Bengaluru CityCinemaDistrictsKarnatakaLatestMain PostSandalwood

ನಿಮ್ಮ ಪಾದಕ್ಕೆ ನಮಸ್ಕಾರ ಮಾಡ್ತೀನಿ, ಪುನೀತ್‍ಗೆ ಕೆಟ್ಟ ಹೆಸ್ರು ತರಬೇಡಿ: ರಾಘವೇಂದ್ರ ರಾಜ್ ಕುಮಾರ್

ಬೆಂಗಳೂರು: ನಿಮ್ಮ ಪಾದಕ್ಕೆ ನಮಸ್ಕಾರ ಮಾಡಿ ಮನವಿ ಮಾಡುತ್ತೇನೆ. ನಾವು ನೋವಿನಲ್ಲಿದ್ದೇವೆ, ಪುನೀತ್‍ಗೆ ಕೆಟ್ಟ ಹೆಸರು ತರಬೇಡಿ ಎಂದು ನಟ ರಾಘವೇಂದ್ರ ರಾಜ್‍ಕುಮಾರ್ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ಸ್ಯಾಂಡಲ್‍ವುಡ್ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಗಲಿಕೆಯಿಂದಾಗಿ ಮನನೊಂದು ಅಭಿಮಾನಿಗಳು ಆತ್ಮಹತ್ಯೆಗೆ ಶರಣಾಗುತ್ತಿರುವ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ನಟ ರಾಘವೇಂದ್ರ ರಾಜ್‍ಕುಮಾರ್ ಅವರು, ಅಭಿಮಾನಿಗಳು ದೇವರು ಅಂತ ಅಪ್ಪಾಜಿ ಹೇಳುತ್ತಾರೆ. ದೇವರುಗಳಾದ ನೀವು ಆತ್ಮಹತ್ಯೆ ಮಾಡಿಕೊಳ್ಳಬೇಡಿ. ನಿಮ್ಮ ಪಾದಕ್ಕೆ ನಮಸ್ಕಾರ ಮಾಡಿ ಮನವಿ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ – ವಾಹನ ಸವಾರರ ಮಿಶ್ರ ಪ್ರತಿಕ್ರಿಯೆ

ನಾವು ಈಗಾಗಲೇ ನೋವಿನಲ್ಲಿ ಇದ್ದೇವೆ, ಪುನೀತ್ ಕೆಟ್ಟ ಹೆಸರು ತರಬೇಡಿ ಮತ್ತು ನಿಮ್ಮ ತಂದೆ-ತಾಯಿಗೆ ನೋವು ಕೊಡಬೇಡಿ. ಒಬ್ಬರ ಹಿಂದೆ ಒಬ್ಬರು ಹೋದರೆ ಭೂಮಿ ಮೇಲೆ ಯಾರು ಇರಲ್ಲ. ಸಣ್ಣ ಮಕ್ಕಳಿಗೆ ಇದನ್ನೇ ಹೇಳಿಕೋಡ್ತೀರಾ. ನಿಮ್ಮ ಪಾದಕ್ಕೆ ನಮಸ್ಕರಿಸುತ್ತೇನೆ ದುಡುಕಿನ ನಿರ್ಧಾರ ಮಾಡಬೇಡಿ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪುನೀತ್‌ರ 11ನೇ ದಿನದ ಪುಣ್ಯಾರಾಧನೆ ಮನೆಯಲ್ಲೇ ನಡೆಯುತ್ತೆ: ಕುಟುಂಬದ ಮೂಲ

ಇದೇ ವೇಳೆ ಪುನೀತ್ 11ನೇ ಪುಣ್ಯಾರಾಧನೆ  ದಿನದ ಕಾರ್ಯಕ್ರಮದ ಪ್ಲಾನ್ ಆಗುತ್ತಿದೆ. ಪ್ಲಾನ್ ಏನು ಎಂಬುವುದರ ಬಗ್ಗೆ ನಂತರದ ದಿನಗಳಲ್ಲಿ ಹೇಳುತ್ತೇನೆ. ಸದ್ಯ ಅಪ್ಪು ಸಮಾಧಿ ಬಳಿಗೆ ದಿನ ಹೋಗುತ್ತಿದ್ದೇನೆ. ಅಪ್ಪು ಸಮಾಧಿ ವೀಕ್ಷಿಸಲು ಅಭಿಮಾನಿಗಳು ಬರುತ್ತಿದ್ದಾರೆ. ಅಭಿಮಾನಿಗಳಲ್ಲಿ ನಾವು ಬೇಡಿಕೊಳ್ಳುತ್ತೇನೆ, ಅಪ್ಪು ಪತ್ನಿ ಅಶ್ವಿನ ಅವರು ಕೂಡ ನೊಂದು ಕೊಂಡಿದ್ದಾರೆ. ದಯವಿಟ್ಟು ಯಾರು ದುಡುಕಬಾರದು ಅನಾಹುತ ಮಾಡಿಕೊಳ್ಳಬಾರದು ಎಂದು ತಿಳಿಸಿದ್ದಾರೆ.  ಇದನ್ನೂ ಓದಿ: ಪುನೀತ್ ಭೇಟಿಯಾಗುವ ಸೌಭಾಗ್ಯ ನನಗೆ ಸಿಕ್ಕಿಲ್ಲ: ವಿಜಯ್ ಸೇತುಪತಿ

Leave a Reply

Your email address will not be published.

Back to top button