ಸಮಂತಾ ಮತ್ತು ನಾಗ ಚೈತನ್ಯ ಡಿವೋರ್ಸ್ ನಂತರ ಇವರಿಬ್ಬರ ಬದುಕಿನಲ್ಲೂ ಹಲವು ಬದಲಾವಣೆಗಳು ಆಗಿವೆ. ಈ ನೋವಿನಿಂದ ಇಬ್ಬರೂ ಆಚೆ ಬಂದು ತಮ್ಮ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಸಮಂತಾ ನಟನೆಯ ಸಿನಿಮಾಗಳು ಬಾಕ್ಸ್ ಆಫೀಸಿನಲ್ಲಿ ಗೆಲ್ಲುತ್ತಿವೆ. ಅತೀ ಹೆಚ್ಚು ಅವಕಾಶಗಳು ಕೂಡ ಅವರನ್ನು ಹುಡುಕಿಕೊಂಡು ಬರುತ್ತಿವೆ. ಮೊದಲಿಗಿಂತಲೂ ಇದೀಗ ಹೆಚ್ಚು ಜನಪ್ರಿಯರಾಗುತ್ತಿದ್ದಾರೆ ಸಮಂತಾ.
ಆದರೆ, ನಾಗ ಚೈತನ್ಯ ಬದುಕಿನಲ್ಲಿ ಇದು ಉಲ್ಟಾ ಆಗುತ್ತಿದೆ. ಡಿವೋರ್ಸ್ ನಂತರ ಇದೇ ಮೊದಲ ಬಾರಿಗೆ ನಾಗ ಚೈತನ್ಯ ನಟನೆಯ ‘ಥ್ಯಾಂಕ್ ಯೂ’ ಚಿತ್ರ ರಿಲೀಸ್ ಆಗಿದ್ದು, ಅಭಿಮಾನಿಗಳಿಗೆ ಈ ಸಿನಿಮಾ ನಿರಾಸೆ ಮೂಡಿಸಿದೆ. ಅಷ್ಟೇನೂ ಹೇಳಿಕೊಳ್ಳುವಂತಹ ಪ್ರತಿಕ್ರಿಯೆ ಕೂಡ ಸಿಕ್ಕಿಲ್ಲ. ಬಾಕ್ಸ್ ಆಫೀಸಿನಲ್ಲಿ ಈ ಸಿನಿಮಾ ಮಕಾಡೆ ಮಲಗಿದ್ದರಿಂದ ನಾಗ ಚೈತನ್ಯ ಅವರಿಗೆ ಸಹಜವಾಗಿಯೇ ನೋವು ತಂದಿದೆ. ಅಭಿಮಾನಿಗಳು ಕೂಡ ನೆಗೆಟಿವ್ ರಿವಿವ್ಯೂ ನೀಡಿರುವುದರಿಂದ ತೀರಾ ಅಪ್ ಸೆಟ್ ಆಗಿದ್ದಾರೆ ಎನ್ನುವ ಸುದ್ದಿಯಾಗಿದೆ. ಇದನ್ನೂ ಓದಿ:ಮಾದೇವನಿಗೆ ಸೋನಲ್ ಮೊಂಥೆರೋ ಜೋಡಿ
ಅಮೀರ್ ಖಾನ್ ನಟನಯೆ ಲಾಲ್ ಸಿಂಗ್ ಛಡ್ಡಾ ಸಿನಿಮಾದಲ್ಲಿ ನಾಗ ಚೈತನ್ಯ ನಟಿಸಿದ್ದಾರೆ. ಈ ಸಿನಿಮಾದ ಟ್ರೈಲರ್ ಸಖತ್ ವೈರಲ್ ಕೂಡ ಆಗಿದೆ. ನಿರೀಕ್ಷೆಯ ಸಿನಿಮಾಗಳ ಲಿಸ್ಟ್ ನಲ್ಲೂ ಈ ಸಿನಿಮಾವಿದೆ. ಹಾಗಾಗಿ ಥ್ಯಾಂಕ್ ಯೂ ಸೋಲನ್ನು ಈ ಸಿನಿಮಾ ಮರೆಸಬಹುದಾ ಎನ್ನುವ ಚರ್ಚೆ ಕೂಡ ನಡೆದಿದೆ. ಒಂದು ಕಡೆ ಸಮಂತಾ ಏರುದಿಕ್ಕಿನತ್ತ ಮುಖ ಮಾಡಿದ್ದರೆ, ನಾಗ ಚೈತನ್ಯ ಸೋಲುಗಳಿಂದ ಕಂಗೆಟ್ಟಿದ್ದಾರೆ. ಆದರೂ, ಲಾಲ್ ಸಿಂಗ್ ಛಡ್ಡಾ ಸಿನಿಮಾದ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.