Connect with us

ಸ್ಯಾಂಡಲ್‍ವುಡ್‍ನಲ್ಲಿ ದಾಖಲೆ ಬರೆದ ಅಪ್ಪು ಡ್ಯಾನ್ಸ್ ವಿಡಿಯೋ

ಸ್ಯಾಂಡಲ್‍ವುಡ್‍ನಲ್ಲಿ ದಾಖಲೆ ಬರೆದ ಅಪ್ಪು ಡ್ಯಾನ್ಸ್ ವಿಡಿಯೋ

ಬೆಂಗಳೂರು:ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್  ಅಭಿನಯದ `ರಾಜಕುಮಾರ’ ಚಿತ್ರದ ವಿಡಿಯೋ ಹಾಡಿನ ಟೀಸರ್ ಸ್ಯಾಂಡಲ್‍ವುಡ್‍ನಲ್ಲಿ ದಾಖಲೆ ಬರೆದಿದೆ.

ಪುನೀತ್ ರಾಜ್‍ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ರಾಜಕುಮಾರ ಚಿತ್ರದ ಡ್ಯಾನ್ಸಿಂಗ್ ನಂಬರ್ ಬಿಟ್ ಇರುವ ಅಪ್ಪು ಡ್ಯಾನ್ಸ್ ವಿಡಿಯೋ ಟೀಸರನ್ನು ಮಾರ್ಚ್ 16ರ ರಾತ್ರಿ 9 ಗಂಟೆಗೆ ಯೂ ಟ್ಯೂಬ್‍ನಲ್ಲಿ ರಿಲೀಸ್ ಮಾಡಲಾಗಿತ್ತು. ಈ ಹಾಡು ಒಂದೇ ದಿನದಲ್ಲಿ 7 ಲಕ್ಷಕ್ಕೂ ಅಧಿಕ ವ್ಯೂ ಕಂಡಿದೆ. ಈ ಮೂಲಕ ಒಂದೇ ದಿನದಲ್ಲಿ ಅತಿ ಹೆಚ್ಚು ವ್ಯೂ ಪಡೆದ ಕನ್ನಡದ ಮೊದಲ ವಿಡಿಯೋ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇಲ್ಲಿಯವರೆಗೆ ಚೌಕ ಚಿತ್ರದ ಅಲ್ಲಾಡ್ಸು ಅಲ್ಲಾಡ್ಸು ಹಾಡು ಯೂಟ್ಯೂಬ್‍ನಲ್ಲಿ ಒಂದೇ ದಿನದಲ್ಲಿ ನಾಲ್ಕು ಲಕ್ಷ ವೀಕ್ಷಣೆಯಾಗಿ ಸದ್ದು ಮಾಡಿತ್ತು. ಈ ದಾಖಲೆಯನ್ನು ರಾಜಕುಮಾರ ಡ್ಯಾನ್ಸ್ ವಿಡಿಯೋ ಟೀಸರ್ ಈಗ ಬ್ರೇಕ್ ಮಾಡಿದೆ.

ಮಾರ್ಚ್ 9ರಂದು ಬಿಡುಗಡೆಯಾದ ರಾಜಕುಮಾರ ಅಫಿಶಿಯಲ್ ಮೇಕಿಂಗ್ ವಿಡಿಯೋ 10 ಲಕ್ಷ ವ್ಯೂ ಕಂಡಿದ್ದರೆ, ಫೆ.17ರಂದು ಬಿಡುಗಡೆಯಾಗಿದ್ದ ರಾಜಕುಮಾರ ಚಿತ್ರದ ಟೈಟಲ್ ಹಾಡನ್ನು ಕೇವಲ 6 ಗಂಟೆಯಲ್ಲಿ 1 ಲಕ್ಷ ಜನ ವೀಕ್ಷಿಸಿದ್ದರು.

‘ಮಿಸ್ಟರ್ ಅಂಡ್ ಮಿಸಸ್ ರಾಮಚಾರಿ’ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ನೀಡಿದ್ದಾರೆ. ಇದೇ ಮೊದಲ ಬಾರಿಗೆ ದಕ್ಷಿಣದ ಸುಂದರಿ ಪ್ರಿಯಾ ಆನಂದ್ ಕನ್ನಡ ಚಿತ್ರದಲ್ಲಿ ನಟಿಸಿದ್ದು, ಚೊಚ್ಚಲ ಚಿತ್ರದಲ್ಲೇ ಪುನೀತ್ ರಾಜ್ ಕುಮಾರ್‍ಗೆ ನಾಯಕಿಯಾಗಿ ಕಾಣಿಸಿಕೊಡಿದ್ದಾರೆ.

ಪ್ರಕಾಶ್ ರೈ, ಅನಂತ್ ನಾಗ್, ಅಚ್ಯುತ್ ಕುಮಾರ್, ಸಾಧುಕೋಕಿಲಾ, ಚಿಕ್ಕಣ್ಣ, ರಂಗಾಯಣ ರಘು, ತಮಿಳು ನಟ ಶರತ್ ಕುಮಾರ್, ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್ ವೇಳೆ ಹೆಲಿಕಾಪ್ಟರ್‍ನಿಂದ ಹಾರಿ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಮುಳುಗಿ ಮೃತಪಟ್ಟಿದ್ದ ಅನಿಲ್ ಸೇರಿದಂತೆ ಸೇರಿದಂತೆ ಹಲವು ಮಂದಿ ಅಭಿನಯಿಸಿದ್ದಾರೆ.

ಅಭಿಮಾನಿಗಳಿಗೆ ಯುಗಾದಿ ಹಬ್ಬದ ಉಡುಗೊರೆಯಾಗಿ ಮಾರ್ಚ್ 24 ರಂದು ರಾಜ್ಯದ 300ಕ್ಕೂ ಹೆಚ್ಚು ಚಿತ್ರ ಮಂದಿರದಲ್ಲಿ ರಾಜಕುಮಾರ ಬಿಡುಗಡೆಯಾಗಲಿದೆ. ಹೀಗಾಗಿ ಇಲ್ಲಿ ಅಪ್ಪು ಡ್ಯಾನ್ಸ್ ವಿಡಿಯೋ, ರಾಜುಕುಮಾರ ಟ್ರೇಲರ್ , ಪುನೀತ್ ರಾಜುಕುಮಾರ್ ಜೊತೆ ಪಬ್ಲಿಕ್ ಟಿವಿ ನಡೆಸಿದ ಸಂದರ್ಶನದ ವಿಡಿಯೋವನ್ನು ನೀಡಲಾಗಿದೆ.

ಅಪ್ಪು ಡ್ಯಾನ್ಸ್ ವಿಡಿಯೋ

ಪಬ್ಲಿಕ್ ಟಿವಿ ಸಂದರ್ಶನ ವಿಡಿಯೋ ಭಾಗ- 1

https://www.youtube.com/watch?v=nnwjtH5K0zc
ಪಬ್ಲಿಕ್ ಟಿವಿ ಸಂದರ್ಶನ ವಿಡಿಯೋ ಭಾಗ-2

https://www.youtube.com/watch?v=SSbp4yNzUGo

 

Advertisement
Advertisement