ಚಲನಚಿತ್ರ ವಾಣಿಜ್ಯ ಮಂಡಳಿ ಮೊರೆ ಹೋದ ರಾಬರ್ಟ್ ಚಿತ್ರತಂಡ

Public TV
1 Min Read
robert 1024x586 1

ಬೆಂಗಳೂರು: ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ ತೆಲಗು ಅವತರಣಿಕೆಯನ್ನು ಆಂಧ್ರಪ್ರದೇಶದಲ್ಲಿ ಬಿಡುಗಡೆ ಮಾಡಲು ಅವಕಾಶ ಮಾಡಿಕೊಡುವಂತೆ ನಿರ್ಮಾಪಕರಾದ ಉಮಾಪತಿ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿಯನ್ನು ಸಲ್ಲಿಸಿದ್ದಾರೆ.

ROBERT DARSHAN 1

ಪತ್ರದಲ್ಲಿ ಏನಿದೆ?
ನಿರ್ಮಾಪಕರಾದ ಉಮಾಪತಿ ಮತ್ತು ನಿರ್ದೇಶಕ ತರುಣ್ ಸೇರಿ ಏಶಿಯನ್ ಸುನೀಲ್ ಎಂಬುವರ ಜೊತೆಯಲ್ಲಿ ಮಾತುಕತೆ ನಡೆಸಿದೆ. ಮಾರ್ಚ್ 11ರಂದು ತೆಲಗು ಅವತರಣಿಕೆಯಲ್ಲಿ ಸಿನಿಮಾ ಬಿಡುಗಡೆಮಾಡಲು ಜನವರಿ20 ರಂದು ತೆಲಂಗಾಣದದಲ್ಲಿ ಸಭೆ ಮಾಡಿ ಮಾತುಕತೆ ನಡೆಸಿತ್ತು. ಈ ವೇಳೆ ಏಶಿಯನ್ ಸುನೀಲ್ ಮತ್ತು ಆಂಧ್ರಪ್ರದೇಶದಲ್ಲಿ ಸುರೇಶ್ ಬಾಬು ಪ್ರೊಡಕ್ಷನ್‍ನ ಶ್ರೀ ಜಗದೀಶ್ ಅವರು ಮಾರ್ಚ್ 11 ರಂದು ಚಿತ್ರ ಬಿಡುಗಡೆ ಮಾಡಲು ಒಪ್ಪಿದ್ದರು.

robert

ಮಾತುಕತೆ ನಡೆದ ಕೆಲವು ದಿನಗಳ ನಂತರ ಜ.24 ರಂದು ಸುನೀಲ್ ಮತ್ತು ಜಗದೀಶ್ ದೂರವಾಣಿ ಕರೆಮಾಡಿ ಸಿನಿಮಾವನ್ನು ಮಾರ್ಚ್ 11ಕ್ಕೆ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದರು. ಕಾರಣ ಈಗಾಗಲೇ ನಾಲ್ಕು ತೆಲಗು ಚಿತ್ರಗಳು ಬಿಡುಗಡೆಗೆ ಸಿದ್ದವಾಗಿವೆ. ಡಬ್ಬಿಂಗ್ ಚಿತ್ರಕ್ಕೆ ಆದ್ಯತೆ ನೀಡಬಾರದೆಂದು ಸ್ಥಳೀಯ ಭಾಷೆಯ ತೆಲುಗು ಚಿತ್ರ ಸಂಸ್ಥೆಗಳಿಂದ ಒತ್ತಡ ಇದೆ ಎಂದು ತಿಳಿಸಿದ್ದರು.

ROBERT DARSHAN 3

ಈ ಮೂಲಕವಾಗಿ ಜಗದೀಶ್ ಮತ್ತು ಸುನೀಲ್ ಅವರು ತೆಲಗು ಪ್ರಾಂತ್ಯದಲ್ಲಿ ರಾಬರ್ಟ್ ಚಿತ್ರವನ್ನು ಬಿಡುಗಡೆ ಮಾಡಲು ಕೊಡುವುದಿಲ್ಲ ಎಂದು ತಿಳಿದುಬಂತು. ಆದ್ದರಿಂದ ವಾಣಿಜ್ಯ ಮಂಡಳಿ ರಾಬರ್ಟ್ ತೆಲಗು ಅವತರಣಿಕೆಯನ್ನು ಕರ್ನಾಟಕದ ಜೊತೆಗೆ ಆಂಧ್ರಪ್ರದೇಶದಲ್ಲಿಯೂ ಚಿತ್ರ ಏಕಕಾಲದಲ್ಲಿ ಬಿಡುಗಡೆಗೆ ಅವಕಾಶ ಮಾಡಿಕೊಟ್ಟು ಸಹಕರಿಸಬೇಕು ಎಂದು ನಿರ್ಮಾಪಕರಾದ ಉಮಾಪತಿಯವರು ಚಲನ ಚಿತ್ರ ವಾಣಿಜ್ಯ ಮಂಡಳಿಗೆ ಮನವಿಯನ್ನು ಸಲ್ಲಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *