Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕುಟುಂಬವನ್ನು ಸಾಕಲು ಮಗಳನ್ನೇ ಮಾರಿದ ತಂದೆ – ಗಂಡನಿಗೆ ವಿಚ್ಛೇದನ ನೀಡಿದ ಅಫ್ಘಾನ್‌ ಮಹಿಳೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಕುಟುಂಬವನ್ನು ಸಾಕಲು ಮಗಳನ್ನೇ ಮಾರಿದ ತಂದೆ – ಗಂಡನಿಗೆ ವಿಚ್ಛೇದನ ನೀಡಿದ ಅಫ್ಘಾನ್‌ ಮಹಿಳೆ

Latest

ಕುಟುಂಬವನ್ನು ಸಾಕಲು ಮಗಳನ್ನೇ ಮಾರಿದ ತಂದೆ – ಗಂಡನಿಗೆ ವಿಚ್ಛೇದನ ನೀಡಿದ ಅಫ್ಘಾನ್‌ ಮಹಿಳೆ

Public TV
Last updated: December 31, 2021 5:17 pm
Public TV
Share
1 Min Read
afghanistan1
SHARE

ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಆಡಳಿತ ಆರಂಭವಾದ ನಂತರ ದೇಶದಲ್ಲಿ ಅನೇಕ ಸಮಸ್ಯೆಗಳು ತಲೆದೋರುತ್ತಿವೆ. ಯುದ್ಧ, ಬರ ಪರಿಸ್ಥಿತಿಯಿಂದ ಬೇಸತ್ತ ಜನ ಪಶ್ಚಿಮ ಅಫ್ಘಾನ್‌ ಕಡೆಗೆ ಗುಳೆ ಹೋಗುತ್ತಿದ್ದಾರೆ. ತುತ್ತು ಅನ್ನಕ್ಕೂ ಪರದಾಡುವಂತಹ ಪರಿಸ್ಥಿತಿ ಅಲ್ಲಿನ ಬಡಜನರಿಗೆ ಎದುರಾಗಿದೆ. ಇಂತಹ ಬಿಕ್ಕಟ್ಟಿನಲ್ಲೇ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ.

ಅಜಿಜ್‌ ಗುಲ್‌ ಎಂಬ ಮಹಿಳೆಯ ಪತಿ ತಮ್ಮ 10 ವರ್ಷದ ಹೆಣ್ಣು ಮಗಳನ್ನು ಬೇರೊಬ್ಬರಿಗೆ ಮಾರಾಟ ಮಾಡಿದ್ದಾರೆ. ಕುಟುಂಬದ ಉಳಿದ ಮಕ್ಕಳ ಕೂಳಿಗಾಗಿ ಹೆಂಡತಿಗೂ ತಿಳಿಯದಂತೆ ಹೆಣ್ಣುಮಗಳನ್ನು ಹಣಕ್ಕಾಗಿ ಮಾರಾಟ ಮಾಡಿದ್ದಾನೆ. ಇದನ್ನೂ ಓದಿ: ಮಾಜಿ ಸೈನಿಕರನ್ನು ಹತ್ಯೆಗೈದ ತಾಲಿಬಾನಿಗಳ ವಿರುದ್ಧ ಅಫ್ಘಾನ್ ಮಹಿಳೆಯರ ಪ್ರತಿಭಟನೆ

TALIBAN WOMEN

ಗುಲ್‌ ದಂಪತಿಗೆ ಆರು ಮಂದಿ ಮಕ್ಕಳಿದ್ದರು. ಆಹಾರವಿಲ್ಲದೇ ಕಂಗೆಟ್ಟಿದ್ದ ಕುಟುಂಬ ಕೊನೆಗೆ ತಮ್ಮ ಒಬ್ಬಳು ಪುತ್ರಿಯನ್ನು ಮಾರಾಟ ಮಾಡಿದ್ದಾರೆ. ಆದರೆ ತನಗೆ ತಿಳಿಯದಂತೆ ಪತಿ, ಮಗಳನ್ನು ಮಾರಾಟ ಮಾಡಿರುವುದನ್ನು ಪತ್ನಿ ಖಂಡಿಸಿದ್ದಾಳೆ.

ಪತಿಯ ವರ್ತನೆಯಿಂದ ಬೇಸತ್ತ ಗುಲ್‌ ಆತನಿಗೆ ವಿಚ್ಛೇದನ ನೀಡಿದ್ದಾಳೆ. ಒಪ್ಪಂದದಂತೆ ತನ್ನ ನೆರೆಹೊರೆಯವರಿಂದ ಹಣ ಸಹಾಯ ಪಡೆದು ವಿಚ್ಛೇದಿತ ಪತಿಗೆ 1 ಲಕ್ಷ ಅಫ್ಘಾನೀಸ್‌ ಅನ್ನು ನೀಡಿದ್ದಾಳೆ. ಇದನ್ನೂ ಓದಿ: ಅನುಮತಿ ಇಲ್ಲದೇ ಯಾರೋ ಮನೆಯೊಳಗೆ ಬಂದರೆಂದು ತಪ್ಪಾಗಿ ಭಾವಿಸಿ ಮಗಳನ್ನೇ ಕೊಂದ ತಂದೆ!

TALIBAN 2 1

ಪಶ್ಚಿಮ ಅಫ್ಘಾನ್‌ ಭಾಗದಲ್ಲಿ ಹೆಣ್ಣು ಮಕ್ಕಳಿಗೆ 15 ವರ್ಷ ತುಂಬುತ್ತಿದ್ದಂತೆ ಬೇರೆಯವರಿಗೆ ಮದುವೆ ಮಾಡುವುದು ಸಾಮಾನ್ಯ. ಮದುವೆಯಾಗುವ ವರನ ಕಡೆಯವರು ಒಪ್ಪಂದದಂತೆ ಹೆಣ್ಣಿನ ಮನೆಯವರಿಗೆ ಹಣ ನೀಡುತ್ತಾರೆ. ಆದರೆ ತಾಲಿಬಾನ್‌ ಆಡಳಿತದಿಂದಾಗಿ ಬಡಜನರ ಜೀವನ ಡೋಲಾಯಮಾನವಾಗಿದೆ. ಒಪ್ಪೊತ್ತಿನ ಊಟಕ್ಕೂ ಪರಿತಪಿಸುವ ಪರಿಸ್ಥಿತಿ ಇರುವುದರಿಂದ, ಕೆಲವರು ತಮ್ಮ ಹೆಣ್ಣು ಮಕ್ಕಳಿಗೆ 15 ವರ್ಷ ತುಂಬುವುದರೊಳಗೇ ಹಣ ಪಡೆದು ಬೇರೆಯವರಿಗೆ ಒಪ್ಪಿಸಲು ಮುಂದಾಗುತ್ತಿದ್ದಾರೆ.

ಅಫ್ಘಾನಿಸ್ತಾನದಿಂದ ತನ್ನ ಸೇನಾ ಪಡೆಯನ್ನು ಅಮೆರಿಕ ವಾಪಸ್‌ ಕರೆಸಿಕೊಂಡ ನಂತರ ತಾಲಿಬಾನಿಗಳು ಅಪ್ಘಾನಿಸ್ತಾನವನ್ನು ವಶಪಡಿಸಿಕೊಂಡು ಪ್ರಾಬಲ್ಯ ಸ್ಥಾಪಿಸಿದರು. ತದನಂತರ ಅಲ್ಲಿನ ಬಡಜನರು ಜೀವನ ನಡೆಸಲು ಕಷ್ಟಪಡುತ್ತಿದ್ದಾರೆ. ಸರ್ಕಾರಿ ಉದ್ಯೋಗಿಗಳು ತಿಂಗಳ ಸಂಬಳವಿಲ್ಲದೇ ಕಂಗೆಟ್ಟಿದ್ದಾರೆ. ದೇಶದ ಪರಿಸ್ಥಿತಿ ದಿನೇ ದಿನೆ ಹದಗೆಡುತ್ತಿದೆ.

TAGGED:afghanistanchildren sellTalibanಅಪ್ಘಾನಿಸ್ತಾನತಾಲಿಬಾನ್ಮಕ್ಕಳ ಮಾರಾಟ
Share This Article
Facebook Whatsapp Whatsapp Telegram

Cinema news

rishab shetty public tv anniversary
ಪಬ್ಲಿಕ್‌ ಟಿವಿಗೆ ಇನ್ನೂ ಟೀನೇಜ್‌, ರಂಗಣ್ಣ ಸರ್‌ ಈ ಸಮಾಜಕ್ಕೆ ದೊಡ್ಡ ಕೊಡುಗೆ: ರಿಷಬ್‌ ಶೆಟ್ಟಿ
Bengaluru City Cinema Latest Main Post Sandalwood
Sathish Ninasam Public TV Anniversary
ಆಟೋ ಡ್ರೈವರ್‌ಗಳಿಂದ ಕಾರಿನಲ್ಲಿ ಓಡಾಡೋರು ನಿಮ್ಮನ್ನ ಇಷ್ಟ ಪಡ್ತಾರೆ, ರಂಗಣ್ಣ ಸರ್‌ ಮಾಸ್‌ ಹೀರೋ: ನೀನಾಸಂ ಸತೀಶ್‌ ಬಣ್ಣನೆ
Bengaluru City Cinema Latest Main Post Sandalwood
Toxic
ʻಟಾಕ್ಸಿಕ್‌ʼ ಚಿತ್ರತಂಡಕ್ಕೆ ಮತ್ತೊಂದು ಸಂಕಷ್ಟ – ಸಿನಿಮಾ ವಿರುದ್ಧ ಕ್ರೈಸ್ತರ ಒಕ್ಕೂಟ ದೂರು
Bengaluru City Cinema Latest Main Post Sandalwood
nandini milk sudha rani
ನಂದಿನಿ ಉತ್ಪನ್ನಗಳ ಪ್ರಚಾರ ರಾಯಭಾರಿಯಾಗಿ ನಟಿ ಸುಧಾರಾಣಿ ಆಯ್ಕೆ
Bengaluru City Cinema Latest Main Post Sandalwood

You Might Also Like

ICC Mens T20 World Cup ind vs Namibia Jasprit Bumrahs stunning catch Axar Patel shocked
Cricket

ಬುಮ್ರಾ ಸ್ಟನ್ನಿಂಗ್‌ ಕ್ಯಾಚ್‌ – ಅಕ್ಷರ್‌ ಪಟೇಲ್‌ ಶಾಕ್‌!

Public TV
By Public TV
1 hour ago
kids died accident
Districts

ಶಾಲಾ ಬಸ್ ಹರಿದು ಮಕ್ಕಳು ಸಾವು – ಸ್ವಗ್ರಾಮದಲ್ಲಿ ನೆರವೇರಿದ ಅಂತ್ಯಕ್ರಿಯೆ

Public TV
By Public TV
2 hours ago
Ishan Kishan Hardik Pandya
Cricket

ಕಿಶನ್‌ ದಾಖಲೆಯ ಫಿಫ್ಟಿ, ಪಾಂಡ್ಯ ಆಲ್‌ರೌಂಡರ್‌ ಆಟ – ನಮೀಬಿಯಾ ವಿರುದ್ಧ 93 ರನ್‌ಗಳ ಭರ್ಜರಿ ಜಯ

Public TV
By Public TV
2 hours ago
DK Shivakumar Rahul Gandhi Sonia Gandhi 1 1
Bengaluru City

ಸಿಎಂ ಪಟ್ಟಕ್ಕೆ ಡಿಕೆಶಿ ಪಟ್ಟು – ಸೋನಿಯಾ, ರಾಹುಲ್‌ ಕೊಟ್ಟ ಅಭಯವೇನು?

Public TV
By Public TV
2 hours ago
Chikkamagaluru
Chikkamagaluru

2 ದಿನಗಳ ಬಳಿಕ ಮತ್ತೆ ಕಾಫಿನಾಡಲ್ಲಿ ಅಪರಿಚಿತ ಲಘು ವಿಮಾನ ಹಾರಾಟ

Public TV
By Public TV
3 hours ago
RCB 3
Bengaluru City

ಆರ್‌ಸಿಬಿ ಅಭಿಮಾನಿಗಳಿಗೆ ಗುಡ್‌ನ್ಯೂಸ್‌ – ಚಿನ್ನಸ್ವಾಮಿಯಲ್ಲಿ ಐಪಿಎಲ್‌ಗೆ ಸರ್ಕಾರ ಅನುಮತಿ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?