ಪಾಟ್ನಾ: ಬಿಹಾರದ ಮೊಕಾಮಾ ಶಾಸಕ, ‘ಛೋಟೆ ಸರ್ಕಾರ್’ ಎಂದೇ ಖ್ಯಾತರಾಗಿರುವ ಅನಂತ್ ಸಿಂಗ್ (Anant Singh) ಅವರ ಕಿರಿಯ ಪುತ್ರಿ ಶಿವಾಂಗಿ ಸಿಂಗ್ (Shivangi Singh) ಅವರ ಮದುವೆ ಸದ್ಯ ದೇಶದಾದ್ಯಂತ ಭಾರಿ ಸದ್ದು ಮಾಡುತ್ತಿದೆ. ಅವರ ಪ್ರೀತಿಯ ಮಗಳ (Viral Marriage) ಹಿನ್ನಲೆ ಮತ್ತು ಶಿಕ್ಷಣದ ಕುರಿತು ಕೆಲವು ಆಸಕ್ತಿಕರ (Bihar MLA’s Daughter) ವಿಷಯಗಳು ಇಲ್ಲಿವೆ.
ಇಂದು ಅನಂತ್ ಸಿಂಗ್ ಅವರ ಹುಟ್ಟೂರಾದ ಬರ್ಹ್ನ ನಾಡ್ವಾನ್ ಗ್ರಾಮದಲ್ಲಿ ನಡೆದ ಈ ಅದ್ಧೂರಿ ಸಮಾರಂಭದಲ್ಲಿ ಶಿವಾಂಗಿ ಅವರು ಅಮೆರಿಕ ಮೂಲದ ಕಾರ್ಪೊರೇಟ್ ಉದ್ಯೋಗಿ ರಿಷಿಕೇಶ್ ಕುಮಾರ್ (ಅಂಕಿತ್) ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಷ್ಟಕ್ಕೂ ಕೋಟಿ ಕೋಟಿ ಖರ್ಚು ಮಾಡಿ ಮದುವೆಯಾದ ಈ ವಧು-ವರರು ಯಾರು? ಇವರ ಹಿನ್ನೆಲೆ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ.
ಶಿವಾಂಗಿ ಸಿಂಗ್ ಶಿಕ್ಷಣ ಮತ್ತು ವೃತ್ತಿ
ಜೆಡಿಯು ಪಕ್ಷದ ಉಚ್ಚಾಟಿತ ಶಾಸಕ ಅನಂತ್ ಸಿಂಗ್ ಮತ್ತು ಮಾಜಿ ಶಾಸಕಿ ನೀಲಂ ದೇವಿ ಅವರ ಕಿರಿಯ ಮಗಳಾದ ಶಿವಾಂಗಿ ಸಿಂಗ್ ರಾಂಚಿಯ ಸೇಂಟ್ ಬಿಷಪ್ ಶಾಲೆ ಮತ್ತು ಪಿಲಾನಿಯ ಬಿರ್ಲಾ ಕಾಲೇಜಿನಲ್ಲಿ ಆರಂಭಿಕ ಶಿಕ್ಷಣ ಮುಗಿಸಿದ ಇವರು, ದೆಹಲಿಯ ಅಮಿಟಿ ವಿಶ್ವವಿದ್ಯಾಲಯದಿಂದ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ತಾವು ಆರ್ಥಿಕವಾಗಿ ಸ್ವತಂತ್ರರಾಗಿದ್ದೇವೆ ಎಂದು ಸ್ವತಃ ಶಿವಾಂಗಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹೇಳಿಕೊಂಡಿದ್ದರೂ, ತಮ್ಮ ಉದ್ಯೋಗದ ವಿವರಗಳನ್ನು ಗೌಪ್ಯವಾಗಿಟ್ಟಿದ್ದಾರೆ. ಇವರಿಗೆ ಮೂವರು ಸಹೋದರರಿದ್ದು, ಮದುವೆಯ ಇಡೀ ಜವಾಬ್ದಾರಿಯನ್ನು ಅವರೇ ನಿಭಾಯಿಸಿದ್ದಾರೆ. ಇನ್ನು ಚುನಾವಣಾ ಅಫಿಡವಿಟ್ ಪ್ರಕಾರ, ಇವರ ಪೋಷಕರು ಸುಮಾರು 100.62 ಕೋಟಿ ರೂ. ಆಸ್ತಿ ಹೊಂದಿದ್ದಾರೆ.ಇದನ್ನೂ ಓದಿ: 40 ಕೋಟಿ ವೆಚ್ಚದಲ್ಲಿ ಬಿಹಾರ ಶಾಸಕನ ಪುತ್ರಿ ವಿವಾಹ: 150 ಬಗೆಯ ಊಟ, ವರನಿಗೆ 3 ಕೋಟಿಯ ಡಿಫೆಂಡರ್, 180 ಗ್ರಾಂ ಚಿನ್ನ ಗಿಫ್ಟ್
ಅಮೆರಿಕದ ಕಾರ್ಪೊರೇಟ್ ಉದ್ಯೋಗಿ ಕೈಹಿಡಿದ ಶಿವಾಂಗಿ
ಶಿವಾಂಗಿ ಕೈಹಿಡಿದಿರುವ ವರ ರಿಷಿಕೇಶ್ ಕುಮಾರ್ ಮೂಲತಃ ಬಿಹಾರದ ಪಾಟ್ನಾ ಜಿಲ್ಲೆಯ ಬಿಹ್ತಾದ ಕೃಷ್ಣನಗರದವರು. ಇವರ ತಂದೆ ರಣವಿಜಯ್ ಕುಮಾರ್ ಸಿಆರ್ಪಿಎಫ್ (CRPF)ನಲ್ಲಿ ಕಮಾಂಡೆಂಟ್ ಆಗಿದ್ದು, ತಾಯಿ ಆಶಾ ದೇವಿ. ಅಮೆರಿಕದ ಅಟ್ಲಾಂಟಾದ ಜಾರ್ಜಿಯಾ ಸ್ಟೇಟ್ ಯೂನಿವರ್ಸಿಟಿಯಿಂದ ಎಂಬಿಎ (MBA) ಪದವಿ ಪಡೆದಿರುವ ರಿಷಿಕೇಶ್, ಕಳೆದ ಹತ್ತು ವರ್ಷಗಳಿಂದ ಅಮೆರಿಕದಲ್ಲೇ ನೆಲೆಸಿ ಉನ್ನತ ಕಾರ್ಪೊರೇಟ್ ಹುದ್ದೆಯಲ್ಲಿದ್ದಾರೆ. ಅನಂತ್ ಸಿಂಗ್ ಕುಟುಂಬವೇ ರಿಷಿಕೇಶ್ ಮನೆಯವರನ್ನು ಸಂಪರ್ಕಿಸಿ ಈ ಮದುವೆ ಮಾತುಕತೆ ನಡೆಸಿತ್ತು. ಇದನ್ನೂ ಓದಿ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ; ಸೀಟು ಹಂಚಿಕೆಯಲ್ಲಿ ಕಾಂಗ್ರೆಸ್-ಎಸ್ಪಿ ನಡುವೆ ಭಿನ್ನಾಭಿಪ್ರಾಯ


