Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಚಿಕ್ಕಮಗಳೂರು, ಉಡುಪಿಯಲ್ಲಿ ಡೇಂಜರ್ ಸೇತುವೆ – ನಿರ್ವಹಣೆ ಇಲ್ಲದೇ ಬೀಳುವ ಸ್ಥಿತಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Chikkamagaluru | ಚಿಕ್ಕಮಗಳೂರು, ಉಡುಪಿಯಲ್ಲಿ ಡೇಂಜರ್ ಸೇತುವೆ – ನಿರ್ವಹಣೆ ಇಲ್ಲದೇ ಬೀಳುವ ಸ್ಥಿತಿ

Chikkamagaluru

ಚಿಕ್ಕಮಗಳೂರು, ಉಡುಪಿಯಲ್ಲಿ ಡೇಂಜರ್ ಸೇತುವೆ – ನಿರ್ವಹಣೆ ಇಲ್ಲದೇ ಬೀಳುವ ಸ್ಥಿತಿ

Public TV
Last updated: November 3, 2022 7:50 am
Public TV
Share
2 Min Read
danger bridge
SHARE

ಚಿಕ್ಕಮಗಳೂರು: ಗುಜರಾತ್‌ನಲ್ಲಿ (Gujarat) ನಡೆದ ಮೊರ್ಬಿ (Morbi) ದುರಂತ 141 ಜನರನ್ನು ಬಲಿಪಡೆದಿದೆ. ಕರ್ನಾಟಕದಲ್ಲಿ ಕೂಡ ಇಂತದ್ದೇ ಅಪಾಯಕಾರಿ ಸೇತುವೆಗಳು ಇವೆ. ಗುಜರಾತಿನ ಮೊರ್ಬಿ ಸೇತುವೆಯಷ್ಟೇ ನಮ್ಮಲ್ಲೂ ಡೇಂಜರ್ ಸೇತುವೆಗಳು ಇವೆ. ಪಬ್ಲಿಕ್ ರಿಯಾಲಿಟಿ ಚೆಕ್‌ನಲ್ಲಿ ಡೇಂಜರ್ ತೂಗು ಸೇತುವೆಗಳ ಬಣ್ಣ ಬಯಲಾಗಿದೆ.

cable bridge

ಕಿತ್ತು ಬಂದಿರುವ ತಂತಿಗಳು. ಗ್ರಿಪ್ಪೇ ಇಲ್ಲದೆ ಸಾಮರ್ಥ್ಯ ಕಳೆದುಕೊಂಡಿರೋ ಸೇತುವೆಯ ತಡೆಗೋಡೆಗಳು. ಒಬ್ಬರ ಓಡಾಡಕ್ಕೆ ಜೋತಾಡೋ ಸೇತುವೆ. ಇದು ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ನೆಮ್ಮಾರು ಗ್ರಾಮದಲ್ಲಿರುವ ಮೇಲ್ಸೇತುವೆ. ಅಪಾಯಕ್ಕೆ ಕಾದಿರುವ ತೂಗು ಸೇತುವೆಯ ಬಣ್ಣ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್‌ನಲ್ಲಿ ಬಯಲಾಗಿದೆ. ಇದನ್ನೂ ಓದಿ: ದೊಡ್ಡಗಣೇಶ ದೇಗುಲದಲ್ಲಿ ಚಪ್ಪಲಿ ಸ್ಟ್ಯಾಂಡ್‍ಗೂ ಮೀಸಲಾತಿ!

ಹೌದು, ಚಿಕ್ಕಮಗಳೂರು (Chikkamagaluru) ಜಿಲ್ಲೆ ಶೃಂಗೇರಿಯ ನೆಮ್ಮಾರು ಗ್ರಾಮದಲ್ಲಿ 20 ವರ್ಷಗಳ ಹಿಂದೆ ತುಂಗಾ ನದಿ ಮೇಲೆ ನಿರ್ಮಿಸಿದ ಸೇತುವೆ ಈಗ ಬೀಳುವ ಸ್ಥಿತಿಯಲ್ಲಿದೆ. ಇಲ್ಲಿನ ಸುಂಕದಮಕ್ಕಿ ಹಾಗೂ ಹೆಡದಾಳು ಗ್ರಾಮದ 150ಕ್ಕೂ ಹೆಚ್ಚು ಕುಟುಂಬಗಳಿಗೆ ಈ ಸೇತುವೆಯೇ ಆಧಾರ. ಇವರಿಗೆ ಬೇರೆ ಮಾರ್ಗ ಇದ್ರು 12 ಕಿ.ಮೀ. ಸುತ್ತಿ ಬರಬೇಕು. ಹಾಗಾಗಿ 20 ವರ್ಷಗಳ ಹಿಂದೆ ಸರ್ಕಾರವೇ ತೂಗುಸೇತುವೆ ನಿರ್ಮಿಸಿ ಕೊಟ್ಟಿತ್ತು. ಆದ್ರೆ ನಿರ್ವಹಣೆ ಇಲ್ಲದೆ ಸೇತುವೆ ತನ್ನ ಸಾಮರ್ಥ್ಯವನ್ನ ಕಳೆದುಕೊಂಡಿದೆ. ಸೇತುವೆಗೆ ಹಾಕಿರುವ ಗ್ರಿಲ್‌ಗಳು ಕಿತ್ತು ಬಂದಿವೆ. ಸೇತುವೆಯ ಫುಟ್‌ಪಾತ್ ಹಾಗೂ ತಡೆಗೋಡೆಗೆ ಹಾಕಿರೋ ಗ್ರಿಲ್‌ಗಳ ಜಾಯಿಂಟ್ ಕೂಡ ಬಿಟ್ಟಿದ್ದು ಸ್ವಲ್ಪ ಯಾಮಾರಿದ್ರೂ ಅಪಾಯ ಕಟ್ಟಿಟ್ಟಬುತ್ತಿ.

udupi bridge

ಸೇತುವೆ ಸ್ಥಿತಿ ಬಗ್ಗೆ ಸ್ಥಳೀಯರು ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆದರೆ ಸ್ಥಳಕ್ಕೆ ಬಂದು ಹೋಗುವ ಅಧಿಕಾರಿಗಳ ಕಥೆ ಬಂದ ಪುಟ್ಟ ಹೋದ ಪುಟ್ಟ ಎಂಬಂತಾಗಿದೆ. ಒಂದು ವೇಳೆ ಈ ಸೇತುವೆ ಹಾಳಾದ್ರೆ, ಈ ಭಾಗದ ಜನ ಸಣ್ಣ ಕೆಲಸಕ್ಕೂ ಹೆದ್ದಾರಿಗೆ ಬರಬೇಕೆಂದ್ರೆ ಕನಿಷ್ಠ 12 ಕಿ.ಮೀ. ಸುತ್ತಿ ಬಳಸಿ ಬರಬೇಕು. ಈ ಸೇತುವೆ ನಿರ್ಮಾಣವಾದಗಿನಿಂದ ಒಂದೇ ಒಂದು ಬಾರಿ ಮಾತ್ರ ಬಣ್ಣ-ಗ್ರೀಸ್ ಕಂಡಿದೆ. ಮೊದಲೆಲ್ಲಾ 4-5 ಜನ ಓಡಾಡಿದ್ರು ಏನೂ ಆಗ್ತಿರಲ್ಲಿಲ್ಲ. ಈಗ ಒಬ್ಬಿಬ್ಬರು ಓಡಾಡುದ್ರೆ ತೂಗಾಡುತ್ತೆ, ಓಡಾಡೋಕೆ ಭಯವಾಗುತ್ತೆ ಅಂತಾರೆ ಸ್ಥಳೀಯರು. ಇದನ್ನೂ ಓದಿ: PSI ನೇಮಕಾತಿ ಅಕ್ರಮ – ಫಸ್ಟ್ ರ‍್ಯಾಂಕ್ ಪಡೆದಿದ್ದ ಸುಪ್ರಿಯಾ ಅರೆಸ್ಟ್

ಒಟ್ಟಾರೆ, ಸರ್ಕಾರ ಜನರಿಗೆಂದು ತೂಗು ಸೇತುವೆಯನ್ನೇನೋ ನಿರ್ಮಿಸಿ ಕೊಡ್ತು. ಆದ್ರೆ, ಅದರ ನಿರ್ವಹಣೆ ಮರೆತಿದೆ. ಸರ್ಕಾರವೇ ಮರೆತ ಕಾರಣ ಇಂದು ಆ ಸೇತುವೆ ಸಂಪೂರ್ಣ ಶಿಥಿಲಾವಸ್ಥೆ ತಲುಪಿದೆ. ಅನಾಹುತವಾಗುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.

Live Tv
[brid partner=56869869 player=32851 video=960834 autoplay=true]

TAGGED:cable bridgeChikkamagaluruudupiಉಡುಪಿಚಿಕ್ಕಮಗಳೂರುತೂಗು ಸೇತುವೆ
Share This Article
Facebook Whatsapp Whatsapp Telegram

Cinema news

3 Idiots
10 ವರ್ಷಗಳ ಬಳಿಕವೂ ಅದೇ ಪಾತ್ರಗಳೊಂದಿಗೆ ಬರಲಿದೆ 3 Idiots ಸೀಕ್ವೆಲ್
Bollywood Cinema Latest Top Stories
nikhil kumaraswamy actor chetan
ಡಾ.ರಾಜ್‌ಕುಮಾರ್ ಎಂದರೆ ಆರು ಕೋಟಿ ಕನ್ನಡಿಗರ ಭಾವನೆ: ನಟ ಚೇತನ್‌ಗೆ ನಿಖಿಲ್ ಕುಮಾರಸ್ವಾಮಿ ಕಿಡಿ
Bengaluru City Cinema Latest Sandalwood Top Stories
Sanjay Dutt
ಸರ್ಸೆ ಸೆರಗ ಸರ್ಸೆ ಹಾಡಿನ ವಿವಾದ – ಕ್ಷಮೆಯಾಚಿಸಿದ ಸಂಜಯ್ ದತ್, ಬುಡಕಟ್ಟು ಜನಾಂಗದ 50 ಹುಡುಗಿಯರ ಶಿಕ್ಷಣಕ್ಕೆ ಹಣದ ಭರವಸೆ
Bollywood Cinema Latest National Sandalwood Top Stories
ChetanKumar Ahimsa
ರಾಜ್‌ಕುಮಾರ್‌ ಸಮಾಧಿ ಬಗ್ಗೆ ವಿವಾದಾತ್ಮಕ ಪೋಸ್ಟ್‌ – ಅಭಿಮಾನಿಗಳು ಮುತ್ತಿಗೆ ಹಾಕುತ್ತಿದ್ದಂತೆ ಕ್ಷಮೆಯಾಚಿಸಿದ ಚೇತನ್‌
Cinema Karnataka Latest Top Stories

You Might Also Like

soraba bjp worker
Crime

ಶಿವಮೊಗ್ಗದ ಸೊರಬದಲ್ಲಿ ಬಿಜೆಪಿ ಮುಖಂಡನ ಪತ್ನಿ ನೇಣಿಗೆ ಶರಣು – ಪತಿ ಬಂಧನ

Public TV
By Public TV
5 hours ago
Donovan Ferreira
Cricket

ಪಂಜಾಬ್‌ ಗೆಲುವಿನ ಓಟಕ್ಕೆ ಬ್ರೇಕ್‌ – ರಾಜಸ್ಥಾನ್‌ಗೆ 6 ವಿಕೆಟ್‌ಗಳ ಜಯ

Public TV
By Public TV
5 hours ago
Apekshaben Sonis victory
Latest

100% ಮುಸ್ಲಿಂ ಮತದಾರರ ವಾರ್ಡ್‌ನಲ್ಲಿ ಸ್ವತಂತ್ರ ಹಿಂದೂ ಅಭ್ಯರ್ಥಿಗೆ ಗೆಲುವು

Public TV
By Public TV
6 hours ago
Dharwad Suicide
Dharwad

ಧಾರವಾಡ | ಮರ್ಯಾದೆಗೆ ಅಂಜಿ ವಿದ್ಯಾರ್ಥಿ ನೇಣಿಗೆ ಶರಣು

Public TV
By Public TV
6 hours ago
gundlupet inspector safari
Chamarajanagar

ನಿರ್ಬಂಧಿತ ಅರಣ್ಯಪ್ರದೇಶದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಬಿಂದಾಸ್ ಸವಾರಿ

Public TV
By Public TV
8 hours ago
supreme Court 1
Court

ಪ್ರತಿಯೊಂದು ಧಾರ್ಮಿಕ ಸಂಸ್ಥೆಗಳಲ್ಲಿ ನಿಯಮಗಳಿರಬೇಕು, ಅರಾಜಕತೆ ಇರಬಾರದು – ಶಬರಿಮಲೆ ಕೇಸ್‌ನಲ್ಲಿ ಸುಪ್ರೀಂ ಅಭಿಪ್ರಾಯ

Public TV
By Public TV
9 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?