ಮುಂಬೈ: ಚಿನ್ನ(Gold) ಮತ್ತು ಬೆಳ್ಳಿ ದರಗಳಲ್ಲಿ(Silver Price) ಮತ್ತೆ ಇಳಿಕೆ ಕಂಡು ಬಂದಿದೆ. 24 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ 3,220 ಇಳಿಕೆಯಾಗಿದ್ದರೆ, ಬೆಳ್ಳಿ ದರ ಪ್ರತಿ ಕೆ.ಜಿ.ಗೆ 10 ಸಾವಿರ ರೂ.
ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ನಲ್ಲಿ(MCX) ಡಿಸೆಂಬರ್ ಚಿನ್ನದ ಫ್ಯೂಚರ್ 2,626 ರೂ. ಇಳಿಕೆಯಾಗಿದ್ದರೆ ಬೆಳ್ಳಿ ಫ್ಯೂಚರ್ 5,713 ರೂ. ಇಳಿದಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್(Dollar) ಮೌಲ್ಯ ಹೆಚ್ಚಾಗಿರುವುದರಿಂದ ಚಿನ್ನ ಮತ್ತು ಬೆಳ್ಳಿಗೆ ಬೇಡಿಕೆ ತಗ್ಗಿದೆ. ಅಮೆರಿಕದ ಫೆಡರಲ್ ರಿಸರ್ವ್ ಬಡ್ಡಿದರಗಳನ್ನು (US Federal Reserve Interest Rate) ಹೆಚ್ಚಿಸುವ ಸುಳಿವು ನೀಡಿರುವುದರಿಂದ ಹೂಡಿಕೆದಾರರು ಬಾಂಡ್ಗಳತ್ತ ಮುಖ ಮಾಡಿದ್ದಾರೆ. ಇದನ್ನೂ ಓದಿ: 1 ಲಕ್ಷ ರೂ. ಗಡಿಗಿಂತ ಕೆಳಗಿಳಿಯುತ್ತಾ ಚಿನ್ನ? ಬೆಲೆ ಕುಸಿತದ ಹಿಂದಿನ ಅಸಲಿ ಕಾರಣ ಏನು? ಮುಂದೇನಾಗಲಿದೆ?
1 ಗ್ರಾಂ 24 ಕ್ಯಾರೆಟ್ ಚಿನ್ನದ ದರ 12,458 ರೂ. ಇದ್ದರೆ 22 ಕ್ಯಾರೆಟ್ ಚಿನ್ನದ ದರ 11,410 ರೂ. ಇದೆ. 1 ಗ್ರಾಂ ಬೆಳ್ಳಿ ದರ 165 ರೂ. ಇದ್ದರೆ ಕೆಜಿ ಬೆಳ್ಳಿ ದರ 1.65 ಲಕ್ಷ ರೂ.ಗೆ ಇಳಿದಿದೆ.
