ಅತ್ಯಂತ ಶ್ರೀಮಂತ ಕುಟುಂಬದ ಅನಂತ್ ಅಂಬಾನಿ (Anant Ambani) ಪ್ರೀ-ವೆಡ್ಡಿಂಗ್ (Pre-Wedding) ಕಾರ್ಯಕ್ರಮ ಇಂದಿನಿಂದ ಗುಜರಾತಿನ ಜಾಮ್ ನಗರ್ ದಲ್ಲಿ ಇಂದಿನಿಂದ ನಡೆಯುತ್ತಿದೆ. ಈ ಪ್ರೀ-ವೆಡ್ಡಿಂಗ್ ನ ಆಕರ್ಷಣೆ ಎಂದರೆ ಸುಪ್ರಸಿದ್ಧ ಗಾಯಕಿ ರಿಯಾನಾ (Rihanna) ಅವರ ಸಂಗೀತ ಕಾರ್ಯಕ್ರಮ. ಈ ಕಾರ್ಯಕ್ರಮವನ್ನು ನೀಡುವುದಕ್ಕಾಗಿ ಅವರು ಬರೋಬ್ಬರಿ 4 ಗಾಡಿ ಲಗೇಜ್ ನೊಂದಿಗೆ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾರೆ. ಆ ವಿಡಿಯೋ ವೈರಲ್ ಕೂಡ ಆಗಿದೆ.
ಈ ಕಾರ್ಯಕ್ರಮ ನೀಡುವುದಕ್ಕಾಗಿ ರಿಯಾನಾ ಕೋಟಿ ಕೋಟಿ ಹಣ ಪಡೆದಿದ್ದಾರೆ ಎಂದು ಸುದ್ದಿ ಆಗಿತ್ತು. ಐವತ್ತು ಕೋಟಿಗೂ ಅಧಿಕ ಸಂಭಾವನೆಯಲ್ಲಿ ಅವರು ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಅಷ್ಟೊಂದು ಹಣ ಪಡೆದಿದ್ದರಿಂದ ಕಾರ್ಯಕ್ರಮ ಯಾವ ರೀತಿಯಲ್ಲಿ ಅದ್ಧೂರಿಯಾಗಿ ಇರಬಹುದು ಎಂದು ಊಹಿಸಬಹುದು.
ಅಂಬಾನಿ ಕುಟುಂಬ ಪ್ರೀ-ವೆಡ್ಡಿಂಗ್ ಬಾಲಿವುಡ್ ಸ್ಟಾರ್ ಸೆಲೆಬ್ರಿಟಿಗಳ ದಂಡೇ ಹಾಜರಿ ಹಾಕುತ್ತಿದೆ. ಕೇವಲ ಬಾಲಿವುಡ್ ಸೆಲೆಬ್ರಿಟಿಗಳ ಮಾತ್ರವಲ್ಲ ತಮಿಳು, ತೆಲುಗು, ಮಲಯಾಳಂ ಹೀಗೆ ನಾನಾ ಚಿತ್ರರಂಗದ ಗಣ್ಯರಿಗೆ, ಮಾಜಿ ಮುಖ್ಯಮಂತ್ರಿಗಳಿಗೆ, ನಾನಾ ಕ್ಷೇತ್ರಗಳ ಸಾಧಕರನ್ನು ಈ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿದೆ.
ಅನಂತ್ ಮತ್ತು ರಾಧಿಕಾ ಮದುವೆ ಇದೇ ಜೂನ್ 12ಕ್ಕೆ ಫಿಕ್ಸ್ ಆಗಿದೆ. ಮಾರ್ಚ್ 1ರಿಂದ 3ರವರೆಗೆ ವಿವಾಹ ಪೂರ್ವ ಕಾರ್ಯಕ್ರಮ ನಡೆಯುತ್ತಿವೆ. ಅದಕ್ಕಾಗಿ ಗುಜರಾತ್ನ ಜಾಮ್ ನಗರವನ್ನು ಸಿಂಗರಿಸಲಾಗಿದೆ. ಅನಂತ್ ಪ್ರೀ ವೆಡ್ಡಿಂಗ್ ಮದುವೆ ಸಂಗೀತ, ನೃತ್ಯ ಹೀಗೆ ವಿವಿಧ ರೀತಿಯ ಪ್ರದರ್ಶನಗಳು ಇರಲಿದೆ. ಖ್ಯಾತ ಗಾಯಕ ಬಿ ಪ್ರಾಕ್ ಅವರ ಗಾಯನ ಇರಲಿದೆ.
ಅನಂತ್ ಅಂಬಾನಿ ಮದುವೆಯಾಗಿ ಅದ್ಧೂರಿ ದೇಗುಲ ನಿರ್ಮಿಸಲಾಗಿದೆ. ಸೊಗಸಾಗಿ ಕೆತ್ತನೆ ಮಾಡಿದ ಸ್ಥಂಭಗಳು, ಕಲಾಕೃತಿಗಳು ಹಾಗೂ ಕರಕುಶಲವಸ್ತುಗಳು ಇಲ್ಲಿ ಕಾಣಬಹುದು. ಅನಂತ್ ಅಂಬಾನಿ ಮನೆಯ ಕಾರ್ಯಕ್ರಮದಲ್ಲಿ ಸ್ಟಾರ್ ಸೆಲೆಬ್ರಿಟಿಗಳ ದಂಡೇ ಇದೆ. ಅಮಿತಾಭ್ ಬಚ್ಚನ್, ಶಾರುಖ್ ಖಾನ್, ಸಲ್ಮಾನ್ ಖಾನ್, ಆಮೀರ್ ಖಾನ್, ರಜನಿಕಾಂತ್, ರಣ್ಬೀರ್ ಕಪೂರ್, ಆಲಿಯಾ ಭಟ್ (Aliaa Bhat), ಕತ್ರಿನಾ ಕೈಫ್, ದೀಪಿಕಾ ಪಡುಕೋಣೆ (Deepika Padukone) ಸೇರಿದಂತೆ ಅನೇಕರು ಭಾಗಿಯಾಗುತ್ತಿದ್ದಾರೆ.
ವಿಶೇಷ ಆಹ್ವಾನಿತರಷ್ಟೇ ಈ ಮದುವೆ ಸಂಭ್ರಮದಲ್ಲಿ ಭಾಗಿಯಾಗಲಿದ್ದು, ಸುಮಾರು 1000 ಗಣ್ಯರು ಭಾಗಿಯಾಲಿದ್ದಾರೆ. ಮೈಕ್ರೋಸಾಪ್ಟ್ ಸಂಸ್ಥಾಪಕ ಬಿಲ್ ಗೇಟ್ಸ್, ಮೆಲಿಂಡಾ ಗೇಟ್ಸ್, ಮೆಟಾ ಸಿಇಒ ಮಾರ್ಕ್ ಜುಕರ್ಬರ್ಗ್ ಹಲವರು ಹಾಜರಿ ಹಾಕಲಿದ್ದಾರೆ.