– WBBLನಲ್ಲಿ ಏನಿದು ರೂಲ್ಸ್?
ಮೆಲ್ಬರ್ನ್: ಮಹಿಳಾ ಬಿಗ್ ಬ್ಯಾಷ್ ಲೀಗ್ನಲ್ಲಿ (Women’s Big Bash League) ಮೆಲ್ಬೋರ್ನ್ ರೆನೆಗೇಡ್ಸ್ ಮತ್ತು ಬ್ರಿಸ್ಬೇನ್ ಹೀಟ್ ನಡುವಿನ ಪಂದ್ಯವು ಕ್ರಿಕೆಟ್ ಇತಿಹಾಸದಲ್ಲೇ ಹೊಸ ನಿಯಮವೊಂದಕ್ಕೆ ಸಾಕ್ಷಿಯಾಯಿತು. ವೆಸ್ಟ್ ಇಂಡೀಸ್ ಆಟಗಾರ್ತಿ ಡಿಯಾಂಡ್ರಾ ಡಾಟಿನ್ ಅವರು ಒಂದೇ ಒಂದು ಚೆಂಡನ್ನು ಎದುರಿಸದೇ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ಗೆ ಮರಳಿದ ಪ್ರಸಂಗ ನಡೆಯಿತು.
ಮೆಲ್ಬೋರ್ಸ್ನ ಜಂಕ್ಷನ್ ಓವೆಲ್ ಮೈದಾನದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬ್ರಿಸ್ಬೇನ್ ಹೀಟ್ 137 ರನ್ ಗಳಿಸಿತ್ತು. 138 ರನ್ ಗುರಿ ಬೆನ್ನತ್ತಿದ ಮೆಲ್ಬೋರ್ನ್ ರೆನೆಗೇಡ್ಸ್ ತಂಡ 15ನೇ ಓವರ್ನಲ್ಲಿ 97 ರನ್ ಗಳಿಗೆ ಪ್ರಮುಖ ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇದನ್ನೂ ಓದಿ: ಒಂದೇ ಪಂದ್ಯದಲ್ಲಿ 4 ವಿಶ್ವದಾಖಲೆ ಬರೆದ 15ರ ಪೋರ ವೈಭವ್ ಸೂರ್ಯವಂಶಿ!
6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿದ ಡಿಯಾಂಡ್ರಾ ಡಾಟಿನ್, ನಿಗದಿತ ಸಮಯಕ್ಕಿಂತ ತಡವಾಗಿ ಕ್ರೀಸ್ಗೆ ಆಗಮಿಸಿದರು. ಬೌಲಿಂಗ್ಗೆ ಬೌಲರ್ ಕಾಯುತ್ತಿದ್ದರೂ, ದೂರದಲ್ಲಿ ನಿಂತು ಗ್ಲೌಸ್ಗಳನ್ನು ಸರಿಪಡಿಸಿಕೊಳ್ಳುವುದರಲ್ಲಿ ನಿರತರಾಗಿದ್ದರು.
Extraordinary.
Deandra Dottin was late to the middle. Now she’s out after Sarah Glenn hit the stumps with a ball she couldn’t face! #WBBL12 https://t.co/lsG3SZAw8b
— Weber Women’s Big Bash League (@WBBL) November 25, 2026
ಬಿಗ್ ಬ್ಯಾಷ್ ಲೀಗ್ ಮತ್ತು ಮಹಿಳಾ ಬಿಗ್ ಬ್ಯಾಷ್ ಲೀಗ್ ನಿಯಮಗಳ ಪ್ರಕಾರ, ಒಂದು ವಿಕೆಟ್ ಬಿದ್ದ 75 ಸೆಕೆಂಡ್ಗಳ ಒಳಗಾಗಿ ಮುಂದಿನ ಬ್ಯಾಟರ್ ಕ್ರೀಸ್ಗೆ ಆಗಮಿಸಿ ಚೆಂಡು ಎದುರಿಸಬೇಕು. ಆದರೆ, ಡಾಟಿನ್ ತಡವಾಗಿ ಕ್ರೀಸ್ಗೆ ಆಗಮಿಸಿದ ಕಾರಣ, ಅಂಪೈರ್ ಬ್ರಿಸ್ಬೇನ್ ಹೀಟ್ ಬೌಲರ್ ಸಾರಾ ಗ್ಲೆನ್ಗೆ ಬ್ಯಾಟರ್ ಇಲ್ಲದೆಯೇ ನೇರವಾಗಿ ಸ್ಟಂಪ್ಸ್ಗೆ ಬೌಲಿಂಗ್ ಮಾಡಲು ‘ಫ್ರೀ ಬಾಲ್’ ಅವಕಾಶ ಕೊಟ್ಟರು.
ಗ್ಲೆನ್ ಎಸೆದ ಚೆಂಡು ನಿಖರವಾಗಿ ಸ್ಟಂಪ್ಗೆ ಬಡಿದ ಕಾರಣ, ಬ್ಯಾಟರ್ ಡಾಟಿನ್ ಚೆಂಡನ್ನು ಎದುರಿಸದೇ ಔಟ್ ಆಗಿ ಹೊರನಡೆಯಬೇಕಾಯಿತು. ಇಷ್ಟೆಲ್ಲಾ ನಡೆದರೂ, ಮೆಲ್ಬೋರ್ನ್ ರೆನೆಗೇಡ್ಸ್ ತಂಡ ಅಂತಿಮವಾಗಿ 2 ವಿಕೆಟ್ಗಳ ಜಯ ಸಾಧಿಸಿತು. ಇದನ್ನೂ ಓದಿ: ಕೇವಲ 51 ಬಾಲ್ಗೆ ದ್ವಿಶತಕ; ಲಿಸ್ಟ್-ಎ ಕ್ರಿಕೆಟ್ನಲ್ಲಿ ಹೊಸ ದಾಖಲೆ ಬರೆದ ವೈಭವ್
