Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ‘ಕೊರೊನಾ’ ಎಂದು ಕೂಗಿ ವೈದ್ಯೆಗೆ ಕಿರುಕುಳ- ಅವಾಚ್ಯ ಶಬ್ದಗಳಿಂದ ನಿಂದಿಸಿದ ಸ್ಥಳೀಯರು
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Corona | ‘ಕೊರೊನಾ’ ಎಂದು ಕೂಗಿ ವೈದ್ಯೆಗೆ ಕಿರುಕುಳ- ಅವಾಚ್ಯ ಶಬ್ದಗಳಿಂದ ನಿಂದಿಸಿದ ಸ್ಥಳೀಯರು

Corona

‘ಕೊರೊನಾ’ ಎಂದು ಕೂಗಿ ವೈದ್ಯೆಗೆ ಕಿರುಕುಳ- ಅವಾಚ್ಯ ಶಬ್ದಗಳಿಂದ ನಿಂದಿಸಿದ ಸ್ಥಳೀಯರು

Public TV
Last updated: May 14, 2020 4:06 pm
Public TV
Share
2 Min Read
Corona Lab a
SHARE

ನವದೆಹಲಿ: ಕೋವಿಡ್-19 ಐಸೋಲೇಷನ್ ವಾರ್ಡಿನಲ್ಲಿ ಕೆಲಸ ಮಾಡುತ್ತಿದ್ದ ವೈದ್ಯೆಯೊಬ್ಬರು ತಮ್ಮ ಮನೆಗೆ ವಾಪಸ್ಸಾದಾಗ ಸ್ಥಳೀಯರು ಅವರನ್ನು ಹಿಗ್ಗಾಮುಗ್ಗ ನಿಂದಿಸಿದ ಘಟನೆಯೊಂದು ದೆಹಲಿಯಲ್ಲಿ ನಡೆದಿದೆ.

ಈ ಘಟನೆ ದಕ್ಷಿಣ ದೆಹಲಿಯ ವಸಂತ್ ಕುಂಜ್ ಪ್ರದೇಶದಲ್ಲಿ ನಡೆದಿದೆ. ಕುಂಜ್ ಪ್ರದೇಶದಲ್ಲಿ ಮಹಿಳೆ ಒಂಟಿಯಾಗಿ ನೆಲೆಸಿದ್ದಾರೆ. ಹೀಗಾಗಿ ಅವರು ಐಸೋಲೇಷನ್ ವಾರ್ಡಿನಿಂದ ಮನೆಗೆ ವಾಪಸ್ಸಾಗುತ್ತಿದ್ದಂತೆಯೇ ಸ್ಥಳೀಯರು ಬೆದರಿಕೆ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಲು ಆರಂಭಿಸಿದ್ದರು. ಅಷ್ಟೇ ಅಲ್ಲದೆ ಅವರನ್ನು ಕೂಡಿ ಹಾಕಿದ್ದರು.

Vasant Kunj A

ಕೋವಿಡ್-19 ರೋಗಿಗಳ ಸ್ಯಾಂಪಲ್‍ಗಳನ್ನು ಸಂಗ್ರಹಿಸುವಾಗ ವೈದ್ಯರಿಗೂ ಕೊರೊನಾ ಸೋಂಕು ತಗುಲಿರಬಹುದೆಂದು ಶಂಕಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮಹಿಳಾ ವೈದ್ಯೆಯನ್ನು ಎರಡು ಬಾರಿ ಟೆಸ್ಟ್ ಗೆ ಒಳಪಡಿಸಿದ್ದು, ವರದಿ ನೆಗೆಟಿವ್ ಬಂದಿದೆ. ಹೀಗಾಗಿ ವೈದ್ಯೆ ಬುಧವಾರ ವೈಎಂಸಿಎ ಐಸೋಲೇಷನದ ಕೇಂದ್ರದಿಂದ ಮನೆಗೆ ಬಂದಿದ್ದಾರೆ. ಹೀಗೆ ಮನೆಗೆ ವಾಪಸ್ಸಾಗುತ್ತಿದ್ದಂತೆಯೇ ಅಕ್ಕ-ಪಕ್ಕದ ಮನೆಯವರು ಅವಾಚ್ಯ ಶಬ್ದಗಳಿಂದ ನಿಂದಿಸಲು ಆರಂಭಿಸಿದ್ದಾರೆ.

ವೈದ್ಯ ಸ್ಥಳೀಯ ಪೊಲೀಸ್ ಠಾಣೆಗೆ ನೀಡಿದ ಲಿಖಿತ ದೂರಿನಲ್ಲಿ, “ನಾನು ದೆಹಲಿಯ ತಿಸ್ ಹಜಾರ್ ನಲ್ಲಿರುವ ಪೊಲೀಸ್ ಲೈನ್ ಆಸ್ಪತ್ರೆಯಲ್ಲಿ ಹಿರಿಯ ವೈದ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಅಲ್ಲದೆ ವ್ಯಕ್ತಿಯೊಬ್ಬ ನನ್ನನ್ನೇ ದುರುಗುಟ್ಟಿ ನೋಡುತ್ತಾ ಕೊರೊನಾ ಎಂದು ಕಿರುಚಾಡಲು ಆರಂಭಿಸಿದ್ದ. ಹೀಗಾಗಿ ನಾನು ಈ ಸಮಾಜದಲ್ಲಿ ಬದುಕಲು ಸಾಧ್ಯವಿಲ್ಲ” ತಿಳಿಸಿದ್ದಾರೆ.

corona 7

“ನಾನು ಐಸೋಲೇಷನ್ ವಾರ್ಡಿನಲ್ಲಿ ಕೆಲಸ ಮಾಡುತ್ತಿದ್ದೆ. ಹೀಗಾಗಿ ಎರಡು ಬಾರಿ ನನ್ನ ಟೆಸ್ಟ್ ಮಾಡಲಾಗಿದೆ. ಈ ವೇಳೆ ನನಗೆ ಕೊರೊನಾ ನೆಗೆಟಿವ್ ಬಂದಿದೆ ಎಂದು ಹೇಳಿಕೊಳ್ಳಲು ಕೂಡ ಸ್ಥಳೀಯರು ಬಿಡದೇ ಬೆದರಿಕೆ ಹಾಕಲು ಶುರು ಮಾಡಿದ್ದರು. ಜೊತೆಗೆ ಕೂಡಿ ಹಾಕಲು ಯತ್ನಿಸಿದ್ದರು ಎಂದು ವೈದ್ಯೆ ತಮ್ಮ ದೂರಿನಲ್ಲಿ ವಿವರಿಸಿದ್ದಾರೆ.

ಕೊನೆಗೆ ವೈದ್ಯೆ ವ್ಯಕ್ತಿ ಜೊತೆ ವಾಗ್ವಾದ ನಡೆಸುವುದನ್ನು ನಿಲ್ಲಿಸಿ ನೇರವಾಗಿ ಸ್ಥಳೀಯ ಕಲ್ಯಾಣ ಸಂಘಕ್ಕೆ ದೂರು ನೀಡಲು ಹೋಗಿದ್ದರು. ಇದೇ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳು ವೈದ್ಯೆಯ ಮನೆಯನ್ನು ಲಾಕ್ ಮಾಡಿದ್ದರು. ಅಲ್ಲದೆ ನೀನು ಹೇಗೆ ಮನೆಯೊಳಗೆ ಹೋಗುತ್ತಿಯಾ ಅಂತ ನೋಡುತ್ತೇವೆ. ಅದ್ಯಾರ ಜೊತೆ ಬಳಿ ದೂರು ಹೇಳಿಕೊಳ್ಳುತ್ತಿಯೋ ಹೇಳ್ಕೋ. ಸದ್ಯ ನೀನು ಮನೆಯಿಂದ ಹೊರಗಿದ್ದು, ಇನ್ನು ಒಳಗಡೆ ಬರೋಕೆ ಆಗಲ್ಲ. ಅದ್ಯಾರನ್ನು ಕರೀತಿಯೋ ಕರಿ ಎಂದು ಅವಾಜ್ ಹಾಕಿದ್ದಾರೆ. ಈ ವೇಳೆ ವೈದ್ಯೆ ಪೊಲೀಸ್ ಹಾಗೂ ಆಸ್ಪತ್ರೆಯ ಸಿಡಿಎಂಓ ಡಾ. ಬಾಲ ಅವರನ್ನು ಸಹಾಯ ಮಾಡುವಂತೆ ಬೇಡಿಕೊಂಡಿದ್ದಾರೆ.

Corona Virus

ಅಲ್ಲದೆ ನೆರೆಹೊರೆಯವರ ಕಾಟವನ್ನು ತನ್ನ ವೈದ್ಯರೊಂದಿಗೆ ತಿಳಿಸಿದ್ದಾರೆ. ಸ್ಥಳೀಯ ನಡತೆ ನನಗೆ ಭಯ ಹುಟ್ಟಿಸಿದೆ. ಈ ಪ್ರದೇಶದಲ್ಲಿ ಮುಂದೆ ನನಗೆ ರಕ್ಷಣೆ ಸಿಗುತ್ತೆ ಎಂಬುದರಲ್ಲಿ ನನಗೆ ನಂಬಿಕೆ ಇಲ್ಲ ಎಂದು ಸ್ಟೇಷನ್ ಹೌಸ್ ಆಫೀಸರ್ ಗೆ ಬರೆದ ಪತ್ರದಲ್ಲಿ ತನ್ನ ಅಳಲು ತೋಡಿಕೊಂಡಿದ್ದಾರೆ. ಈ ಸಂಬಂಧ ತನಿಖೆ ನಡೆಸುವುದಾಗಿ ಪೊಲೀಸರು ವೈದ್ಯೆಗೆ ಭರವಸೆ ನೀಡಿದ್ದಾರೆ.

TAGGED:ಕೊರೊನಾ ವೈರಸ್ಕೋವಿಡ್ 19ನವದೆಹಲಿಪಬ್ಲಿಕ್ ಟಿವಿವೈದ್ಯೆ
Share This Article
Facebook Whatsapp Whatsapp Telegram

Cinema news

Rakshas kannada Web Series
ತರುಣ್ ಸುಧೀರ್ ನಿರ್ಮಾಣದಲ್ಲಿ ರಾಕ್ಷಸ ವೆಬ್ ಸಿರೀಸ್
Cinema Latest Sandalwood Top Stories
Veera Kambal Trailer Released The Glory of Tulunad Revealed Adithya SV Rajendra Singh Babu Kadri Manikanth
ವೀರ ಕಂಬಳ ಟ್ರೈಲರ್ ಬಿಡುಗಡೆ : ತುಳುನಾಡಿನ ವೈಭವ ಅನಾವರಣ
Cinema Latest Sandalwood
Rashmika Mandanna Vijay Devarakonda 1
ರಶ್ಮಿಕಾ, ವಿಜಯ್ ಮದುವೆಗೆ ಫೋನ್ ಬ್ಯಾನ್ – ವಿಡಿಯೋ ಚಿತ್ರೀಕರಣ ತಂಡದಿಂದಲೂ NDAಗೆ ಸಹಿ
Bollywood Cinema Latest Main Post
Rajanivasa
ʻರಾಜನಿವಾಸʼದಲ್ಲಿ ʻಕಾಂತಾರʼದ ಝಲಕ್‌ – ಕುತೂಹಲ ಹೆಚ್ಚಿಸಿದ ಟ್ರೇಲರ್‌!
Cinema Latest Sandalwood

You Might Also Like

PM Modi AI MANAV vision sundar pichai Sam altman Dario Amode 1
Latest

ದೆಹಲಿಯಲ್ಲಿ ಎಐ ದಿಗ್ಗಜರು – ಏನಿದು ಮೋದಿಯ MANAV ವಿಷನ್‌?

Public TV
By Public TV
2 minutes ago
Shalini Rajneesh
Bengaluru City

ಮುಡಾ ಮಾಜಿ ಆಯುಕ್ತ ನಟೇಶ್‌ ಮುಂಬಡ್ತಿಗೆ ಲಂಚ ಆರೋಪ – ಆಧಾರ ರಹಿತ ಆರೋಪಕ್ಕೆ ಕ್ರಮ: ಸ್ನೇಹಮಯಿಗೆ ಸಿಎಸ್‌ ಎಚ್ಚರಿಕೆ

Public TV
By Public TV
33 minutes ago
Magadi road psi koushik
Bengaluru City

ನಿರೀಕ್ಷಣಾ ಜಾಮೀನು ಪಡೆದು ಠಾಣೆಗೆ ಹೋದ ವ್ಯಕ್ತಿ ಮೇಲೆ ಪಿಎಸ್‌ಐ ಹಲ್ಲೆ – ಎಫ್‌ಐಆರ್ ದಾಖಲು

Public TV
By Public TV
40 minutes ago
d.k.shivakumar
Bengaluru City

ಮತದಾರರ ಪಟ್ಟಿ ದೋಷ ಸರಿಪಡಿಸಲು ಬೀದಿ, ಮನೆವಾರು ಮ್ಯಾಪಿಂಗ್ ಮಾಡಿ: ಚುನಾವಣಾ ಆಯೋಗಕ್ಕೆ ಡಿಕೆಶಿ ಪತ್ರ

Public TV
By Public TV
59 minutes ago
kumki elephants arrived Chikkamagaluru Pura capture wild elephant
Chikkamagaluru

ಚಿಕ್ಕಮಗಳೂರು | ನರಹಂತಕ ಕಾಡಾನೆ ಸೆರೆಗೆ ಸಾಕಾನೆ ಬಳಸಿ ಕಾರ್ಯಾಚರಣೆ

Public TV
By Public TV
1 hour ago
Uttarakhand highcourt
Court

ಧಾರ್ಮಿಕ ಸ್ಥಳಗಳಲ್ಲಿ ಅಕ್ರಮ ಚಟುವಟಿಕೆ – ದೇಗುಲ, ಆಶ್ರಮಗಳಲ್ಲಿ ತಪಾಸಣೆ ನಡೆಸುವಂತೆ ಉತ್ತರಾಖಂಡ ಹೈಕೋರ್ಟ್ ಸೂಚನೆ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?