ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಬಾಲಿವುಡ್ ನಟಿ ಅನುಷ್ಕಾ ದಂಪತಿ ಮುದ್ದು ಮಗಳಾದ, ವಮಿಕಾ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಪುತ್ರಿ ವಮಿಕಾ ಜೊತೆ ಕಾಲಕಳೆಯುತ್ತಿರುವ ಕೊಹ್ಲಿ ಫೋಟೋವನ್ನು ಅನುಷ್ಕಾ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ವೈರಲ್ ಆಗಿದೆ. ಪುತ್ರಿ ಜೊತೆ ಆಟವಾಡುತ್ತಿರುವ ಕೊಹ್ಲಿಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಇದುವರೆಗೂ ವಮಿಕಾ ಮುಖದ ಫೋಟೋ ರಿವೀಲ್ ಮಾಡಿಲ್ಲ. ಈಗಲೂ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಫೋಟೋದಲ್ಲಿ ವಮಿಕಾ ಮುಖ ಕಾಣುತ್ತಿಲ್ಲ. ಈ ಹಿಂದಿನಂತೆ ರಹಸ್ಯ ಉಳಿಸಿಕೊಂಡೇ ಫೋಟೋ ಶೇರ್ ಮಾಡಿದ್ದಾರೆ. ಇದನ್ನೂ ಓದಿ: ನಟಿ ಶ್ರೀಲೀಲಾ ನನ್ನ ಮಗಳಲ್ಲ – ವಿವಾದಾತ್ಮಕ ಹೇಳಿಕೆ ಕೊಟ್ಟ ಉದ್ಯಮಿ
View this post on Instagram
ಐಪಿಎಲ್ ಟೂರ್ನಿ ಮುಗಿಸಿದ ಕೊಹ್ಲಿ ಕ್ವಾರಂಟೈನ್ಲ್ಲಿದ್ದರು. ಹೀಗಾಗಿ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಭೇಟಿಯಾಗಿರಲಿಲ್ಲ. ಕ್ವಾರಂಟೈನ್ ಮುಗಿಸಿದ ಕೊಹ್ಲಿ ಮತ್ತೆ ಜೊತೆಯಾಗಿದ್ದಾರೆ. ಕೊಹ್ಲಿ ಸದ್ಯ ಪಂದ್ಯದ ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ. ಅಕ್ಟೋಬರ್ 24 ರಂದು ಟೀಂ ಇಂಡಿಯಾ, ಪಾಕಿಸ್ತಾನ ವಿರುದ್ಧ ಹೋರಾಟ ನಡೆಸಲಿದೆ. ಈ ಪಂದ್ಯಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ರೋಚಕ ಪಂದ್ಯಕ್ಕಾಗಿ ಕೌಂಟ್ಡೌನ್ ಆರಂಭಗೊಂಡಿದೆ. ಇದನ್ನೂ ಓದಿ: ರಾಜ್ಯದಲ್ಲಿ ಕೊರೊನಾ ಪ್ರಕರಣ ಏರಿಳಿತ – ಇಂದು 214 ಕೇಸ್, 12 ಸಾವು