ಬಾಲಿವುಡ್ ಬ್ಯೂಟಿ ಸನ್ನಿ ಲಿಯೋನ್ ಈಗ ಬಾಲಿವುಡ್ ಮಾತ್ರವಲ್ಲ ದಕ್ಷಿಣದ ಸಿನಿಮಾಗಳಲ್ಲಿ ಕೂಡ ಗುರುತಿಸಿಕೊಳ್ತಿದ್ದಾರೆ. ಇದೀಗ ತನ್ನ ಹತಾಶೆಯನ್ನ ಹೊರಹಾಕಲು ಸನ್ನಿ ಲಿಯೋನ್ ಹೊಸ ಮಾರ್ಗ ಕಂಡು ಹಿಡಿದಿದ್ದಾರೆ. ಈ ಕುರಿತ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಬಹುಭಾಷಾ ನಟಿಯಾಗಿ ಬೇಡಿಕೆಯಲ್ಲಿ ಸನ್ನಿ ಲಿಯೋನ್ ಜೀವನದಲ್ಲಿ ಬೇಸರ ಮೂಡಿದ್ಯಾ ಅನ್ನೋ ಅನುಮಾನ ಅಭಿಮಾನಿಗಳ ವಲಯದಲ್ಲಿ ವ್ಯಕ್ತವಾಗುತ್ತಿದೆ. ಇದಕ್ಕೆ ಪೂರಕವೆಂಬಂತಹ ವಿಡಿಯೋವೊಂದನ್ನ ಸನ್ನಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ನಾನು ಹತಾಶೆಯಲ್ಲಿ ಇದ್ದಾಗ ಎಂಬ ಅಡಿಬರಹ ನೀಡಿ, ಮರವನ್ನ ಮಚ್ಚಿನಿಂದ ಕಡಿಯುತ್ತಿರುವ ವಿಡಿಯೋವನ್ನ ಸನ್ನಿ ಶೇರ್ ಮಾಡಿದ್ದಾರೆ. ಇದನ್ನೂ ಓದಿ:ಉಗ್ರರಿಂದ ಹತ್ಯೆಯಾಗಿದ್ದ ಕಾಶ್ಮೀರಿ ಗಾಯಕಿಯ ಪಾತ್ರದಲ್ಲಿ ಕಂಗನಾ ರಣಾವತ್