ನಟಿ ಅನನ್ಯ ಪಾಂಡೆ ಮತ್ತು ನಟ ವಿಜಯ್ ದೇವರಕೊಂಡ ‘ಕಾಫಿ ವಿತ್ ಕರಣ್’ ಶೋ ನಲ್ಲಿ ಖುಲ್ಲಂ ಖುಲ್ಲಾ ಆಗಿ ಮಾತನಾಡಿದ್ದಾರೆ. ಕರಣ್ ಜೋಹಾರ್ ಕೇಳಿದ ಅಷ್ಟೂ ಪ್ರಶ್ನೆಗಳಿಗೂ ಯಾವುದೇ ಮುಜಗರ ಪಡದೇ ಎಲ್ಲವಕ್ಕೂ ಉತ್ತರಿಸಿದ್ದಾರೆ. ಅದರಲ್ಲೂ ಡೇಟಿಂಗ್, ಸೆಕ್ಸ್, ಕಾಂಡೋಮ್ ಸೇರಿದಂತೆ ವಯಸ್ಕರರಷ್ಟೇ ನೋಡಿ, ಕೇಳಬಹುದಾದ ಮಾತುಗಳನ್ನು ಅವರು ಆಡಿದ್ದಾರೆ. ಈ ಮಾತುಗಳನ್ನು ಅನನ್ಯ ಪಾಂಡೆ ತಂದೆ, ಬಾಲಿವುಡ್ ನಟರೂ ಆಗಿರುವ ಚಂಕಿ ಪಾಂಡೆ ಅನುಮೋದಿಸಿದ್ದಾರೆ.
Advertisement
ಅನನ್ಯ ಪಾಂಡೆ ಮತ್ತು ವಿಜಯ್ ದೇವರಕೊಂಡ ಒಟ್ಟಾಗಿ ಶೋನಲ್ಲಿ ಭಾಗಿಯಾಗಿದ್ದರು. ಮೊದಲ ಸೆಕ್ಸ್, ಮಾರ್ನಿಂಗ್ ಸೆಕ್ಸ್, ಡೇಟಿಂಗ್, ಅಕ್ರಮ ಸಂಬಂಧ, ಬ್ರೇಕ್ ಅಪ್ ಹೀಗೆ ಕೇವಲ ವಯಸ್ಕರರು ಮಾತ್ರ ಕೇಳಬಲ್ಲಂತಹ ಸಂಗತಿಗಳನ್ನು ಕರಣ್ ಕೇಳಿದರು. ಅಳುಕಿಲ್ಲದೇ ಇಬ್ಬರೂ ಉತ್ತರಿಸಿದ್ದರು. ಅದಕ್ಕೂ ಒಂದು ಹೆಜ್ಜೆ ಮುಂದೆ ಹೋದ ಅನನ್ಯ ಪಾಂಡೆ, ನಟ ವಿಜಯ್ ದೇವರಕೊಂಡ ಅವರನ್ನು ಬೆತ್ತಲೆಯಾಗಿ ನೋಡುವುದಕ್ಕೆ ಇಷ್ಟಪಡುತ್ತೇನೆ ಎಂದು ಅಚ್ಚರಿಯ ಹೇಳಿಕೆ ಕೂಡ ನೀಡಿದ್ದರು. ಇದನ್ನೂ ಓದಿ:ಅಲ್ಲು ಅರ್ಜುನ್ ಪತ್ನಿಯ, ದುಬಾರಿ ಮಿನಿ ಬ್ಯಾಗ್ ಬೆಲೆ ಕೇಳಿದ್ರೆ ಶಾಕ್ ಆಗುತ್ತೀರಾ
Advertisement
Advertisement
ಮಗಳ ಅಷ್ಟೂ ಮಾತುಗಳನ್ನೂ ಕೇಳಿಸಿಕೊಂಡಿರುವ ನಟ ಚಂಕಿ ಪಾಂಡೆ, ‘ನನ್ನ ಮಗಳು ಮಾತನಾಡಿದ್ದರಲ್ಲಿ ಯಾವುದೇ ಆಕ್ಷೇಪಾರ್ಹ ಅಂಶಗಳು ಇರಲಿಲ್ಲ. ಆಕೆ ವಯಸ್ಸಿಗೆ ಬಂದಿರುವ ಹುಡುಗಿ. ಏನು ಮಾತನಾಡಬೇಕು, ಏನು ಮಾತನಾಡಬಾರದು ಎನ್ನುವ ಅರಿವು ಅವಳಿಗೆ ಇದೆ. ಅವಳ ಮಾತಲ್ಲಿ ನನಗೇನೂ ಮುಜಗರ ಕಾಣಿಸಲಿಲ್ಲಿ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ ಚಂಕಿ ಪಾಂಡೆ.