CinemaLatestMain PostSouth cinema

ಅಲ್ಲು ಅರ್ಜುನ್ ಪತ್ನಿಯ, ದುಬಾರಿ ಮಿನಿ ಬ್ಯಾಗ್ ಬೆಲೆ ಕೇಳಿದ್ರೆ ಶಾಕ್ ಆಗುತ್ತೀರಾ

Advertisements

`ಪುಷ್ಪ’ ಸಿನಿಮಾ ಸಕ್ಸಸ್ ನಂತರ ಅಲ್ಲು ಅರ್ಜುನ್‌ಗೆ ಮತ್ತಷ್ಟು ಡಿಮ್ಯಾಂಡ್ ಜಾಸ್ತಿ ಆಗಿದೆ. `ಪುಷ್ಪ 2′ ಸಿನಿಮಾದತ್ತ ಇದೀಗ ಗಮನ ಕೊಡ್ತಿದ್ದಾರೆ. ಇದೀಗ ಅಲ್ಲು ಅರ್ಜುನ್ ಪತ್ನಿ ಸ್ನೇಹಾ ಸುದ್ದಿಯಲ್ಲಿದ್ದಾರೆ. ದುಬಾರಿ ಬ್ಯಾಗ್ ಖರೀದಿಸಿ ನೆಟ್ಟಿಗರ ಗಮನ ಸೆಳೆದಿದ್ದಾರೆ.

ನಟ ಅಲ್ಲು ಅರ್ಜುನ್ ಚಿತ್ರರಂಗದಲ್ಲಿ ಸ್ಟೈಲೀಶ್‌ ಆಗಿ ಗುರುತಿಸಿಕೊಂಡಿದ್ದಾರೆ. ಪತ್ನಿ ಸ್ನೇಹಾ ಕೂಡ ಫ್ಯಾಷನ್ ಕುರಿತು ಆಸಕ್ತಿಯಿದೆ. ಆಗಾಗ ಬಗೆ ಬಗೆಯ ಫೋಟೋಶೂಟ್ ಮೂಲಕ ಸುದ್ದಿಯಾಗುತ್ತಲೇ ಇರುತ್ತಾರೆ. ಈಗ ದುಬಾರಿ ಬ್ಯಾಗಿನ ವಿಚಾರವಾಗಿ ಟಿಟೌನ್‌ನಲ್ಲಿ ಸೌಂಡ್ ಮಾಡ್ತಿದ್ದಾರೆ. ಸ್ನೇಹಾ ಬಳಿಯಿರುವ ಮಿನಿ ಬ್ಯಾಗಿಗೆ 3 ಲಕ್ಷ ರೂಪಾಯಿ ನೀಡಿದ್ದಾರೆ. ಮಿನಿ ಬ್ಯಾಗನ ಅಸಲಿ ರೇಟ್ ಕೇಳಿ ನೆಟ್ಟಿಗರು ದಂಗಾಗಿದ್ದಾರೆ. ಇದನ್ನೂ ಓದಿ:ಮಗಳಿಗೆ ಮುದ್ದಾದ ಹೆಸರಿಟ್ಟ ಪ್ರಣಿತಾ ಸುಭಾಷ್

ಇತ್ತೀಚೆಗಷ್ಟೇ ಸಮಾರಂಭವೊಂದರಲ್ಲಿ ಸ್ನೇಹಾ ಕಾಣಿಸಿಕೊಂಡಿದ್ದರು. ಈ ವೇಳೆ 3 ಲಕ್ಷದ ದುಬಾರಿ ಮಿನಿ ಬ್ಯಾಗ್ ನೆಟ್ಟಿಗರ ಗಮನ ಸೆಳೆದಿದೆ. ಜತೆಗೆ ಬ್ಯಾಗ್ ಬೆಲೆ ಕೇಳಿನೇ ಫ್ಯಾನ್ಸ್ ಶಾಕ್ ಆಗಿದ್ದಾರೆ.

Live Tv

Leave a Reply

Your email address will not be published.

Back to top button