ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಮಾನ್ಯ ನಾಯ್ಡು ಕುಟುಂಬದೊಂದಿಗೆ ವಿದೇಶದಲ್ಲಿ ದೀಪಾವಳಿ ಹಬ್ಬವನ್ನು ಸೆಲಬ್ರಿಟ್ ಮಾಡಿದ್ದಾರೆ.
ದೇಶಾದ್ಯಂತ ದೀಪಾವಳಿಯನ್ನು ಜನ ಬಹಳ ಸಡಗರದಿಂದ ಆಚರಿಸುತ್ತಿದ್ದಾರೆ. ಆದರೆ ಭಾರತದಲ್ಲಿಯೇ ಇದ್ದರೂ ಕೆಲ ಮಂದಿ ತಮ್ಮ ಆಚಾರ, ವಿಚಾರವನ್ನು ಮರೆತುಬಿಟ್ಟಿರುತ್ತಾರೆ. ಆದರೆ ಭಾರತದಿಂದ ದೂರ ಇದ್ದರು, ಇಲ್ಲಿನ ಸಂಪ್ರದಾಯ, ಪದ್ಧತಿಯನ್ನು ಮರೆಯದಿರುವ ನಟಿ ಮಾನ್ಯ ತಾಯಿ ಮತ್ತು ಮಗಳೊಂದಿಗೆ ದೀಪಾವಳಿಯನ್ನು ಸಖತ್ ಗ್ರ್ಯಾಂಡ್ ಆಗಿ ಸೆಲಬ್ರಿಟ್ ಮಾಡಿದ್ದಾರೆ. ಸದ್ಯ ಈ ಹಬ್ಬದ ಫೋಟೋ ಹಾಗೂ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನಿಮ್ಮ ಪಾದಕ್ಕೆ ನಮಸ್ಕಾರ ಮಾಡ್ತೀನಿ, ಪುನೀತ್‍ಗೆ ಕೆಟ್ಟ ಹೆಸ್ರು ತರಬೇಡಿ: ರಾಘವೇಂದ್ರ ರಾಜ್ ಕುಮಾರ್
ದುಬೈನಲ್ಲಿ ಕುಟುಂಬದೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಿರುವ ಮಾನ್ಯ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋ ಹಂಚಿಕೊಂಡಿದ್ದು, ಮಾನ್ಯ ಅವರ ತಾಯಿ, ಮಾನ್ಯ ಹಾಗೂ ಅವರ ಪುತ್ರಿ ಒಂದೇ ಬಣ್ಣದ ಡ್ರೆಸ್ ಧರಿಸಿ ಕೈಯಲ್ಲಿ ದೀಪ ಹಿಡಿದು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ. ವಿಶೇಷವೆಂದರೆ ಮಾನ್ಯ ಹಾಗೂ ಅವರ ಪುತ್ರಿ ಒಂದೇ ರೀತಿ ವಿನ್ಯಾಸಗೊಂಡಿರುವ ಉಡುಪನ್ನು ಧರಿಸಿದ್ದಾರೆ.
View this post on Instagram
ಫೋಟೋ ಜೊತೆಗೆ ಹ್ಯಾಪಿ ದೀಪಾವಳಿ, ಅಪ್ಪ ದುಬೈನಲ್ಲಿದ್ದಾರೆ. ಹಾಗಾಗಿ ಮನೆಯಲ್ಲಿ ಮೂರು ತಲೆಮಾರಿನ ಮಹಿಳೆಯರು ದೀಪಾವಳಿಯಲ್ಲಿ ಒಟ್ಟಿಗೆ ಪ್ರಾರ್ಥಿಸಿದ್ದೇವೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ನೇತ್ರದಾನಕ್ಕೆ ಸ್ಫೂರ್ತಿಯಾದ ” ರಾಜರತ್ನ” – ಅಪ್ಪು ಬಳಿಕ ಹೆಚ್ಚಾಗ್ತಿದೆ ನೇತ್ರದಾನಿಗಳ ಸಂಖ್ಯೆ
View this post on Instagram
ಕೊರೊನಾ ಸಮಯದಲ್ಲಿ ಬಣ್ಣದ ಲೋಕದಲ್ಲಿ ಕೆಲಸ ಮಾಡುವ ಬಹುತೇಕ ಕಲಾವಿದರು, ತಂತ್ರಜ್ಞರು ಹಾಗೂ ಕಾರ್ಮಿಕರು ಸಂಕಷ್ಟದಲ್ಲಿದ್ದರು. ಈ ವೇಳೆ ಸ್ಯಾಂಡಲ್‍ವುಡ್‍ನ ಹಲವಾರು ಸ್ಟಾರ್ ನಟ, ನಟಿಯರ ಮಧ್ಯೆ ಅಮೆರಿಕಾದಲ್ಲಿ ನೆಲಸಿರುವ ಮಾನ್ಯ ಅವರು ಕೂಡ ಸಹಾಯ ಮಾಡಿದ್ದರು.