ಬೀಜಿಂಗ್: ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಮಹಿಳಾ ಕೈದಿಯ ಮಗುವಿಗೆ ಹಾಲುಣಿಸುವ ಮೂಲಕ ಚೀನಾದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ಮಗುವಿಗೆ ಹಾಲುಣಿಸುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು. ಹೆಣ್ಣಿನ ಮಾತೃತ್ವದ ಪ್ರೀತಿಗೆ ಎಲ್ಲೆಡೆಯಿಂದ ಪ್ರಶಂಸೆಗಳು ಹರಿದುಬರುತ್ತಿವೆ.
ಮಧ್ಯ ಚೀನಾದ ಶಾಂಕ್ಸಿ ಜಿನ್ಝೊಂಗ್ ಮಧ್ಯಂತರ ಪೀಪಲ್ಸ್ ನ್ಯಾಯಾಲಯದಲ್ಲಿ ಸೆಪ್ಟೆಂಬರ್ 23 ರಂದು ಪ್ರಕರಣವೊಂದರ ವಿಚಾರಣೆಗೆ ಮಹಿಳೆ ಕೈದಿ ಹಾಜರಾಗಿದ್ದಳು. ಕೋರ್ಟ್ ವಿಚಾರಣೆ ಆರಂಭವಾಗುತ್ತಿದಂತೆ ನಾಲ್ಕು ತಿಂಗಳ ಮಗು ಅಳಲು ಆರಂಭಿಸಿದೆ. ಈ ಸಂದರ್ಭದಲ್ಲಿ ಆರೋಪಿಯ ಅನುಮತಿಯನ್ನು ಪಡೆದ ಪೊಲೀಸ್ ಅಧಿಕಾರಿ ಹಾವೊ ಲಿನಾ ಮಗುವನ್ನು ಸಂತೈಸಲು ತಾನೇ ಮಗುವಿಗೆ ಹಾಲುಣಿಸಿದ್ದಾಳೆ.
Advertisement
ಈ ದೃಶ್ಯಗಳನ್ನು ಮಹಿಳಾ ಪೊಲೀಸ್ ಅಧಿಕಾರಿಯ ಸಹೋದ್ಯೋಗಿಯೊಬ್ಬರು ಕ್ಲಿಕ್ಕಿಸಿದ್ದು, ಇವನ್ನು ಕೋರ್ಟ್ ವೆಬ್‍ಸೈಟ್‍ನಲ್ಲಿ ಪ್ರಕಟಿಸಿದ್ದಾರೆ. ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಲಿನಾ ಮಾತೃತ್ವ ಪ್ರೀತಿಗೆ ಅಪಾರ ಮೆಚ್ಚುಗೆಗಳು ವ್ಯಕ್ತವಾಗಿವೆ.
Advertisement
ನಾನು ಒಂದು ಮಗುವಿನ ತಾಯಿಯಾಗಿದ್ದು ಮಗುವಿನ ಹಸಿವಿನ ಬಗ್ಗೆ ನನಗೆ ಅರಿವಿದೆ. ಮಗುವನ್ನು ಸಂತೈಸಲು ಕೈಯಲ್ಲಾದ ಕಾರ್ಯವನ್ನು ನಾನು ಮಾಡಿದ್ದೇನೆ. ಇಂತಹ ಸಂದರ್ಭದಲ್ಲಿ ಪ್ರತಿ ಪೊಲೀಸ್ ಅಧಿಕಾರಿಯು ಇದೇ ರೀತಿ ಮಾಡುತ್ತಾರೆ. ನಾನು ತಾಯಿಯಾಗಿರುವುದರಿಂದ ಈ ಸಹಾಯವನ್ನು ಮಾಡಲು ಸಾಧ್ಯವಾಯಿತು ಎಂದು ಲಿನಾ ಸ್ಥಳೀಯ ಮಾಧಮಗಳಿಗೆ ಪ್ರತಿಕ್ರಿಯಿಸಿದ್ದಾರೆ.
Advertisement
ಪೊಲೀಸ್ ಅಧಿಕಾರಿ ತನ್ನ ಮಗುವಿಗೆ ಹಾಲುಣಿಸಿ ಸಂತೈಸಿದ ವಿಷಯ ತಿಳಿದ ಆರೋಪಿ ಆಕೆಯ ಪ್ರೀತಿಗೆ ಧನ್ಯವಾದ ತಿಳಿಸಿ ಕಣ್ಣಿರಿಡುತ್ತಾ ಕೋರ್ಟ್‍ನಿಂದ ಹೊರನಡೆದಿದ್ದಾರೆ.