ಟೆಹ್ರಾನ್: ತವರು ಮನೆಗೆ ಹೋಗಲು ಅನುಮತಿ ಕೇಳಿದ್ದಕ್ಕೆ 14 ವರ್ಷದ ಬಾಣಂತಿಯನ್ನು ಪತಿ ಕೊಲೆ ಮಾಡಿರುವ ಘಟನೆ ಇರಾನ್ನಲ್ಲಿ (Iran) ನಡೆದಿದೆ.
ಮೃತ ಬಾಲಕಿಯನ್ನು ಕೆರ್ಮಾನ್ (Kerman) ಪ್ರಾಂತ್ಯದ ನಿವಾಸಿಯಾಗಿದ್ದ ಸೊಗಂದ್ ಮೊಶ್ತಾರೆಕಿ (14) ಎಂದು ಗುರುತಿಸಲಾಗಿದ್ದು, ಇತ್ತೀಚಿಗಷ್ಟೇ ಮೃತ ಬಾಲಕಿಗೆ ಹೆರಿಗೆಯಾಗಿತ್ತು. ತವರು ಮನೆಗೆ ಹೋಗಲು ಅನುಮತಿ ಕೇಳಿದ್ದಕ್ಕೆ 20 ವರ್ಷದ ಪತಿ ಬರ್ಬರವಾಗಿ ಹಲ್ಲೆ ನಡೆಸಿ, ಕೊಲೆ ಮಾಡಿದ್ದಾನೆ. ಇದನ್ನೂ ಓದಿ: ಬೆಳಗಾವಿಗೆ ಇಂದು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್
ಸದ್ಯ ಪತಿಯನ್ನು ಅರೆಸ್ಟ್ ಮಾಡಲಾಗಿದ್ದು, ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ. ಜೊತೆಗೆ ಕೌಟುಂಬಿಕ ಕಲಹವೇ ಇದಕ್ಕೆ ಕಾರಣ ಎಂದು ಸುದ್ದಿ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದಾನೆ.
ಮೃತ ಬಾಲಕಿ ಇತ್ತೀಚೆಗಷ್ಟೇ ಹೆರಿಗೆಗಾಗಿ ಆಸ್ಪತ್ರೆಗೆ ತೆರಳುತ್ತಿದ್ದಾಗ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಪವಾಡಸದೃಶವಾಗಿ ಬದುಕುಳಿದಿದ್ದರು. ಆ ಭೀಕರ ಅಪಘಾತದಿಂದ ಪಾರಾಗಿ ಸುರಕ್ಷಿತವಾಗಿ ಮಗುವಿಗೆ ಜನ್ಮ ನೀಡಿದ್ದ ಬಾಲಕಿ, ತಾಯ್ತನದ ಸಂಭ್ರಮದಲ್ಲಿರುವಾಗಲೇ ತನ್ನ ಪತಿಯ ಕೈಯಲ್ಲೇ ಹತ್ಯೆಯಾಗಿದ್ದಾಳೆ.ಇದನ್ನೂ ಓದಿ: ಇಂದಿನಿಂದ `ಕಾಶಿ-ತಮಿಳು ಸಂಗಮಂ’ ಅದ್ಧೂರಿ ಸಮಾರಂಭ
ಬಲವಂತದ ಮದುವೆ:
ಸೊಗಂದ್ ಪತಿ ಆಕೆ ತನ್ನ ಕುಟುಂಬದವರೊಂದಿಗೆ ಸಂಪರ್ಕದಲ್ಲಿರುವುದನ್ನು ನಿರ್ಬಂಧಿಸಿದ್ದ. ಅಲ್ಲದೆ, ತಾನು ಹೊರಗೆ ಹೋದಾಗಲೆಲ್ಲಾ ಆಕೆಯನ್ನು ಮನೆಯೊಳಗೆ ಕೂಡಿ ಹಾಕುತ್ತಿದ್ದ. ಸೊಗಂದ್ ಸಾವನ್ನಪ್ಪಿದ ದಿನದಂದೇ ಫಾರ್ಸ್ ಪ್ರಾಂತ್ಯದ 21 ವರ್ಷದ ಗರ್ಭಿಣಿ ಸೆಪಿದೆಹ್ ರೈಸಿ ಎಂಬುವವರ ಕೊಲೆಯೂ ನಡೆದಿದೆ. ಸೊಗಂದ್ ಅವರಂತೆಯೇ ಸೆಪಿದೆಹ್ ಅವರನ್ನೂ ಬಲವಂತವಾಗಿ ಮದುವೆ ಮಾಡಿಕೊಡಲಾಗಿತ್ತು ಮತ್ತು ಆಕೆಯೂ ತನ್ನ ಪತಿಯಿಂದಲೇ ಹತ್ಯೆಯಾಗಿದ್ದಾಳೆ.ಇದನ್ನೂ ಓದಿ: ಒಂದು ಬಿಂದಿಗೆ ನೀರಿಗೆ 6 ರೂ., ಡ್ರಮ್ಗೆ 60 ರೂಪಾಯಿ – ಕಲಬುರಗಿ ಜಿಲ್ಲೆಯಲ್ಲಿ ಭೀಕರ ಬರಗಾಲ
