ಮುಂಬೈ: ವಿಂಡೀಸ್ ವಿರುದ್ಧದ ಟಿ20 ಸರಣಿಯಿಂದ ವಿಶ್ರಾಂತಿ ಪಡೆದಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಕ್ರಿಕೆಟ್ ಅಭಿಮಾನಿಯೊಬ್ಬರಿಗೆ ದೇಶ ಬಿಟ್ಟು ತೊಲಗಿ ಎಂದು ಹೇಳುವ ಮೂಲಕ ವಿವಾದಕ್ಕೆ ಕಾರಣರಾಗಿದ್ದಾರೆ.
ಇತ್ತೀಚೆಗೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಕೊಹ್ಲಿ ಅಭಿಮಾನಿಗಳಿಗಾಗಿ ತಮ್ಮ ಆ್ಯಪ್ ಬಿಡುಗಡೆ ಮಾಡಿದ್ದರು. ಈ ಆ್ಯಪ್‍ನಲ್ಲಿ ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಉತ್ತರಿಸುವ ವೇಳೆ ಕೊಹ್ಲಿ ಗರಂ ಆಗಿ ಉತ್ತರಿಸಿದ್ದಾರೆ. ಆ್ಯಪ್‍ನಲ್ಲಿ ಕೊಹ್ಲಿಗೆ ಪ್ರಶ್ನೆ ಮಾಡಿದ್ದ ಅಭಿಮಾನಿ, ನಾನು ಭಾರತದ ಬ್ಯಾಟ್ಸ್ ಮನ್‍ಗಳ ಆಟಕ್ಕಿಂತಲೂ ಇಂಗ್ಲೆಂಡ್, ಆಸ್ಟ್ರೇಲಿಯಾ ಆಟಗಾರರ ಬ್ಯಾಟಿಂಗ್ ಹೆಚ್ಚು ಇಷ್ಟಪಡುತ್ತೇನೆ. ಟೀಂ ಇಂಡಿಯಾ ಬ್ಯಾಟ್ಸ್ ಮನ್‍ಗಳಿಗೆ ಅಂತಹ ವಿಶೇಷ ಸಾಮರ್ಥ್ಯ ಏನು ಇಲ್ಲ ಎಂದು ಹೇಳಿದ್ದರು.
Virat Kohli "I don't think you should live in India, go and live somewhere else. Why are you living in our country and loving other countries" pic.twitter.com/YbPG97Auyn
— Saj Sadiq (@SajSadiqCricket) November 6, 2018
ಅಭಿಮಾನಿಯ ಈ ಮಾತುಗಳಿಗೆ ಗರಂ ಆಗಿ ಉತ್ತರ ನೀಡಿದ ಕೊಹ್ಲಿ, ನೀವು ಭಾರತದಲ್ಲಿ ಇರಲು ಯೋಗ್ಯರಲ್ಲ ಎಂದು ನನಗೆ ಅನ್ನಿಸುತ್ತಿದೆ. ಅದ್ದರಿಂದ ನೀವು ಬೇರೆಡೆ ತೆರಳಿ. ನಮ್ಮ ದೇಶವನ್ನು ಪ್ರೀತಿ ಮಾಡದ ನೀವು ಮತ್ತೆ ಏಕೆ ದೇಶದಲ್ಲಿ ವಾಸಿಸುತ್ತಿದ್ದೀರಿ? ನೀವು ನನ್ನನ್ನು ಇಷ್ಟ ಪಟ್ಟಿಲ್ಲ ಎಂದು ಬೇಸರವಿಲ್ಲ. ಆದರೆ ನಿಮ್ಮ ಆದ್ಯತೆಗಳನ್ನು ಸರಿಯಾಗಿ ತಿಳಿದುಕೊಳ್ಳಿ ಎಂದು ಹೇಳಿದ್ದಾರೆ.
https://twitter.com/Kens103/status/1059862124225269760?
ವಿರಾಟ್ ಕೊಹ್ಲಿ ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೆಲವರು ಕೊಹ್ಲಿಗೆ ಬೆಂಬಲ ನೀಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರೆ. ಮತ್ತು ಕೆಲವರು ಕೊಹ್ಲಿ ಮಾತನ್ನು ಟೀಕೆ ಮಾಡಿದ್ದಾರೆ. ದೇಶವನ್ನು ಇಷ್ಟು ಪ್ರೀತಿ ಮಾಡುವ ಕೊಹ್ಲಿ ವಿದೇಶದಲ್ಲಿ ಏಕೆ ಮದುವೆಯಾದರು? ಕ್ರಿಕೆಟ್ ಬಿಟ್ಟು ಬೇರೆ ದೇಶಗಳ ಕ್ರೀಡೆಗೆ ಮಾತ್ರ ಏಕೆ ಬೆಂಬಲ ನೀಡುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ.
ಕೊಹ್ಲಿ ನ.21 ರಿಂದ ಆರಂಭವಾಗಲಿರುವ ಆಸೀಸ್ ಕ್ರಿಕೆಟ್ ಟೂರ್ನಿಗೆ ಮತ್ತೆ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಆಸೀಸ್ ವಿರುದ್ಧ 3 ಪಂದ್ಯಗಳ ಟಿ20, 4 ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ ಆಡಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
And his favorite cricketer is Herschelle Gibbs 😂😂pic.twitter.com/g4bS6mXdDd
— Mohammed Zubair (@zoo_bear) November 7, 2018
https://twitter.com/imtheguy007/status/1059887977403314176?
The man said indian players are overrated I don't like seeing them , basically it was just someone who hated players of india just because they are indian he was replying to a hater , he is a bit emotional and do gets pissed of easily but people are misinterpreting him.
— Prasoon (@Neo_Wanderlust) November 6, 2018

