ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Case) ಕೇಸ್ನಲ್ಲಿ ಜೈಲುಪಾಲಾಗಿರುವ ಆರೋಪಿ ಪವಿತ್ರಾ ಗೌಡ ಇದೀಗ ಎರಡನೇ ಬಾರಿಗೆ ಜಾಮೀನು ಕೋರಿ ಹೈಕೋರ್ಟ್ (High Court) ಮೆಟ್ಟಿಲೇರಿದ್ದಾರೆ.
ಸುಪ್ರೀಂಕೋರ್ಟ್ (Supreme Court) ಜಾಮೀನು ರದ್ದು ಮಾಡಿದ ಬಳಿಕ CRPC 439 ಅಡಿಯಲ್ಲಿ ಪವಿತ್ರಗೌಡ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಇಂದು (ನ.24) ಹೈಕೋರ್ಟ್ ನ್ಯಾಯಮೂರ್ತಿ ವಿಶ್ವಜೀತ್ ಶೆಟ್ಟಿ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ. ಇದನ್ನೂ ಓದಿ: ದರ್ಶನ್, ಪವಿತ್ರಾ ಸೇರಿ ಯಾರನ್ನೂ ನೋಡಿಲ್ಲ – ಪಟ್ಟಣಗೆರೆ ಶೆಡ್ ವಾಚ್ಮ್ಯಾನ್ ಸಾಕ್ಷಿ ಹೇಳಿಕೆ ದಾಖಲು
ಕಳೆದ ಒಂದು ವರ್ಷದಿಂದ ಪರಪ್ಪನ ಅಗ್ರಹಾರ ಜೈಲು ಸೇರಿದ್ದು, ಅಲ್ಲಿದ್ದುಕೊಂಡೇ ವಿಚಾರಣೆ ಎದುರಿಸುತ್ತಿದ್ದಾರೆ. ಈಗಾಗಲೇ ಕೇಸ್ನ ಐ-ವಿಟ್ನೇಸ್ಗಳು ಎಲ್ಲರೂ ಉಲ್ಟಾ ಸಾಕ್ಷ್ಯಗಳನ್ನು ನುಡಿಯುತ್ತಿದ್ದಾರೆ. ನಮ್ಮ ಕಕ್ಷಿದಾರರ ವಿರುದ್ಧ ಯಾವುದೇ ಆರೋಪ ವಿಚಾರಣೆಯಲ್ಲಿ ಬಂದಿಲ್ಲ. ಹೀಗಾಗಿ ಷರತ್ತುಗಳನ್ನು ವಿಧಿಸಿ ಜಾಮೀನು ನೀಡುವಂತೆ ಪವಿತ್ರಗೌಡ ಪರ ವಕೀಲರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಈ ಹಿಂದೆ ಸೆ.26ರಂದು 59ನೇ ಸೆಷನ್ಸ್ ಕೋರ್ಟ್ ಪವಿತ್ರಗೌಡ ಜಾಮೀನು ಅರ್ಜಿ ವಜಾ ಮಾಡಿತ್ತು. ಇದೀಗ ಹೈಕೋರ್ಟ್ಗೆ ವಕೀಲ ನಾರಾಯಣಸ್ವಾಮಿ ಮೂಲಕ ಅರ್ಜಿ ಸಲ್ಲಿಕೆ ಮಾಡಿದ್ದಾರೆ.ಇದನ್ನೂ ಓದಿ: ನಟ ಧನ್ವೀರ್ಗೆ ಮತ್ತೆ ಸಂಕಷ್ಟ – 3 ಕೇಸ್ಗಳ ತಡೆಯಾಜ್ಞೆ ತೆರವು
