– ಕಾರ್ಯಾಚರಣೆ ನಡೆಸಿ ಅರವಳಿಕೆ ಮದ್ದು ಕೊಟ್ಟು ಸೆರೆಹಿಡಿದ ಅರಣ್ಯ ಸಿಬ್ಬಂದಿ
ಚಾಮರಾಜನಗರ: ರೈತನ ಮೇಲೆ ದಾಳಿ ಮಾಡಿ ಕೊಂದು ತಿಂದಿದ್ದ ಹುಲಿಯನ್ನು ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿ ಕೊನೆಗೂ ಸೆರೆ ಹಿಡಿದಿದ್ದು, ಹಲವು ಗ್ರಾಮಗಳ ರೈತರು, ಜನರು ನಿರಾಳರಾಗಿದ್ದಾರೆ.
ಚಾಮರಾಜನಗರ (Chamarajanagara) ತಾಲೂಕಿನ ಬಡಗಲಪುರದಲ್ಲಿ ರೈತ ಬಸವಣ್ಣ ಮೇಲೆ ದಾಳಿ ಮಾಡಿ ಭಕ್ಷಿಸಿದ್ದ ಹುಲಿಯನ್ನು ಚಾಮರಾಜನಗರ ತಾಲೂಕಿನ ತಾವರೆಕಟ್ಟೆ ಮೋಳೆ ಗ್ರಾಮದ ಮರಗದಕೆರೆ ಬಳಿ ಸಾಕಾನೆಗಳಾದ ಕಂಜನ್ ಮತ್ತು ಈಶ್ವರ್ ಸಹಾಯದಿಂದ ಅರವಳಿಕೆ ಚುಚ್ಚುಮದ್ದು ನೀಡಿ ಸೆರೆ ಹಿಡಿಯಲಾಗಿದೆ. ಸೆರೆ ಹಿಡಿದ ವ್ಯಾಘ್ರವು ಗಂಡಾಗಿದ್ದು, 6 ರಿಂದ 7 ವರ್ಷದ್ದು ಎಂದು ಅಂದಾಜು ಮಾಡಲಾಗಿದೆ. ಇದನ್ನೂ ಓದಿ: ಚಾ.ನಗರ | ಹುಲಿ ದಾಳಿಗೆ ರೈತ ಬಲಿ
ಎರಡು ಡ್ರೋನ್, ಶ್ವಾನದಳ ಮತ್ತು ಹುಲಿ ಜಾಡು ಪತ್ತೆಹಚ್ಚುವ ನುರಿತ ಗಿರಿಜನರು ಸೇರಿದಂತೆ 65ಕ್ಕೂ ಅಧಿಕ ಮಂದಿ ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು ಎಂದು ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎಸ್.ಶ್ರೀಪತಿ ಮಾಹಿತಿ ನೀಡಿದ್ದಾರೆ.
12 ದಿನಗಳಿಂದ ನಿರಂತರ ಕಾರ್ಯಾಚರಣೆ
ಕಳೆದ 14ರ ಸಂಜೆ ಚಾಮರಾಜನಗರ ತಾಲೂಕಿನ ಬಡಗಲಪುರ ಗ್ರಾಮದ ಜಮೀನಿನಲ್ಲಿ ಹುಲಿ ದಾಳಿಗೆ ರೈತ ಬಸವಣ್ಣ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯ ಸಿಬ್ಬಂದಿ ಸೆಪ್ಟೆಂಬರ್ 15 ರಿಂದಲೂ ಹುಲಿ ಸೆರೆ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಇದನ್ನೂ ಓದಿ: ಮದಗಜಗಳ ಕಾದಾಟದಲ್ಲಿ ಗಂಡಾನೆ ಬಲಿ – ಕಳ್ಳರಕೋಬೆ ಹಳ್ಳದಲ್ಲಿ ಕಳೇಬರ ಪತ್ತೆ

