ಯಶ್ ನಟನೆಯ ರಾಮಾಯಣ ಸಿನಿಮಾ ಬಾಕ್ಸಾಫೀಸ್ ಕಲೆಕ್ಷನ್ ಮುಂದುವರಿಸಿದೆ. 22ನೇ ದಿನವಾದ ಶುಕ್ರವಾರವೂ ಭಾರತದಲ್ಲಿ ಅಂದಾಜು 9.65 ಕೋಟಿ ಗಳಿಕೆ ಮಾಡಿದೆ. ಸಿನಿಮಾವು ಭಾರತದಲ್ಲೇ ಒಟ್ಟು 992 ಕೋಟಿ ಗಳಿಕೆ ಮಾಡಿದ್ದು, 1000 ಕೋಟಿ ಕಲೆಕ್ಷನ್ ಹೊಸ್ತಿಲಲ್ಲಿದೆ.
ವಿಶ್ವಾದ್ಯಂತ ಒಟ್ಟು 1,777 ಕೋಟಿ ರೂ. ಗಲ್ಲಾಪೆಟ್ಟಿಗೆ ಸೇರಿಸಿದೆ. ಇದುವರೆಗೆ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಭಾರತೀಯ ಚಿತ್ರವಾಗಿ ಹೊರಹೊಮ್ಮಿದೆ. ಇಂದು ಬಾಹುಬಲಿ 2 ರ ಜೀವಮಾನದ ಗಳಿಕೆಯಾದ 1,788 ಕೋಟಿ ರೂ. ಸಂಗ್ರಹವನ್ನು ಮೀರಿಸುವ ಸಾಧ್ಯತೆ ಇದೆ.
ತನ್ನ ಮೂರನೇ ವಾರದಲ್ಲಿ, ರಾಮಾಯಣ 16 ರಿಂದ 22 ರವರೆಗೆ ಭಾರತದಲ್ಲಿ 128 ಕೋಟಿ ಗಳಿಸಿದೆ. ಈ ಚಿತ್ರವು ತನ್ನ ಮೂರನೇ ಶುಕ್ರವಾರ 15.75 ಕೋಟಿ ರೂ. ಗಳಿಸಿತು. ನಂತರ ಶನಿವಾರ 27.65 ಕೋಟಿ ರೂ. ಮತ್ತು ಭಾನುವಾರ 35.60 ಕೋಟಿ ರೂ. ಗಳಿಸಿತು. ಸೋಮವಾರ ಅದರ ಸಂಗ್ರಹವು 12.70 ಕೋಟಿ ರೂ.ಗೆ ಇಳಿದು ಮಂಗಳವಾರ 17.50 ಕೋಟಿ ರೂ.ಗೆ ಚೇತರಿಸಿಕೊಂಡಿತು.
ಮೊದಲ ವಾರದ ಭಾರತದಲ್ಲಿ ಈ ಚಿತ್ರದ ನೆಟ್ ಕಲೆಕ್ಷನ್ 564 ಕೋಟಿ ರೂ. ಆಗಿದ್ದರೆ, ಎರಡನೇ ವಾರ 299 ಕೋಟಿ ರೂ.ಗಳಿಸಿದೆ. ಮೂರನೇ ವಾರ ಮುಗಿಯುವ ಹಂತದಲ್ಲಿದ್ದಾಗ, ಈ ಚಿತ್ರವು ಈಗ 1,000 ಕೋಟಿ ರೂ. ದೇಶೀಯ ನೆಟ್ ಗಳಿಕೆ ಮೈಲಿಗಲ್ಲನ್ನು ಸಮೀಪಿಸುತ್ತಿದೆ.
ನಿತೇಶ್ ತಿವಾರಿ ನಿರ್ದೇಶನದ ಮತ್ತು ನಮಿತ್ ಮಲ್ಹೋತ್ರಾ ನಿರ್ಮಾಣದ ‘ರಾಮಾಯಣ: ಭಾಗ 1’ ಮಹಾಕಾವ್ಯ ದೊಡ್ಡ ಪರದೆಯಲ್ಲಿ ವೀಕ್ಷಕರ ಮೆಚ್ಚುಗೆ ಗಳಿಸುತ್ತಿದೆ. ಇದರಲ್ಲಿ ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ ಮತ್ತು ಯಶ್ ರಾವಣನಾಗಿ ನಟಿಸಿದ್ದಾರೆ. ಸನ್ನಿ ಡಿಯೋಲ್, ರವಿ ದುಬೆ, ಲಾರಾ ದತ್ತ, ಅರುಣ್ ಗೋವಿಲ್, ಕಾಜಲ್ ಅಗರ್ವಾಲ್, ರಾಕುಲ್ ಪ್ರೀತ್ ಸಿಂಗ್ ಮತ್ತು ವಿವೇಕ್ ಒಬೆರಾಯ್ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು ನವೆಂಬರ್ 5 ರಂದು ತೆರೆ ಕಂಡಿತ್ತು.
