ಸ್ಯಾಂಡಲ್ವುಡ್ ಸಿನಿ ಅಖಾಡದಲ್ಲಿ ಇದೀಗ ಕಿಚ್ಚ ಸುದೀಪ್ (Kiccha Sudeep) ಹಾಗೂ ನಿರ್ದೇಶಕ ಪ್ರೇಮ್ (Director Prem) ಕಾಂಬಿನೇಷನ್ ಸಿನಿಮಾ ಸಖತ್ ಚರ್ಚೆಯಲ್ಲಿದೆ. ಇದೇ ನವೆಂಬರ್ 27ರಂದು ಬೆಂಗಳೂರಿನ ಖಾಸಗಿ ಮಾಲ್ನಲ್ಲಿ ಈ ಹೊಸ ಚಿತ್ರದ ಟೈಟಲ್ ಟೀಸರ್ ಬಿಡುಗಡೆಗೆ ಸಿದ್ಧವಾಗಿದೆ. ಹೀಗಾಗಿ ಟೈಟಲ್ ವಿಚಾರ ಭಾರೀ ನಿರೀಕ್ಷೆ ಹುಟ್ಟಿಸಿದೆ.
ಸುದೀಪ್ ಹಾಗೂ ಪ್ರೇಮ್ ಒಟ್ಟಿಗೆ ಸಿನಿಮಾ ಮಾಡ್ತಿರೋ 3ನೇ ಚಿತ್ರವಿದು. ಆದ್ರೆ ವಿಶೇಷ ಅಂದ್ರೆ ಪ್ರೇಮ್ ಸಾರಥ್ಯದಲ್ಲಿ ಸುದೀಪ್ ಸಂಪೂರ್ಣ ನಾಯಕರಾಗಿ ಕಾಣಿಸಿಕೊಳ್ತಿರೋ ಮೊದಲ ಚಿತ್ರ. ಈ ಹಿಂದೆ `ದಿ ವಿಲನ್’, ಕೆಡಿ ಚಿತ್ರಗಳಲ್ಲಿ ಪ್ರೇಮ್ ನಿರ್ದೇಶನದಲ್ಲಿ ಸುದೀಪ್ ನಟಿಸಿದ್ದರು. ಆದರೆ ಇದು ಸುದೀಪ್ ಪ್ರೇಮ್ ಸೇರಿ ಕೆಲಸ ಮಾಡುತ್ತಿರುವ ಇಂಡಿಪೆಂಡೆಂಟ್ ಹೀರೋ ಚಿತ್ರವಾಗಿರಲಿದೆ.
ಕೆಲ ದಿನಗಳಲ್ಲೇ ಕಿಚ್ಚ, ಪ್ರೇಮ್ ಕಾಂಬಿನೇಷನ್ ಸಿನಿಮಾದ ಟೈಟಲ್ ಘೋಷಣೆ ಆಗಲಿದೆ. ಹೇಳಿಕೇಳಿ ಪ್ರೇಮ್ ಶೀರ್ಷಿಕೆ ಇಡೋದ್ರಲ್ಲಿ ಪಂಟರ್ ಎಂದೇ ಖ್ಯಾತಿ ಪಡೆದವರು. ಶೀರ್ಷಿಕೆಯೇ ಚಿತ್ರದ ಮೊದಲ ಆಮಂತ್ರಣ ಎಂದು ಪರಿಗಣಿಸಲಾಗುತ್ತೆ. ಸೋಷಿಯಲ್ ಮೀಡಿಯಾದಲ್ಲಿ ಹಲವರು ಶೀರ್ಷಿಕೆ ಏನಿರಬಹುದು ಅಂತಾ ಗೆಸ್ ಮಾಡೋಕೆ ಶುರು ಮಾಡಿದ್ದಾರೆ. ಆದರೆ ಒಮ್ಮೆ ಘೋಷಣೆಯಾದಾಗ ಭರ್ಜರಿ ಸದ್ದು ಮಾಡೋದಂತೂ ಗ್ಯಾರಂಟಿ ಎನ್ನುತ್ತಿದೆ ಗಾಂಧಿನಗರದ ಸುದ್ದಿಮೂಲ.

