-ಮತ್ತೆ ಸುಪ್ರೀಂ ಕದ ತಟ್ಟಲು ಮುಂದಾದ ಹಿಂದೂ ಕಾರ್ಯಕರ್ತರು
ಚೆನ್ನೈ: ತಮಿಳುನಾಡಿನ (Tamil Nadu) ಮಧುರೈ ತಿರುಪ್ಪರಂಕುಂದ್ರಂ (Thiruparankundram) ಕಾರ್ತಿಕ ದೀಪಂ ವಿವಾದ (Karthigai Deepam Controversy) ಮತ್ತೆ ಮುನ್ನೆಲೆಗೆ ಬಂದಿದೆ. ಕಲ್ಲಿನ ಕಂಬದ ಮೇಲೆ ಕಾರ್ತಿಕ ದೀಪ ಬೆಳಗಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ ಬಿಜೆಪಿ (BJP) ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರ ವಿರುದ್ಧ ಮಧುರೈ ಪೊಲೀಸರು (Madurai Police) ಪ್ರಕರಣ ದಾಖಲಿಸಿದ್ದಾರೆ.
ಒಟ್ಟು 300ಕ್ಕೂ ಅಧಿಕ ಮಂದಿಯ ವಿರುದ್ಧ ಆರು ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅನುಮತಿಯಿಲ್ಲದೆ ಕಾನೂನುಬಾಹಿರವಾಗಿ ಗುಂಪುಗೂಡುವುದು, ಸಾರ್ವಜನಿಕ ಶಾಂತಿಗೆ ಭಂಗ ತರುವುದು, ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದು ಹಾಗೂ ಸರ್ಕಾರಿ ನೌಕರರು ತಮ್ಮ ಕರ್ತವ್ಯ ನಿರ್ವಹಿಸದಂತೆ ಅಡ್ಡಿಪಡಿಸಿದ ಆರೋಪಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ಸುಪ್ರೀಂ ಹೇಳಿದ ಸ್ಥಳದಲ್ಲಿ ಬೆಳಗಲಿಲ್ಲ ಕಾರ್ತಿಕ ದೀಪ – ಕೋರ್ಟ್ ಆದೇಶ ಧಿಕ್ಕರಿಸಿದ ವಿಜಯ್
ಇನ್ನು ತಿರುಪ್ಪರಂಕುಂದ್ರಂ ಕಾರ್ತಿಕ ದೀಪಂ ವಿವಾದಕ್ಕೆ ಸಂಬಂಧಿಸಿದಂತೆ ಹಿಂದೂ ಕಾರ್ಯಕರ್ತರು ಮತ್ತೆ ಸುಪ್ರೀಂಕೋರ್ಟ್ ಕದ ತಟ್ಟಲು ಮುಂದಾಗಿದ್ದಾರೆ. ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿರುವ ಕಾರ್ಯಕರ್ತರು, ಮತ್ತೊಮ್ಮೆ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಇದನ್ನೂ ಓದಿ: ಕೋಟಿ ಒಡೆಯನಾದ ಮಾದಪ್ಪ; 27 ದಿನಗಳಲ್ಲಿ 2.50 ಕೋಟಿ ರೂ. ಕಾಣಿಕೆ ಸಂಗ್ರಹ
ಪವಿತ್ರವೆಂದು ನಂಬಲಾಗಿರುವ ಕಲ್ಲಿನ ಕಂಬದ ಮೇಲೆಯೇ ಕಾರ್ತಿಕ ದೀಪವನ್ನು ಬೆಳಗಿಸುವಂತೆ ಸುಪ್ರೀಂಕೋರ್ಟ್ (Supreme Court) ಸೂಚಿಸಿತ್ತು. ಆದರೆ, ವಿಜಯ್ ನೇತೃತ್ವದ ಸರ್ಕಾರ ಕಲ್ಲಿನ ಕಂಬದ ಬದಲಿಗೆ ಅದೇ ಬೆಟ್ಟದಲ್ಲಿರುವ ಸಾಂಪ್ರದಾಯಿಕವಲ್ಲದ ಉಚಿಪಿಳ್ಳಯರ್ ಮಂಟಪದಲ್ಲಿ ಕಾರ್ತಿಕ ದೀಪವನ್ನು ಬೆಳಗಿಸಿದೆ ಎಂದು ಹಿಂದೂ ಕಾರ್ಯಕರ್ತರು ಆರೋಪಿಸಿದ್ದಾರೆ. ಇದನ್ನೂ ಓದಿ: ಕಾವೇರಿ ಕೊಳ್ಳದಲ್ಲಿ ಮತ್ತೆ ಜೀವಜಲದ ಆತಂಕ – ಇಂದು ದೆಹಲಿಯಲ್ಲಿ CWMA ಮಹತ್ವದ ಸಭೆ
ಹೀಗಾಗಿ, ಸುಪ್ರೀಂಕೋರ್ಟ್ ಆದೇಶವನ್ನು ತಿರಸ್ಕರಿಸಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿರುವ ಹಿಂದೂ ಕಾರ್ಯಕರ್ತರು, ನ್ಯಾಯಾಲಯದ ಮೊರೆ ಹೋಗಲು ಮುಂದಾಗಿದ್ದಾರೆ. ಇದನ್ನೂ ಓದಿ: ಇಸ್ರೇಲ್ನಲ್ಲಿ ಮಂಗಳೂರು ಮೂಲದ ವ್ಯಕ್ತಿ ನಿಗೂಢ ಸಾವು – ಕೊಲೆ ಶಂಕೆ
