ್ದಿದ್ರು. ಗೀತಾಂಜಲಿ ಹಾಗೂ ಪುಷ್ಪಾಂಜಲಿ ಚಿತ್ರಮಂದಿರಗಳ ಬಳಿ ನೂರಾರು ಅಭಿಮಾನಿಗಳು ರಾತ್ರಿ 9 ಗಂಟೆಯಿಂದಲೇ ಟಿಕೆಟ್‍ಗಾಗಿ ಕ್ಯೂ ನಿಂತಿದ್ದರು. ಆದ್ರೆ, ಟಿಕೆಟ್ ಹಂಚಿಕೆ ತಡವಾದ ಕಾರಣ ಅಭಿಮಾನಿಗಳು ಟಿಕೆಟ್ ಕೌಂಟರ್‍ಗೆ ನುಗ್ಗಿ ದಾಂಧಲೆ ನಡೆಸಲು ಯತ್ನಿಸಿದ್ರು. ಈ ವೇಳೆ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ರು.

ಕೊಪ್ಪಳದಲ್ಲಿ ಕೂಡ ಕಲ್ಲು ತೂರಾಟ ನಡೆದಿದೆ. ಗಂಗಾವತಿಯ ಪ್ರಶಾಂತ ಚಿತ್ರಮಂದಿರದಲ್ಲಿ ರಾತ್ರಿ 1 ಗಂಟೆಗೆ ಆರಂಭವಾಗಬೇಕಿದ್ದ ರಾಜಕುಮಾರ ಸಿನಿಮಾ ಶೋ ಬೆಳಗಿನ ಜಾವ 4ಕ್ಕೆ ಆರಂಭವಾಯ್ತು. ಇದ್ರಿಂದ ರೊಚ್ಚಿಗೆದ್ದ ಅಭಿಮಾನಿಗಳು ಚಿತ್ರಮಂದಿರದ ಮೇಲೆ ಕಲ್ಲುತೂರಾಟ ಮಾಡಿದ್ದಾರೆ. ಘಟನೆಯ ಚಿತ್ರ ಥಿಯೇಟರ್‍ನ ಗಾಜು ಪುಡಿಪುಡಿಯಾಗಿವೆ. ಇನ್ನು ಚಿತ್ರ ಮಂದಿರದ ಎದುರು ಅಭಿಮಾನಿಗಳು ಅಪ್ಪುಗೆ ಜೈಕಾರ ಹಾಕಿ ಹರ್ಷ ವ್ಯಕ್ತಪಡಿಸಿದರು.

ಬಳ್ಳಾರಿಯಲ್ಲಿ ಸಿನಿಮಾಗಳು ನಸುಕಿನ ಜಾವ ತರೆಕಾಣೋದು ಮಾಮೂಲು. ಆದ್ರೆ ಪುನೀತ್ ಅಭಿಮಾನಿಗಳ ಅಬ್ಬರಕ್ಕೆ ಮಣಿದ ಶಿವ ಮತ್ತು ಗಂಗಾ ಚಿತ್ರಮಂದಿರದ ಮಾಲೀಕರು ಮಧ್ಯರಾತ್ರಿ 12ಕ್ಕೆ ಚಿತ್ರ ಪ್ರದರ್ಶನ ಮಾಡಿದ್ರು. ಸಿನಿಮಾ ನೋಡಲು ಪುನೀತ್ ಅಭಿಮಾನಿಗಳು ಮುಗಿಬಿದ್ದಿದ್ರು. ಟಿಕೇಟ್‍ಗೆ ನೂಕುನುಗ್ಗಲು ಏರ್ಪಟ್ಟಿತ್ತು. ಚಿತ್ರಮಂದಿರದ ಎದುರು ಅಪ್ಪು ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ರು. ಒಟ್ಟಿನಲ್ಲಿ ರಾಜಕುಮಾರ್ ಚಿತ್ರದ ಬಗ್ಗೆ ಬಳ್ಳಾರಿಯಲ್ಲಿ ಪಾಸೀಟವ್ ರೆಸ್ಪಾನ್ಸ್ ಕಂಡು ಬಂತು.

ತುಮಕೂರು, ಶಿವಮೊಗ್ಗ ಸೇರಿದಂತೆ ರಾಜ್ಯದ ಕೆಲವೆಡೆ ಗುರುವಾರ ರಾತ್ರಿನೇ `ರಾಜಕುಮಾರ’ನ ಮೊದಲ ಪ್ರದರ್ಶನ ನಡೆದಿದೆ. ಎರಡೂ ಕಡೆ ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿತ್ತು.

ಬೆಂಗಳೂರಿನ ನರ್ತಕಿ ಚಿತ್ರಮಂದಿರಲ್ಲಿ ತಡ ರಾತ್ರಿ ಹಬ್ಬದ ವಾತವಾರಣ ನಿರ್ಮಾಣವಾಗಿತ್ತು. ಇಂದು ಸಿನಿಮಾ ನೋಡೋಕೆ ಬರೋ ವಿಕ್ಷಕರಿಗೆ ಅಖಿಲ ಕರ್ನಾಟಕ ಶಿವರಾಜ್‍ಕುಮಾರ್ ಅಭಿಮಾನಿಗಳ ಸಂಘದ ಮಂದಿ ಹಬ್ಬದ ಸಿಹಿ ಊಟ ಹಾಗು ಯುಗಾದಿಯ ಹೊಳಿಗೆ ಮತ್ತು ಬೇವು ಬೆಲ್ಲವನ್ನ ಹಂಚಲಿದ್ದಾರೆ. ರಾತ್ರಿಯೇ 20 ಅಡುಗೆ ಭಟ್ಟರನ್ನ ಕರೆಸಿ ಚಿತ್ರಮಂದಿರದ ಎದುರೇ 8 ಸಾವಿರ ಹೊಳಿಗೆಯನ್ನ ಮಾಡಿಸಿದ್ದಾರೆ.

ಇದನ್ನೂ ಓದಿ : `ರಾಜಕುಮಾರ’ ಚಿತ್ರದ ಮೇಕಿಂಗ್ ವಿಡಿಯೋ ರಿಲೀಸ್

ಇದನ್ನೂ ಓದಿ: ಸ್ಯಾಂಡಲ್‍ವುಡ್‍ನಲ್ಲಿ ದಾಖಲೆ ಬರೆದ ಅಪ್ಪು ಡ್ಯಾನ್ಸ್ ವಿಡಿಯೋ

Advertisement
Advertisement