ಬೆಂಗಳೂರು: ಇತ್ತೀಚೆಗೆ ಕಿಚ್ಚ ಸುದೀಪ್ ಭಾರತ ತಂಡದ ಕ್ರಿಕೆಟರ್ ವಿನಯ್ ಕುಮಾರ್ ಅವರ ಚಾಲೆಂಜ್ ಸ್ವೀಕರಿಸಿದ್ದರು. ವಿನಯ್ ಕುಮಾರ್ ಚಾಲೆಂಜ್ ಸ್ವೀಕರಿಸಿದ ನಂತರ ಕಿಚ್ಚ ಬಾಲಿವುಡ್ ನಟ ರಿತೇಶ್ ದೇಶಮುಖ್, ಸೋಹೆಲ್ ಖಾನ್, ತಮ್ಮ ಪತ್ನಿ ಪ್ರಿಯಾ ಸುದೀಪ್, ಯಶ್ ಹಾಗೂ ಶಿವರಾಜ್‍ಕುಮಾರ್ ಅವರಿಗೆ ಫಿಟ್ನೆಸ್ ಚಾಲೆಂಜ್ ನೀಡಿದ್ದರು.
ರಾಕಿಂಗ್ ಸ್ಟಾರ್ ಯಶ್ ಸುದೀಪ್ ಚಾಲೆಂಜ್ ಸ್ವೀಕರಿಸಿ ಅದರಲ್ಲಿ ಒಂದು ಟ್ವಿಸ್ಟ್ ನೀಡಿದ್ದಾರೆ. ಫಿಟ್ನೆಸ್ ಚಾಲೆಂಜ್ ಸ್ವೀಕರಿಸಿದ ಯಶ್ ಫಿಟ್ನೆಸ್ ವಿಡಿಯೋವೊಂದನ್ನು ತಮ್ಮ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದಾರೆ.
ಯಶ್ ತಾವು ವರ್ಕೌಟ್ ಮಾಡುವ ಬದಲು ತಮ್ಮ ಬಾಲ್ಯ ಸ್ನೇಹಿತನನ್ನು ವರ್ಕೌಟ್ ಮಾಡಿಸಿ ಅವರ ವಿಡಿಯೋವನ್ನು ಫೇಸ್‍ಬುಕ್‍ನಲ್ಲಿ ಹಂಚಿಕೊಳ್ಳುವುದರ ಮೂಲಕ ಸುದೀಪ್ ಫಿಟ್ನೆಸ್ ಚಾಲೆಂಜ್‍ಗೆ ಟ್ವಿಸ್ಟ್ ನೀಡಿದ್ದಾರೆ. ಇದನ್ನೂ ಓದಿ: ಭಾರತ ತಂಡದ ಕ್ರಿಕೆಟ್ ಆಟಗಾರನ ಚಾಲೆಂಜ್ ಸ್ವೀಕರಿಸಿದ ಕಿಚ್ಚ ಸುದೀಪ್!
https://twitter.com/NimmaYash/status/1003581840563638272
ಯಶ್ ವಿಡಿಯೋವನ್ನು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿ ಅದಕ್ಕೆ, “ಹಾಯ್ ಸುದೀಪ್ ನೀವು ನನಗೆ ಒಂದು ಚಾಲೆಂಜ್ ಕೊಟ್ಟಿದ್ದೀರಾ ಧನ್ಯವಾದಗಳು. ನಾವು ಕಲಾವಿದರಾಗಿದರಿಂದ ನಾವು ದಿನನಿತ್ಯ ವರ್ಕೌಟ್ ಮಾಡುತ್ತಿರುತ್ತೇವೆ. ಆದರೆ ನಾನು ಈ ಚಾಲೆಂಜ್‍ನಲ್ಲಿ ಒಂದು ಟ್ವಿಸ್ಟ್ ಕೊಡಲು ಯೋಚಿಸಿದ್ದೇನೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಿಚ್ಚ ಸುದೀಪ್ ಚಾಲೆಂಜ್ ಸ್ವೀಕರಿಸಿದ ಪತ್ನಿ ಪ್ರಿಯಾ!
ಜೀವನದಲ್ಲೇ ನನ್ನ ಸ್ನೇಹಿತ ಫಿಟ್ ಆಗಿರಲು ಸಾಧ್ಯವಿಲ್ಲ ಎಂದು ಕಾಣುವ ನನ್ನ ಸ್ನೇಹಿತನೊಬ್ಬ ಇದ್ದಾನೆ. ಆತನ ಹೆಸರು ಚೇತನ್ ಅಲಿಯಾಸ್ ಚಕ್ಕಲಿ ನನ್ನ ಬಾಲ್ಯ ಸ್ನೇಹಿತ. ಅವನಿಂದ ನಾನು ಈ ಚಾಲೆಂಜ್ ಮಾಡಿಸುತ್ತೇನೆ ಎಂದು ಹೇಳಿ ತಮ್ಮ ಸ್ನೇಹಿತನಿಂದ ಫಿಟ್ನೆಸ್ ಚಾಲೆಂಜ್ ಮಾಡಿಸಿದ್ದಾರೆ.
ಈ ವಿಡಿಯೋವನ್ನು ಯಶ್ ಪೋಸ್ಟ್ ಮಾಡಿ “ಇಂಡಿಯಾ ಫಿಟ್ ಆಗಿ ಇರೋಣ ಹಾಗೂ ನಮ್ಮ ಜೊತೆಯಲ್ಲಿ ಇರುವವರನ್ನು ಫಿಟ್ ಆಗಿ ಇರಿಸೋಣ” ಎಂದು ಯಶ್ ಈ ವಿಡಿಯೋ ಮೂಲಕ ತಿಳಿಸಿದ್ದಾರೆ.
Accepting ur challenge my brother @Vinay_Kumar_R ..thank u .
Challenging @Riteishd @SohailKhan @iampriya06 @NimmaYash #shivanna.#HumFitToIndiaFit pic.twitter.com/1ixYaPLFi9
— Kichcha Sudeepa (@KicchaSudeep) June 3, 2018

