ರೋಮ್: ಇಟಲಿ ಶಾಲೆಗಳಲ್ಲಿ ಬುರ್ಖಾ ನಿಷೇಧ (Burqa Ban), 30% ವಿದೇಶಿ ವಿದ್ಯಾರ್ಥಿಗಳಿಗೆ (Foreign Students) ಮಾತ್ರ ಅವಕಾಶ ನೀಡುವ ಬಗ್ಗೆ ಪ್ರಧಾನಿ ಜಾರ್ಜಿಯಾ ಮೆಲೋನಿ (Giorgia Meloni) ಹೊಸ ರೂಲ್ಸ್ ಜಾರಿಗೆ ತಂದಿದ್ದಾರೆ.
ಇಟಲಿ ಶಾಲೆಗಳಲ್ಲಿ ಬುರ್ಖಾ, ನಿಕಾಬ್ನಂತಹ (Niqabs) ಮುಖ ಮುಚ್ಚುವ ವಸ್ತ್ರಗಳನ್ನು ನಿಷೇಧಿಸಲಾಗಿದೆ. ಅಷ್ಟೇ ಅಲ್ಲದೇ ಕ್ಲಾಸ್ರೂಂಗಳಲ್ಲಿ ವಿದೇಶಿ ವಿದ್ಯಾರ್ಥಿಗಳಿಗೆ 30%ರಷ್ಟು ಮಿತಿ ಹೇರಲಾಗಿದೆ. ಶೈಕ್ಷಣಿಕವಾಗಿ ಹೊಂದಿಕೊಳ್ಳಲು ಕಷ್ಟಪಡುವ ವಿದ್ಯಾರ್ಥಿಗಳ ವಿದೇಶಿ ಪೋಷಕರಿಗೆ ಇಟಾಲಿಯನ್ ಭಾಷಾ ಕೋರ್ಸ್ಗಳನ್ನು ಪರಿಚಯಿಸಲಾಗಿದೆ. ಯುರೋಪ್ನಲ್ಲಿ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದ್ದಂತೆ ವಲಸೆ ಹಾಗೂ ಸಾಂಸ್ಕೃತಿಕ ಗುರುತಿನ ಕುರಿತಂತೆ ಬಿಕ್ಕಟ್ಟು ಉಲ್ಬಣಗೊಳ್ಳುತ್ತಿರುವ ಹೊತ್ತಲ್ಲೇ ಮೆಲೋನಿ ಈ ಕ್ರಮ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಎಂ-ಸ್ಯಾಂಡ್, ಜಲ್ಲಿ ಸಾಗಾಟಕ್ಕೆ ನಿರ್ಬಂಧ – ತಮಿಳುನಾಡು ಸರ್ಕಾರದ ವಿರುದ್ಧ ಲಾರಿ ಮಾಲೀಕರ ಆಕ್ರೋಶ
ಡಿಕ್ರಿ-ಕಾನೂನು 170 ರ `ಡೆಕ್ರೆಟೊ ಸ್ಕೂಲಾ’ ಎಂಬ ಪ್ರಸ್ತಾವನೆ ಇತ್ತೀಚೆಗೆ ಸೆನೆಟ್ನಲ್ಲಿ ಅನುಮೋದನೆ ಪಡೆದ ಬಳಿಕ ಇದೀಗ ಚೇಂಬರ್ ಆಫ್ ಡೆಪ್ಯೂಟೀಸ್ನಲ್ಲೂ 142 ಮತಗಳೊಂದಿಗೆ ಅಂಗೀಕಾರಗೊಂಡಿದೆ. ಪ್ರಧಾನಿ ಜಾರ್ಜಿಯಾ ಮೆಲೋನಿ ನೇತೃತ್ವದ ಸರ್ಕಾರದ ಈ ವಿವಾದಿತ ಪ್ರಸ್ತಾವನೆಗೆ ಚೇಂಬರ್ ಆಫ್ ಡೆಪ್ಯೂಟೀಸ್ನಲ್ಲಿ ನಡೆದ ಮತದಾನದಲ್ಲಿ 142 ಮಂದಿ ಅಂಗೀಕಾರ ನೀಡಿದರೆ, ಇದರ ವಿರುದ್ಧವಾಗಿ 112 ಜನ ಮತಚಲಾಯಿಸಿದ್ದು, 4 ಗೈರು ಹಾಜರಾಗಿದ್ದು, ಸದ್ಯ ಈ ಡೆಕ್ರೆಟೊ ಸ್ಕೂಲಾ ಇಟಲಿಯಲ್ಲಿ ಅಧಿಕೃತವಾಗಿ ಜಾರಿಗೆ ಬಂದಿದೆ. ಇದನ್ನೂ ಓದಿ: ಪೌರತ್ವ ಪಡೆಯೋ ಮುನ್ನವೇ 1980ರ ಮತದಾರರ ಪಟ್ಟಿಯಲ್ಲಿ ಸೋನಿಯಾ ಗಾಂಧಿ ಹೆಸರು? – ದಾಖಲೆಗಾಗಿ ಪೊಲೀಸರಿಂದ ಶೋಧ

