ಮುಂಬೈ: ಕ್ಷೇತ್ರ ಪುನರ್ವಿಂಗಡಣೆ (Delimitation) ಮಸೂದೆಗೆ ತಮ್ಮ ಪಕ್ಷವು ಸಂಪೂರ್ಣ ಬೆಂಬಲ ನೀಡಲಿದೆ ಎಂದು ಎನ್ಸಿಪಿ(ಶರದ್ ಪವಾರ್ ಬಣ) ಹಿರಿಯ ನಾಯಕ ಜಿತೇಂದ್ರ ಅವ್ಹಾದ್(Jitendra Awhad) ಸ್ಪಷ್ಟಪಡಿಸಿದ್ದಾರೆ.
ಪಕ್ಷದ ವರಿಷ್ಠ ಶರದ್ ಪವಾರ್(Sharad Pawar) ಅವರೊಂದಿಗಿನ ಭೇಟಿ ಮತ್ತು ಚರ್ಚೆಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, “ನಮ್ಮ ಚರ್ಚೆಯು ಪಕ್ಷದ ಅಧಿಕೃತ ನಿಲುವಿನ ಬಗ್ಗೆ ಮಾತ್ರ ಆಗಿರಲಿಲ್ಲ. ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯು ಒಂದು ಸಾಂವಿಧಾನಿಕ ಅಗತ್ಯವಾಗಿದೆ ಎಂಬ ಸಾಮಾನ್ಯ ಅಂಶವನ್ನು ಇಲ್ಲಿ ಪರಿಗಣಿಸಲಾಗಿದೆ. ಈ ಪ್ರಕ್ರಿಯೆಯನ್ನು ಬೆಂಬಲಿಸಲು ಈಗಾಗಲೇ ನಿರ್ಧಾರ ತೆಗೆದುಕೊಳ್ಳಲಾಗಿದೆ. ನಾವು ಖಂಡಿತವಾಗಿಯೂ ಕ್ಷೇತ್ರ ಪುನರ್ವಿಂಗಡಣೆಯನ್ನು ಬೆಂಬಲಿಸುತ್ತೇವೆ” ಎಂದು ತಿಳಿಸಿದ್ದಾರೆ.
#WATCH | Mumbai, Maharashtra: On his discussion with Sharad Pawar, NCP-SCP leader Jitendra Awhad says, “The discussion wasn’t about our party’s official stance. The general point being made was that the delimitation process is a constitutional requirement… A decision has been made to support the delimitation process, and we will indeed support it. We will support the delimitation.”
— ANI (@ANI) November 27, 2026
ಈ ಕುರಿತು ಮಾತನಾಡಿರುವ ಸಂಸದೆ ಸುಪ್ರಿಯಾ ಸುಳೆ, “ನನಗೆ ಈ ಬಗ್ಗೆ ಹೆಚ್ಚಿನ ವಿವರಗಳು ತಿಳಿದಿಲ್ಲ. ಅಧಿವೇಶನವನ್ನು ಘೋಷಿಸಲಾಗಿದೆ, ಆದರೆ ನನ್ನ ಬಳಿ ಇನ್ನೂ ಕಾರ್ಯಸೂಚಿ ಇಲ್ಲ. ನಮ್ಮದು ಅತ್ಯಂತ ಶಿಸ್ತಿನ ಪಕ್ಷವಾಗಿದ್ದು, ದಿನಾಂಕಗಳು ಪ್ರಕಟವಾದಾಗ ನಮ್ಮ ಹಿರಿಯ ನಾಯಕ ಅಮೋಲ್ ಕೊಲ್ಹೆ ಅವರು ವಿಪ್ ಜಾರಿಗೊಳಿಸುತ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಪಾಸ್ ಆದ್ರೆ ದೇಶದಲ್ಲಿ ಉಳಿದಿರುವ ಪ್ರಜಾಪ್ರಭುತ್ವ ಸಂಪೂರ್ಣ ಅಂತ್ಯ: ಕಪಿಲ್ ಸಿಬಲ್
VIDEO | Mumbai: NCP (SP) MP Supriya Sule on the special Parliament session and the proposed delimitation bill, says, “I am not aware of the details. The session has been announced, but I do not have the agenda. Our party is a very disciplined party, and the whip is issued by our senior leader Amol Kolhe when the dates are announced. I have not seen the bill yet, so how can I state the party’s position on it? I do not know anything about this matter…We are not a faction; we are a party.”
(Full video available on PTI Videos – https://t.co/bIyFWTfmBd)
— Press Trust of India (@PTI_News) November 27, 2026
ಮುಂದುವರಿದು ಮಾತನಾಡಿದ ಅವರು, “ನಾನು ಇನ್ನೂ ಮಸೂದೆಯನ್ನು ನೋಡಿಲ್ಲ. ಹೀಗಿರುವಾಗ ಅದರ ಬಗ್ಗೆ ಪಕ್ಷದ ನಿಲುವನ್ನು ನಾನು ಹೇಗೆ ಹೇಳಲು ಸಾಧ್ಯ? ಈ ವಿಷಯದ ಬಗ್ಗೆ ನನಗೆ ಏನೂ ತಿಳಿದಿಲ್ಲ” ಎಂದಿದ್ದಾರೆ. ಇದೇ ವೇಳೆ ತಮ್ಮ ಪಕ್ಷದ ಅಸ್ತಿತ್ವದ ಬಗ್ಗೆ ಒತ್ತಿ ಹೇಳಿದ ಅವರು, “ನಾವು ಯಾವುದೇ ಒಂದು ಬಣವಲ್ಲ, ನಾವೊಂದು ರಾಜಕೀಯ ಪಕ್ಷ” ಎಂದು ಹೇಳಿದ್ದಾರೆ.
ಶರದ್ ಪವಾರ್ ನೇತೃತ್ವದ ಎನ್ಸಿಪಿಗೆ 18ನೇ ಲೋಕಸಭೆಯಲ್ಲಿ ಒಟ್ಟು 8 ಸಂಸದರನ್ನು ಹೊಂದಿದೆ. 2024ರ ಲೋಕಸಭಾ ಚುನಾವಣೆಯಲ್ಲಿ (Lok Sabha Election) ಮಹಾರಾಷ್ಟ್ರದ 10 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಈ ಪಕ್ಷವು 8 ಸ್ಥಾನಗಳಲ್ಲಿ ಭರ್ಜರಿ ಜಯ ಸಾಧಿಸಿತ್ತು.
