ರೋಹಿತ್ ಡ್ರಾಪ್ ಮಾಡ್ತೀರಾ – ಪ್ರಶ್ನೆಗೆ ತಲೆ ಕೆಳಗಡೆ ಹಾಕಿ Unbelievable ಎಂದ ಕೊಹ್ಲಿ

Public TV
2 Min Read
VIRAT KOHLI 3 1

ದುಬೈ: ರೋಹಿತ್ ಶರ್ಮಾ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ನಾಯಕ ವಿರಾಟ್ ಕೊಹ್ಲಿ ನೀಡಿದ ಉತ್ತರದ ವಿಡಿಯೋ ವೈರಲ್ ಆಗಿದೆ.

MOHAMD SHAMI 2 1

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸೋತ ನಂತರ ತಂಡದ ಆಟಗಾರರ ಬಗ್ಗೆ ನಾನಾ ಅಭಿಪ್ರಾಯಗಳು ಕೇಳಿಬರುತ್ತಿವೆ. ಭಾನುವಾರ ನಡೆದ ಪಂದ್ಯದಲ್ಲಿ ಆರಂಭಿಕ ಆಟಗಾರ ರೋಹಿತ್ ಶರ್ಮ ತಾನು ಎದುರಿಸಿದ ಮೊಟ್ಟ ಮೊದಲ ಎಸೆತದಲ್ಲಿಯೇ ಶಾಹೀನ್ ಅಫ್ರಿದಿ ಬೌಲಿಂಗ್‍ಗೆ ಔಟ್ ಆದರು. ಹೀಗಾಗಿ ರೋಹಿತ್ ಶರ್ಮಾ ಬದಲಿಗೆ ಮತ್ತೊಬ್ಬರನ್ನು ಆರಂಭಿಕನಾಗಿ ಇಳಿಸಬೇಕಿತ್ತೆ ಎಂಬ ಅಭಿಮಾನಿಗಳ ಚರ್ಚೆಗೆ ಪೂರಕ ಎಂಬಂತೆ ಪಾಕ್ ಪತ್ರಕರ್ತರು ಕೊಹ್ಲಿಗೆ ಪ್ರಶ್ನೆ ಕೇಳಿದ್ದಾರೆ.

VIRAT KOHLI 4

ಪಂದ್ಯದ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರೊಬ್ಬರಿಂದ ಕೇಳಿ ಬಂದ್ ಪ್ರಶ್ನೆಗೆ ನಾಯಕ ವಿರಾಟ್ ಕೊಹ್ಲಿ ಶಾಕ್ ಆದರು. ಅಲ್ಲದೆ ಪ್ರಶ್ನೆಗೆ ಬುದ್ಧಿವಂತಿಕೆಯಿಂದಲೇ ಉತ್ತರ ನೀಡಿದರು. ಆ ಸಂಭಾಷಣೆಯ ವಿಡಿಯೋ ವೈರಲ್ ಆಗಿದೆ. ಇದನ್ನೂ ಓದಿ: ಆತ್ಮಿಯ ಸ್ನೇಹಿತನ ವಿಶ್ವದಾಖಲೆ ಮುರಿದ ಕೊಹ್ಲಿ

rohith sharma

“ಮುಂದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ಬದಲು ಭಾರತ ತಂಡದ ಆರಂಭಿಕನಾಗಿ ಇಶಾನ್ ಕಿಶಾನ್ ಅವರನ್ನು ನಿಲ್ಲಿಸುವ ಸಾಧ್ಯತೆ ಇದೆಯೇ?” ಎಂದು ಸುದ್ದಿಗಾರರೊಬ್ಬರು ನಾಯಕ ವಿರಾಟ್ ಕೊಹ್ಲಿ ಅವರನ್ನು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ಅಚ್ಚರಿ ವ್ಯಕ್ತಪಡಿಸಿದ ಕೊಹ್ಲಿ, “ಇದು ತುಂಬಾ ಧೈರ್ಯಶಾಲಿ ಪ್ರಶ್ನೆ. ನಿಮ್ಮ ಆಲೋಚನೆ ಏನು ಸರ್” ಎಂದು ಪ್ರಶ್ನಿಸಿದ್ದಾರೆ.

rohith sharma and virat kohli medium

ಮುಂದುವರಿದ ಕೊಹ್ಲಿ, `ಅತ್ಯುತ್ತಮ ತಂಡದೊಂದಿಗೆ ನಾನು ಆಡಿದ್ದೇನೆ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು’ ಎಂದು ಮತ್ತೆ ಪತ್ರಕರ್ತರನ್ನೇ ಕೊಹ್ಲಿ ಪ್ರಶ್ನಿಸಿದ್ದಾರೆ.  ಇದನ್ನೂ ಓದಿ: ಪಾಕ್ ವಿರುದ್ಧ ಭಾರತ ಸೋತ ಬೆನ್ನಲ್ಲೇ ನೆಟ್ಟಿಗರ ಪಾಲಿಗೆ ವಿಲನ್ ಆದ ಶಮಿ

ನಿಮ್ಮ ಪ್ರಕಾರ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‍ನಿಂದ ರೋಹಿತ್ ಶರ್ಮಾ ಅವರನ್ನು ಕೈ ಬಿಡಬೇಕಾ? ರೋಹಿತ್‍ರನ್ನು ಕೈಬಿಡಲು ನೀವು ಬಯಸುತ್ತೀರಾ? ಕಳೆದ ಪಂದ್ಯದಲ್ಲಿ ಅವರು ಏನು ಮಾಡಿದ್ದಾರೆಂದು ನಿಮಗೆ ಗೊತ್ತಿದೆಯೇ ಎಂದು ಹೇಳಿ ‘Unbelievable’ ಎಂದರು. ನಂತರ ಮುಂದುವರಿಸಿ ನಿಮಗೆ ವಿವಾದ ಬೇಕೆಂದರೆ ಮೊದಲೇ ಹೇಳಿ, ಅದಕ್ಕೆ ತಕ್ಕಂತೆ ಉತ್ತರ ನೀಡುತ್ತೇನೆ ಎಂದು ಕೊಹ್ಲಿ ಪ್ರತಿಕ್ರಿಯಿಸಿದರು.

ಭಾನುವಾರ ಪಾಕ್ ವಿರುದ್ಧ ನಡೆದ ಪಂದ್ಯದಲ್ಲಿ ಭಾರತ 7 ವಿಕೆಟ್ ನಷ್ಟಕ್ಕೆ 152 ರನ್‍ಗಳ ಗುರಿ ನೀಡಿತ್ತು. ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡವು ಶೂನ್ಯ ವಿಕೆಟ್ ನಷ್ಟಕ್ಕೆ 152 ರನ್‍ಗಳ ಗುರಿ ತಲುಪುವ ಮೂಲಕ ಭರ್ಜರಿ ಜಯಗಳಿಸಿತ್ತು. ಇದನ್ನೂ ಓದಿ: ಪಾಕ್ ವಿರುದ್ಧ ಭಾರತ ಸೋತಿದ್ದಕ್ಕೆ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಹಲ್ಲೆ! 

Share This Article