ಟಾಲಿವುಡ್ ನಟ ನಾಗಚೈತನ್ಯ (Naga Chaitanya) ಇಂದು (ನ.23) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅವರ ಬರ್ತ್‌ಡೇಯಂದು ಪ್ಯಾನ್ ಇಂಡಿಯಾ ಪ್ರಾಜೆಕ್ಟ್ ಬಗ್ಗೆ ಬಿಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಪೌರಾಣಿಕ ಸಿನಿಮಾ ಮಾಡಲು ನಟ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇದನ್ನೂ ಓದಿ:Pushpa 2: ಅಲ್ಲು ಅರ್ಜುನ್, ಶ್ರೀಲೀಲಾ ಐಟಂ ಹಾಡಿನ ಪ್ರೋಮೋ ರಿಲೀಸ್
ನಾಗಚೈತನ್ಯ ನಟನೆಯ ಪ್ಯಾನ್ ಇಂಡಿಯಾ ಸಿನಿಮಾ ‘ತಾಂಡೇಲ್’ ರಿಲೀಸ್‌ಗೆ ರೆಡಿಯಿದೆ. ಈ ಬೆನ್ನಲ್ಲೇ ಹೊಸ ಚಿತ್ರವನ್ನು ನಟ ಒಪ್ಪಿಕೊಂಡಿದ್ದಾರೆ. ನಿಗೂಢವಾಗಿರುವ ಕಣ್ಣಿನ ಚಿತ್ರವಿರುವ ಪೋಸ್ಟರ್‌ನಲ್ಲಿ ನಾಗಚೈತನ್ಯ ಲುಕ್ ನೋಡುಗರಲ್ಲಿ ಕುತೂಹಲ ಕೆರಳಿಸಿದೆ. ಈ ಚಿತ್ರವನ್ನು ‘ವಿರೂಪಾಕ್ಷ’ ಡೈರೆಕ್ಟರ್ ಕಾರ್ತಿಕ್ ದಂಡು ನಿರ್ದೇಶನ ಮಾಡಿದ್ದಾರೆ.
View this post on Instagram
ಅಂದಹಾಗೆ, ನಾಗಚೈತನ್ಯ ಅವರು ಶೋಭಿತಾ (Sobhita) ಜೊತೆ ಇದೇ ಡಿ.4ರಂದು ಹಸೆಮಣೆ ಏರೋಕೆ ರೆಡಿಯಾಗಿದ್ದಾರೆ. ತೆರೆಮರೆಯಲ್ಲಿ ಮದುವೆ ತಯಾರಿ ಕೂಡ ಜೋರಾಗಿದೆ. ಕುಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಮದುವೆ ಹೈದರಾಬಾದ್‌ನಲ್ಲಿ ಸರಳವಾಗಿ ಜರುಗಲಿದೆ.