75 ನೇ ಮಿಸ್ ಯೂನಿವರ್ಸ್ ಆವೃತ್ತಿಯು ಮುಕ್ತಾಯಗೊಂಡಿದ್ದು, ಪೋರ್ಟೊ ರಿಕೊದ ಜೆನ್ನಿಫರ್ ಬ್ಯಾರೆಟೊ (Jennifer Barreto) ವಿಶ್ವ ಸುಂದರಿ (Miss Universe 2026) ಕಿರೀಟ ಧರಿಸಿದ್ದಾರೆ. ಮೆಕ್ಸಿಕೊದ ಹಾಲಿ ಮಿಸ್ ಯೂನಿವರ್ಸ್ ಫಾತಿಮಾ ಬಾಷ್ ತಮ್ಮ ಉತ್ತರಾಧಿಕಾರಿಗೆ ಕಿರೀಟ ತೊಡಿಸಿದ್ದಾರೆ.
ಡೊಮಿನಿಕನ್ ಗಣರಾಜ್ಯದ ಮೆಲಿಸ್ಸಾ ನುನೆಜ್ ಮೊದಲ ರನ್ನರ್ ಅಪ್ ಆಗಿ ಆಯ್ಕೆಯಾದರೆ, ವೆನೆಜುವೆಲಾದ ಕ್ಲಾರಾ ವೇಗಾಸ್ ಗೊಯೆಟ್ಜ್ ಎರಡನೇ ರನ್ನರ್ ಅಪ್ ಆಗಿ ಆಯ್ಕೆಯಾದರು. ಇದನ್ನೂ ಓದಿ: ಕಲೆಕ್ಷನ್ನಲ್ಲಿ ‘ರಾಮಾಯಣ’ ಅಬ್ಬರ; ಪುಷ್ಪ 2 ಜೀವಮಾನದ ಗಳಿಕೆ ದಾಖಲೆ ಮುರಿಯಲು ಕೇವಲ 7 ಕೋಟಿ ಬಾಕಿ
ಟಾಪ್ 5 ಫೈನಲಿಸ್ಟ್ಗಳಲ್ಲಿ ಫಿಲಿಪೈನ್ಸ್, ನ್ಯೂಜಿಲೆಂಡ್, ವೆನೆಜುವೆಲಾ, ಡೊಮಿನಿಕನ್ ರಿಪಬ್ಲಿಕ್ ಮತ್ತು ಪೋರ್ಟೊ ರಿಕೊ ದೇಶಗಳಿದ್ದವು. ಅಂತಿಮ ಸುತ್ತಿನಲ್ಲಿ, ಪ್ರತಿಯೊಬ್ಬ ಫೈನಲಿಸ್ಟ್ಗೆ ಒಂದೇ ಪ್ರಶ್ನೆಯನ್ನು ಕೇಳಲಾಯಿತು. ಜೆನ್ನಿಫರ್ ಬ್ಯಾರೆಟೊ ವಿಜೇತ ಉತ್ತರವನ್ನು ನೀಡಿದರು.
2026 ರ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಜೆನ್ನಿಫರ್ ಬ್ಯಾರೆಟೊ ಗೆಲುವಿನೊಂದಿಗೆ, ಪೋರ್ಟೊ ರಿಕೊ ಈಗ ಆರು ಬಾರಿ ಮಿಸ್ ಯೂನಿವರ್ಸ್ ಕಿರೀಟವನ್ನು ಗೆದ್ದಿದೆ. ಮಾರಿಸೋಲ್ ಮಲಾರೆಟ್ (1970), ಡೆಬೊರಾ ಕಾರ್ತಿ-ಡೆಯು (1985), ದಯನಾರಾ ಟೊರೆಸ್ (1993), ಡೆನಿಸ್ ಕ್ವಿನೋನ್ಸ್ (2001), ಜುಲೇಕಾ ರಿವೆರಾ (2006) ದೇಶದ ಹಿಂದಿನ ಪ್ರಶಸ್ತಿ ವಿಜೇತರು. ಇದನ್ನೂ ಓದಿ: ನ. 30ರಂದು ಸಿಸಿಬಿ ಮುಂದೆ ಹಾಜರಾಗುವಂತೆ ಧನ್ವೀರ್ಗೆ ಹೈಕೋರ್ಟ್ ಸೂಚನೆ
