Connect with us

Cinema

ರಶ್ಮಿಕಾರ ‘ಇಕಿಂ ಇಕಿಂ ಕಾವಾಲೇ’ ಮೇಲೆ ಧನಂಜಯ್‍ಗೆ ಲವ್!

Published

on

ಬೆಂಗಳೂರು: ಡಾಲಿ ಧನಂಜಯ್ ಅವರಿಗೆ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಅವರ ಹಾಡಿನ ಮೇಲೆ ಲವ್ ಆಗಿದೆ.

ರಶ್ಮಿಕಾ ಮಂದಣ್ಣ ಕನ್ನಡ ಹಾಗೂ ತೆಲುಗು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ ರಶ್ಮಿಕಾ ‘ಗೀತಾ ಗೋವಿದಂ’ ತೆಲುಗು ಚಿತ್ರದ ಲಿರಿಕಲ್ ಹಾಡೊಂದು ಬಿಡುಗಡೆಯಾಗಿದ್ದು, ಈ ಹಾಡು ಸಾಕಷ್ಟು ವೈರಲ್ ಆಗಿದೆ. ರಶ್ಮಿಕಾ ಅವರ ಈ ವೈರಲ್ ಹಾಡು ಧನಂಜಯ್ ಅವರಿಗೆ ಇಷ್ಟವಾಗಿದ್ದು, ಸ್ವತಃ ಧನಂಜಯ್ ಟ್ವೀಟ್ ಮಾಡಿ ರಶ್ಮಿಕಾ ಬಳಿ ಹೇಳಿಕೊಂಡಿದ್ದಾರೆ.

“ರಶ್ಮಿಕಾ ನನಗೆ ‘ಇಕಿಂ ಇಕಿಂ ಕಾವಾಲೇ’ ಹಾಡಿನ ಮೇಲೆ ಲವ್ ಆಗಿದೆ. ಈ ಹಾಡನ್ನು ನಾನು ಸಾಕಷ್ಟು ಬಾರಿ ರಿಪೀಟ್ ಮೋಡ್‍ನಲ್ಲಿ ಕೇಳುತ್ತಿದ್ದೇನೆ. ನಿಮ್ಮ ‘ಗೀತಾ ಗೋವಿದಂ’ ಚಿತ್ರಕ್ಕೆ ಆಲ್ ದಿ ಬೆಸ್ಟ್” ಎಂದು ಡಾಲಿ ಧನಂಜಯ್ ಟ್ವೀಟ್ ಮಾಡಿದ್ದಾರೆ.

ಗೀತಾ ಗೋವಿದಂ ಚಿತ್ರದಲ್ಲಿ ರಶ್ಮಿಕಾಗೆ ನಾಯಕನಾಗಿ ವಿಜಯ್ ದೇವರಕೊಂಡ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಹಾಡು ಯೂಟ್ಯೂಬ್‍ನಲ್ಲಿ ಸಾಕಷ್ಟು ಹಿಟ್ ಆಗಿದೆ. ಭಾಷೆ ಗೊತ್ತಿಲ್ಲದವರು ಈ ಹಾಡನ್ನು ಕೇಳಿ ಇಷ್ಟಪಡುತ್ತಿದ್ದಾರೆ. ಸದ್ಯ ಈ ಹಾಡು ಇದುವರೆಗೂ 17.3 ಮಿಲಿಯನ್ ವ್ಯೂ ಪಡೆದಿದೆ. ಇದನ್ನೂ ಓದಿ: ಸಾನ್ವಿ ಟೀಚರ್ ರಶ್ಮಿಕಾ ಮಂದಣ್ಣ ‘ಗೀತಾ ಗೋವಿಂದಂ’ ಟೀಸರ್ ಸೂಪರ್ ಹಿಟ್!

ಇತ್ತ ಸಿನಿಮಾದ ಟೀಸರ್ ಬಿಡುಗಡೆಯಾದ 7 ಗಂಟೆಯಲ್ಲಿ 14 ಲಕ್ಷ ವ್ಯೂ ಆಗಿದ್ದು, ನಂ.1 ಟ್ರೆಂಡಿಂಗ್ ನಲ್ಲಿದೆ. ಕನ್ನಡದ ವರನಟ ರಾಜ್ ಕುಮಾರ್ ಅವರ ಎಂದೆಂದೂ ನಿನ್ನನು ಮರೆತು ನಾನಿರಲಾರೆ? ಹಾಡಿನ ತೆಲುಗು ಟ್ಯೂನ್ ನೊಂದಿಗೆ ಟೀಸರ್ ಆರಂಭವಾಗುತ್ತದೆ.

ಸದ್ಯ ಈ ಚಿತ್ರವನ್ನು ಪರುಶರಾಮ್ ನಿರ್ದೇಶನ ಮಾಡಿದ್ದು, ಗೋಪಿ ಸುಂದರ್ ಸಂಗೀತ ನೀಡಿದ್ದಾರೆ. ಲಿರಿಕಲ್ ವಿಡಿಯೋ ಸಾಂಗ್ ಮೂಲಕವೇ ಈ ಹಾಡು ಸಾಕಷ್ಟು ವೈರಲ್ ಆಗಿದೆ. ಸದ್ಯ ಈ ಸಿನಿಮಾ ರಶ್ಮಿಕಾ ಅವರ ಎರಡನೇ ತೆಲುಗು ಸಿನಿಮಾ ಆಗಿದ್ದು, ಇದೇ ಆಗಷ್ಟ್ 15ಕ್ಕೆ ಚಿತ್ರ ಬಿಡುಗಡೆಯಾಗಲಿದೆ.

Click to comment

Leave a Reply

Your email address will not be published. Required fields are marked *