LatestCricketMain PostSports

ಆತ್ಮೀಯ ಸ್ನೇಹಿತನ ವಿಶ್ವದಾಖಲೆ ಮುರಿದ ಕೊಹ್ಲಿ

ದುಬೈ: ಭಾರತ ಕ್ರಿಕೆಟ್ ತಂಡದ ರನ್ ಮೆಷಿನ್ ಎಂದೇ ಖ್ಯಾತರಾಗಿರುವ ಕ್ಯಾಪ್ಟನ್ ವಿರಾಟ್ ಕೊಹ್ಲಿ ಟಿ20 ವಿಶ್ವಕಪ್‍ನಲ್ಲಿ ತನ್ನ ಆತ್ಮೀಯ ಸ್ನೇಹಿತ ಯುನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಅವರ ದಾಖಲೆಯೊಂದನ್ನು ಮುರಿದು ನೂತನ ವಿಶ್ವ ದಾಖಲೆ ನಿರ್ಮಿಸಿದ್ದಾರೆ.

VIRAT KOHLI 2 1

ಟಿ20 ಕ್ರಿಕೆಟ್‍ನಲ್ಲಿ ಹೊಡಿಬಡಿ ಆಟದ ಮೂಲಕ ವಿಶ್ವದಾದ್ಯಂತ ತನ್ನದೇ ಕ್ರಿಕೆಟ್ ಪ್ರೇಮಿಗಳನ್ನು ಹೊಂದಿರುವ ವೆಸ್ಟ್ ಇಂಡೀಸ್ ತಂಡದ ಕ್ರಿಸ್ ಗೇಲ್ ಟಿ20 ವಿಶ್ವಕಪ್ ಇತಿಹಾಸದಲ್ಲಿ 9 ಅರ್ಧಶತಕ ಸಿಡಿಸಿ ಅತೀ ಹೆಚ್ಚು ಅರ್ಧಶತಕ ಸಿಡಿಸಿದ ದಾಖಲೆ ನಿರ್ಮಿಸಿದ್ದರು. ಆದರೆ ಇದೀಗ ವಿರಾಟ್ ಕೊಹ್ಲಿ ಆ ದಾಖಲೆಯನ್ನು ಮುರಿದು ಟಿ20 ವಿಶ್ವಕಪ್‍ನಲ್ಲಿ 10 ಅರ್ಧಶತಕ ಸಿಡಿಸಿ ನೂತನ ವಿಶ್ವ ದಾಖಲೆಯ ಒಡೆಯನಾಗಿದ್ದಾರೆ. ಇವರಿಬ್ಬರ ಬಳಿಕ ಶ್ರೀಲಂಕಾ ತಂಡದ ಮಾಜಿ ಆಟಗಾರ ಮಹೇಲಾ ಜಯವರ್ಧನೆ 7 ಅರ್ಧಶತಕ ಸಿಡಿಸಿದರೆ ಭಾರತದ ಹಿಟ್‍ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ 6 ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಇದನ್ನೂ ಓದಿ: ಪಾಕ್ ವಿರುದ್ಧ ಭಾರತ ಸೋತ ಬೆನ್ನಲ್ಲೇ ನೆಟ್ಟಿಗರ ಪಾಲಿಗೆ ವಿಲನ್ ಆದ ಶಮಿ

GAYLE medium

ವಿರಾಟ್ ಕೊಹ್ಲಿ 2021ರ ಟಿ20 ವಿಶ್ವಕಪ್‍ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 57 ರನ್ (49 ಎಸೆತ, 5 ಬೌಂಡರಿ, 1 ಸಿಕ್ಸ್) ಬಾರಿಸಿ ಮಿಂಚಿದರು. ಇದಲ್ಲದೇ ಟಿ20 ವಿಶ್ವಕಪ್ ಇತಿಹಾಸದಲ್ಲಿ ಪಾಕಿಸ್ತಾನ ವಿರುದ್ಧ ವಿರಾಟ್ ಕೊಹ್ಲಿ ಮೊದಲ ಬಾರಿಗೆ ಔಟ್ ಆದರು. ಈ ಮೊದಲು 2012, 2014 ಮತ್ತು 2016ರಲ್ಲಿ ವಿರಾಟ್ ಕೊಹ್ಲಿಯನ್ನು ಔಟ್ ಮಾಡಲು ಪಾಕಿಸ್ತಾನ ತಂಡಕ್ಕೆ ಸಾಧ್ಯವಾಗಿರಲಿಲ್ಲ. ಆದರೆ 2021ರ ಟಿ20 ವಿಶ್ವಕಪ್‍ನಲ್ಲಿ ಪಾಕಿಸ್ತಾನ ತಂಡ ಕೊಹ್ಲಿ ವಿಕೆಟ್ ಪಡೆಯುವುದರಲ್ಲಿ ಯಶಸ್ವಿಯಾಗಿದೆ. ಇದನ್ನೂ ಓದಿ: ಪಾಕ್ ವಿರುದ್ಧ ಭಾರತ ಸೋತಿದ್ದಕ್ಕೆ ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಹಲ್ಲೆ! 

Related Articles

Leave a Reply

Your email address will not be published. Required fields are marked *