ಬೆಂಗಳೂರು: ಫ್ರೀಡಂಪಾರ್ಕ್ನಲ್ಲಿ ಆಶಾ ಕಾರ್ಯಕರ್ತೆಯರ ಹೋರಾಟ ಹತ್ತನೇ ದಿನಕ್ಕೆ ಕಾಲಿಟ್ಟಿದೆ. ಸಿಎಂ ಜಪಾನ್ನಿಂದ ಬೆಂಗಳೂರಿಗೆ (Bengaluru) ಬಂದಿದ್ದು, ಏನ್ ಭರವಸೆ ನೀಡಿಲಿದ್ದಾರೆ ಅನ್ನೋ ಕುತೂಹಲ ಶುರುವಾಗಿದೆ. ಮತ್ತೊಂದಡೆ ಸ್ಯಾಂಡಲ್ವುಡ್ನಿಂದ ದಿನೇ ದಿನೇ ಹೋರಾಟಕ್ಕೆ ಬೆಂಬಲ ವ್ಯಕ್ತವಾಗ್ತಿದೆ.
ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ (Freedom Park) ಆಶಾ ಕಾರ್ಯಕರ್ತೆಯರು (Asha Workers) ನಡೆಸುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ 10ನೇ ದಿನಕ್ಕೆ ಕಾಲಿಟ್ಟಿದ್ದು, ಸಿನಿಮಾ ತಾರೆಯರು ಮತ್ತು ಸಾಹಿತಿಗಳು ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಸಿಎಂ ಜಪಾನ್ನಿಂದ ಬೆಂಗಳೂರಿಗೆ ಬಂದಿದ್ದು, ಆಶಾ ಕಾರ್ಯಕರ್ತೆಯರನ್ನ ಮನವೊಲಿಸುವಲ್ಲಿ ಸಕ್ಸಸ್ ಆಗ್ತಾರಾ ಅನ್ನೋ ಕುತೂಹಲ ಶುರುವಾಗಿದೆ. ಸಿಎಂ ಮಾತಿಗೆ ಆಶಾಗಳು ಒಪ್ಪಿದ್ರೆ ಇಂದೇ ಹೋರಾಟ ಅಂತ್ಯವಾಗುತ್ತೆ. ಇಲ್ಲದಿದ್ರೆ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ. ಇದನ್ನೂ ಓದಿ: ಈಜಿಪ್ಟ್ನ ಹೆದ್ದಾರಿಯಲ್ಲಿ ಇಂಧನ ಲಾರಿ ಪಲ್ಟಿ – ಭಾರೀ ಬೆಂಕಿಗೆ ಅವಘಡಕ್ಕೆ 31 ಜನ ಬಲಿ
ಕಳೆದ 10 ದಿನಗಳಿಂದ ಆಶಾ ಕಾರ್ಯಕರ್ತೆಯರು ಹೋರಾಟಕ್ಕೆ, ಸ್ಯಾಂಡಲ್ವುಡ್ನ ಮನ ಮಿಡಿದಿದೆ. ನಟಿ ರಮ್ಯಾ, ಮಾಳವಿಕ, ಅವಿನಾಶ್, ತಾರಾ, ಕಾರುಣ್ಯರಾಮ್ ಈಗಾಗಲೇ ಫ್ರೀಡಂಪಾರ್ಕ್ಗೆ ಬಂದು, ಆಶಾ ಕಾರ್ಯಕರ್ತೆಯರ ಜೊತೆ ಕೈ ಜೋಡಿಸಿ, ಬೆಂಬಲ ಸೂಚಿಸಿದ್ದಾರೆ. ಮತ್ತಷ್ಟು ಸೆಲೆಬ್ರಿಟಿಗಳು ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ಬೆಂಬಲ ಸೂಚಿಸಲು ಮುಂದಾಗಿದ್ದಾರೆ. ಇದರಿಂದ ಹೋರಾಟಕ್ಕೆ ಮತ್ತಷ್ಟು ಮೆರೆಗು ಹೆಚ್ಚಾಗಿದ್ದು, ಹೋರಾಟದ ಕಾವು ಹೆಚ್ಚಾಗಲಿದೆ.
ಸೆಲೆಬ್ರಿಟಿಗಳು ಮಾತ್ರವಲ್ಲ, ರೈತ ಸಂಘಟನೆಗಳು, ಸಾಮಾಜಿಕ ಹೋರಾಟಗಾರರು ಕೂಡ ಆಶಾಗಳ ಹೋರಾಟಕ್ಕೆ ಬೆಂಬಲ ವ್ಯಕ್ತವಾಗ್ತಿದೆ. 15 ಸಾವಿರ ರೂ. ಮಾಸಿಕ ವೇತನ ಹೆಚ್ಚಳದ ಆದೇಶ ಪ್ರತಿಯನ್ನ ಪಡೆದೇ ವಾಪಾಸ್ ಹೋಗ್ತಿವಿ ಅಂತ ಪಟ್ಟು ಹಿಡಿದಿರುವ ಆಶಾಗಳಿಗೆ ಸಿಎಂ ಹೇಗೆ ಮನವೊಲಿಸ್ತಾರೆ ಅನ್ನೋದೆ ಪ್ರಶ್ನೆಯಾಗಿದೆ.ಇದನ್ನೂ ಓದಿ: ಕೆಆರ್ಎಸ್ ಜಲಾಶಯದಲ್ಲಿ ತೀವ್ರ ನೀರಿನ ಅಭಾವ – 95 ಅಡಿಗೆ ಕುಸಿದ ನೀರಿನ ಮಟ್ಟ
