ರಾಯಚೂರು: ಜಿಲ್ಲೆಯ ಯರಮರಸ್ನಲ್ಲಿರುವ ವೈಟಿಪಿಎಸ್ (YTPS) ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಎರಡನೇ ಘಟಕದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಭಾರೀ ಅನಾಹುತ ತಪ್ಪಿದೆ.
ತಾಂತ್ರಿಕ ದೋಷ (Technical Glitch) ಹಿನ್ನೆಲೆ ವಿದ್ಯುತ್ ಉತ್ಪಾದನೆಯಲ್ಲಿ ಕುಂಠಿತವಾಗಿದ್ದು, ಕಲ್ಲಿದ್ದಲು ಪೂರೈಸುವ ಟಿಪ್ಲರ್ ಯೂನಿಟ್ನ ಬೆಲ್ಟ್ ಹಾಗೂ ಪುಲ್ಲಿಗಳು ಕುಸಿದು ಬಿದ್ದು ಸಮಸ್ಯೆ ಉಂಟಾಗಿದೆ. ನಿರಂತರವಾಗಿ ದುರಸ್ತಿ ಕಾರ್ಯ ನಡೆದಿದೆ. ಇದನ್ನೂ ಓದಿ: ಸಿಎಂ ವಿಡಿಯೋ ಮಾತುಕತೆಗೂ ನಿಲ್ಲದ ಮುಷ್ಕರ – 9ನೇ ದಿನಕ್ಕೆ ಕಾಲಿಟ್ಟ `ಆಶಾ’ ಹೋರಾಟ
ಗುತ್ತಿಗೆ ಪಡೆದಿರುವ ಖಾಸಗಿ ಕಂಪನಿಯ ಅಸಮರ್ಪಕ ನಿರ್ವಹಣೆ ಆರೋಪ ಕೇಳಿಬಂದಿದೆ. 1600 ಮೆಗಾ ವ್ಯಾಟ್ ಸಾಮರ್ಥ್ಯದ ವಿದ್ಯುತ್ ಕೇಂದ್ರದಲ್ಲಿ 533 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದ್ದು, ತಾಂತ್ರಿಕ ಸಮಸ್ಯೆ ಕಾರಣಕ್ಕೆ ವಿದ್ಯುತ್ ಉತ್ಪಾದನೆಯಲ್ಲಿ ಕುಸಿತವಾಗಿದೆ.
