Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕೋಲಾರದಲ್ಲಿ ತಪ್ಪಿತು ಮಹಾ ದುರಂತ – ಕೂದಲೆಳೆ ಅಂತರದಲ್ಲಿ ನೂರಾರು ಜನ ಪಾರು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಕೋಲಾರದಲ್ಲಿ ತಪ್ಪಿತು ಮಹಾ ದುರಂತ – ಕೂದಲೆಳೆ ಅಂತರದಲ್ಲಿ ನೂರಾರು ಜನ ಪಾರು

Districts

ಕೋಲಾರದಲ್ಲಿ ತಪ್ಪಿತು ಮಹಾ ದುರಂತ – ಕೂದಲೆಳೆ ಅಂತರದಲ್ಲಿ ನೂರಾರು ಜನ ಪಾರು

Public TV
Last updated: March 9, 2022 3:44 pm
Public TV
Share
3 Min Read
korala rally accident
SHARE

ಕೋಲಾರ: ರಾಜ್ಯದಲ್ಲಿ ಸಂಭವಿಸಬಹುದಾಗಿದ್ದ ದೊಡ್ಡ ರೈಲು ದುರಂತದಿಂದ ನೂರಾರು ಜನ ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಮಾಲೂರಿನ ಟೇಕಲ್ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.

ತಾಂತ್ರಿಕ ದೋಷದಿಂದ ನಿಂತಿದ್ದ ರೈಲಿನಿಂದ ಇಳಿಯುತ್ತಿದ್ದ ಪ್ರಯಾಣಿಕರಿಗೆ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿಯಾಗುವ ಸಾಧ್ಯತೆ ಇತ್ತು. ಆದರೆ ರೈಲು ಬರುತ್ತಿದ್ದಂತೆ ಇನ್ನೊಂದು ಹಳಿಗೆ ಓಡಿದ್ದರಿಂದ ಜನ ಅಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಕಚ್ಚಾ ತೈಲ ಬೆಲೆ ಬ್ಯಾರೆಲ್‍ಗೆ 300 ಡಾಲರ್‌ಗೆ ಏರಬಹುದು: ರಷ್ಯಾ ಎಚ್ಚರಿಕೆ 

korala rally accident 34

ಇಂದು(ಬುಧವಾರ) ಬೆಳಗ್ಗೆ 8 ಗಂಟೆಗೆ ನಡೆದ ಈ ವೇಳೆ ಬಂಗಾರಪೇಟೆ ಪಟ್ಟಣದ ವಿಜಯನಗರ ನಿವಾಸಿ ಶಹಬಾಜ್ ಅಹಮದ್ ಯುವಕ ರೈಲಿಗೆ ಸಿಕುಕಿ ಸಾವನ್ನಪ್ಪಿದ್ದಾರೆ. 20 ಜನ ಗಾಯಗೊಂಡಿದ್ದಾರೆ. ರೈಲ್ವೇ ಅಧಿಕಾರಗಳ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.

korala rally accident 2

ನಡೆದಿದ್ದು ಏನು?
ಬೆಂಗಳೂರಿನ ವೈಟ್ ಫೀಲ್ಡ್‌ನಲ್ಲಿ ತಾಂತ್ರಿಕ ದೋಷವಾಗಿದ್ದರಿಂದ ಸಿಗ್ನಲ್ ತೊಂದರೆ ಉಂಟಾಗಿತ್ತು. ಇದರಿಂದಾಗಿ ತೆರಕಲ್ಲು ಮತ್ತು ಮಾಲೂರಿನಲ್ಲಿ ರೈಲುಗಳು ಅಲ್ಲಲ್ಲೇ ನಿಂತಿತ್ತು. ಈ ವೇಳೆ ಪ್ಯಾಸೆಂಜರ್ ರೈಲಿನಿಂದ ಇಳಿದು ಪಕ್ಕದ ಹಳಿಯ ಕಡೆ ಪ್ರಯಾಣಿಕರು ನಡೆದುಕೊಂಡು ಹೋಗುತ್ತಿದ್ದರು.

ಈ ಸಂದರ್ಭದಲ್ಲೇ ಶತಾಬ್ದಿ ರೈಲು ವೇಗವಾಗಿ ಬಂದಿದೆ. ರೈಲು ಬರುತ್ತಿರುವುದನ್ನು ಗಮನಿಸಿ ಅಲ್ಲಿದ್ದ ಜನ ಚೆಲ್ಲಾಪಿಲ್ಲಿಯಾಗಿದ್ದಾರೆ. ಒಂದು ವೇಳೆ ಅವರು ಅಲ್ಲಿಂದ ಓಡದೇ ಹೋಗದೇ ಇದ್ದಿದ್ದರೆ ನೂರಾರು ಜನರು ರೈಲಿಗೆ ಬಲಿಯಾಗಬೇಕಾಗುವ ಸಾಧ್ಯತೆ ಇತ್ತು ಎಂದು ಪ್ರತ್ಯಕ್ಷದರ್ಶಿ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

korala rally accident 5

ಪ್ರತ್ಯಕ್ಷದರ್ಶಿ ನಾರಾಯಣ ಸ್ವಾಮಿ ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದು, ಮಾರಿಕುಪ್ಪಂ ರೈಲು ಮಾಲೂರಿನಲ್ಲಿ ನಿಂತಿತ್ತು. ನಂತರ ನಮಗೆ ತಾಂತ್ರಿಕ ದೋಷದಿಂದ ರೈಲುಗಳು ಬರುತ್ತಿಲ್ಲ ಅಲ್ಲಲ್ಲೇ ನಿಂತಿದೆ ಎಂದು ತಿಳಿಯಿತು. ಅದಕ್ಕೆ ನಾವು 30 ನಿಮಿಷ ಅಲ್ಲೇ ಇದ್ದೆವು. ಏಕೆಂದರೆ ಅಲ್ಲಿ ಯಾವುದೇ ಬಸ್ ಸಹ ಇರಲಿಲ್ಲ. ಇಲ್ಲಿ ಬಸ್‍ಗಳು ತುಂಬಾ ಕಡಿಮೆ ಇತ್ತು. ಈ ವೇಳೆ ಕೋಲಾರದಿಂದ ಡೀಸೆಲ್ ರೈಲು ಬರುತ್ತೆ ಎಂಬ ಮಾಹಿತಿ ಸಿಕ್ಕಿತು. ಅದರಲ್ಲಿ ನನ್ನ ಸ್ನೇಹಿತ ಸಂತೋಷ ಸಹ ಇದ್ದರು ಎಂದು ವಿವರಿಸಿದರು.

korala rally accident 3

ನಾನು ನನ್ನ ಸ್ನೇಹಿತನಿಗೆ ಕರೆ ಮಾಡಿ ಕೇಳಿದಕ್ಕೆ ಅವರು ಬಂಗಾರಪೇಟೆಯಿಂದ ರೈಲು ಹೊರಟಿದೆ ಎಂದು ತಿಳಿಸಿದ. ಆ ರೈಲು ಇನ್ನೊಂದು ಫ್ಲಾಟ್‍ಫಾರಂಗೆ ಬರುತ್ತೆ ಎಂದು ನಮಗೆ ತಿಳಿಯಿತು. ಈ ನಡುವೆ ಟ್ರ್ಯಾಕ್ ಇದೆ. ಅದೇ ಟ್ರ್ಯಾಕ್‍ನಲ್ಲಿ ಶತಾಬ್ದಿ ರೈಲು ಹೋಗುತ್ತಿತ್ತು. ಆದರೆ ನಮಗೆ ಡೀಸೆಲ್ ರೈಲು ಬರುತ್ತೆ ಎಂದು ಎಲ್ಲ ಜನ ಪಕ್ಕದ ಹಳಿಗೆ ಹೋಗುತ್ತಿದ್ದರು. ನಾನು ಸಹ ಅಲ್ಲೇ ಇದ್ದೆ. ಈ ವೇಳೆ ಎರಡೇ ನಿಮಿಷಕ್ಕೆ ಶತಾಬ್ದಿ ವೇಗವಾಗಿ ಬಂದಿದೆ.

korala rally accident 1

ರೈಲು ಬರುತ್ತಿದ್ದಂತೆ ಎಲ್ಲರೂ ಕಿರುಚಲು ಪ್ರಾರಂಭಿಸಿದ್ದಾರೆ. ತಕ್ಷಣ ವೇಗವಾಗಿ ಪಕ್ಕದ ಹಳಿಗೆ ಬಂದ್ದೆವು. ಆದರೆ ಅಲ್ಲಿ 20 ರಿಂದ 30 ಜನರು ಸಿಕ್ಕಿಕೊಂಡಿದ್ದರು. ಏನೂ ಸಾಹಸ ಮಾಡಿ ಎಲ್ಲರೂ ತಪ್ಪಿಸಿಕೊಂಡು ಬಂದಿದ್ದರು. ಒಬ್ಬ ಯುವಕ ಮಾತ್ರ ಸಾವನ್ನಪ್ಪಿದ್ದಾನೆ. ಕೆಲವರು 3 ಜನ ಮೃತಪಟ್ಟಿದ್ದಾರೆ ಎಂದು ಹೇಳುತ್ತಾರೆ. ಆದರೆ ನಾವು ಒಬ್ಬನನ್ನೆ ನೋಡಿದ್ದು ಎಂದು ತಿಳಿಸಿದರು. ಇದನ್ನೂ ಓದಿ: ದಕ್ಷಿಣ ಕಾಶಿ ಶ್ರೀಕ್ಷೇತ್ರ ಶಿವಗಂಗೆಯಲ್ಲಿ ಗಾಂಜಾ ಮಾರಾಟ – ಆರೋಪಿ ಬಂಧನ

ಅಧಿಕಾರಿಗಳ ನಿರ್ಲಕ್ಷ್ಯ
ಈ ಘಟನೆಗೆ ಸ್ಟೇಷನ್ ಮಾಸ್ಟರ್ ಸರಿಯಾಗಿ ಸಿಗ್ನಲ್ ನೋಡಿಕೊಳ್ಳದೆ ಇರುವುದ ಕಾರಣ ಎಂದು ಆರೋಪಿಸಿ ಕೆಲ ಕಾಲ ಜನರು ಆಕ್ರೋಶ ವ್ಯಕ್ತಪಡಿಸಿದರು. ರೈಲು ಬರುತ್ತಿರುವ ಶಬ್ಧ ಕೇಳಿ ಜನ ದಿಕ್ಕಾಪಾಲಾಗಿ ಓಡಿದ್ದರಿಂದ ಹಲವರ ಜೀವ ಉಳಿದಿದೆ. ರೊಚ್ಚಿಗೆದ್ದ ಪ್ರಯಾಣಕರು ರೈಲ್ವೆ ಸ್ಟೇಷನ್‌ ಮೇಲೆ ದಾಳಿ ಮಾಡಿದ್ದಾರೆ.

TAGGED:KolarMallurShatabdi Railwayಕೋಲಾರಮಾಲೂರುಶತಾಬ್ದಿ ರೈಲು
Share This Article
Facebook Whatsapp Whatsapp Telegram

Cinema news

rashmika mandanna
ಮದುವೆಯಂದು ರಶ್ಮಿಕಾ ಮಿನಿಮಲ್ ಮೇಕಪ್ ಹಾಕಿದ್ದು ಯಾಕೆ – ಗುಟ್ಟು ಬಿಚ್ಚಿಟ್ಟ ಮೇಕಪ್ ಆರ್ಟಿಸ್ಟ್‌
Cinema Latest Sandalwood South cinema
Suhana Khan
ಮಗಳನ್ನೇ ಸಹೋದ್ಯೋಗಿ ಥರ ನೋಡುವ ಶಾರುಖ್ ಖಾನ್!
Bollywood Cinema Latest Top Stories
trisha krishnan
ಶ್ರೀಮಂತ ಉದ್ಯಮಿಯನ್ನ ಮದ್ವೆಯಾಗಿ, 4 ಮಕ್ಕಳನ್ನು ಬೆಳೆಸುತ್ತಿದ್ದೇನೆ – ಸಿನಿಮಾ ನಿವೃತ್ತಿ ವದಂತಿಗೆ ನಟಿ ತ್ರಿಶಾ ಕೌಂಟರ್
Cinema Latest South cinema Top Stories
Rashmika Mandanna
ಕೊಡಗಿನಲ್ಲಿ ರಶ್ಮಿಕಾ – ವಿಜಯ್‌ ಡಿನ್ನರ್‌ ಪಾರ್ಟಿ; ಕೊಡವ ಶೈಲಿಯ ಭರ್ಜರಿ ಆತಿಥ್ಯ!
Cinema Kodagu Latest Main Post Sandalwood South cinema

You Might Also Like

Landslide
Districts

ಶಿವಮೊಗ್ಗದ ಹುಲಿಕಲ್ ಘಾಟಿ ಬಳಿ ಗುಡ್ಡ ಕುಸಿತ – ಮೂವರು ಕಾರ್ಮಿಕರು ಸಾವು

Public TV
By Public TV
4 hours ago
LSG Vs KKR 2 1
Cricket

ಕೊನೆಯಲ್ಲಿ ಮುಕುಲ್‌ ಅಬ್ಬರ; ರೋಚಕ ಪಂದ್ಯದಲ್ಲಿ ಲಕ್ನೋಗೆ 3 ವಿಕೆಟ್‌ ಜಯ – ಖಾತೆ ತೆರೆಯದ ಕೆಕೆಆರ್‌

Public TV
By Public TV
4 hours ago
PUC Student
Bagalkot

2nd PUC Result | ರಾಜ್ಯಕ್ಕೆ ಉಡುಪಿ ಪ್ರಥಮ – ಕಾಮರ್ಸ್‌ನಲ್ಲಿ ಇಬ್ಬರಿಗೆ 600ಕ್ಕೆ 600 ಅಂಕ

Public TV
By Public TV
4 hours ago
kea
Bengaluru City

ವಿವಿಧ ಹುದ್ದೆಗಳ ನೇಮಕಾತಿ ಪರೀಕ್ಷೆಗೆ ವೇಳಾಪಟ್ಟಿ ಪ್ರಕಟ: ಕೆಇಎ

Public TV
By Public TV
5 hours ago
Benjamin Netanyahu 1
Latest

ಲೆಬನಾನ್‌ ಜೊತೆ ನೇರ ಮಾತುಕತೆ ಆರಂಭಿಸಲು ಸಂಪುಟಕ್ಕೆ ನೆತನ್ಯಾಹು ಆದೇಶ

Public TV
By Public TV
5 hours ago
Social Media Ban
Bengaluru City

16 ವರ್ಷದೊಳಗಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬ್ಯಾನ್ ಪ್ರಕ್ರಿಯೆ ಶುರು

Public TV
By Public TV
5 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?