ಬೆಂಗಳೂರು: ಶಾಸಕಿ ನಯನಾ ಮೋಟಮ್ಮ (Nayana Motamma) ಅವರ ಆಕ್ರೋಶ, ನೋವು ನನಗೆ ಅರ್ಥ ಆಗುತ್ತದೆ. ಆದರೆ ರಾಜೀನಾಮೆ ನೀಡುವುದು ಅದಕ್ಕೆ ಪರಿಹಾರ ಅಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಪೊನ್ನಣ್ಣ (A.S Ponnanna) ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ, ನಾನು ಸಹ ಮಲೆನಾಡು ಭಾಗದ ಶಾಸಕ, ನಮ್ಮಲ್ಲೂ ಆನೆ (Elephant), ಹುಲಿ, ಕರಡಿ ಆತಂಕ ಇದೆ. ನಯನಾ ಮೋಟಮ್ಮ ಅವರಿಗೆ ಏನು ಆಕ್ರೋಶ ಇದೆ, ನೋವಿದೆ ಅದಕ್ಕೆ ನಾನು ಒಪ್ಪಿಗೆ ಸೂಚಿಸುತ್ತೇನೆ. ಆದರೆ ಅದಕ್ಕೆ ರಾಜೀನಾಮೆ ಪರಿಹಾರ ಅಲ್ಲ ಎಂದರು. ಇದನ್ನೂ ಓದಿ: ನಮ್ಮ ಮಾತಿಗೆ ಬೆಲೆ ಇಲ್ಲ ಅಂದ್ರೆ ನಾವ್ಯಾಕೆ ಶಾಸಕರಾಗಿರಬೇಕು: ನಯನಾ ಮೋಟಮ್ಮ ಬೇಸರ
ನಾನು ನಯನಾ ಮೋಟಮ್ಮ ಅವರಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡಿದೆ. ದೂರವಾಣಿ ಮೂಲಕ ಸಿಎಂ ಹಾಗೂ ಅರಣ್ಯ ಸಚಿವರ ಜೊತೆ ಚರ್ಚೆ ಮಾಡಿದೆ. ಯಾರಿಗೂ ತೊಂದರೆ ಆಗದಂತೆ ಇವತ್ತು ರಾತ್ರಿ ಆನೆಗಳನ್ನು ಕಾಡಿಗೆ ಬಿಡಲಾಗುತ್ತೆ. ಸಿಎಂ ಕೂಡ ರಾಜೀನಾಮೆ ಪರಿಹಾರ ಅಲ್ಲ ಎಂದಿದ್ದಾರೆ ಎಂದು ತಿಳಿಸಿದರು.
ಪೂರ್ಣ ಪ್ರಮಾಣದಲ್ಲಿ ಅಲ್ಲದಿದ್ದರು 80-90% ಸಮಸ್ಯೆ ಬಗೆಹರಿಸಬಹುದು. ವನ್ಯಜೀವಿ ಹಾಗೂ ಮಾನವ ಸಂಘರ್ಷದಲ್ಲಿ ಅಧಿಕಾರಿಗಳ ವೈಪಲ್ಯ ಇದೆ. ಅದೇ ಕಾರಣಕ್ಕೆ ಇದೆಲ್ಲಾ ಆಗುತ್ತಿದೆ. ಇದಕ್ಕೆ ಅಧಿಕಾರಿಗಳೇ ಹೊಣೆ. ಜನರ ಆಶಯ ಈಡೇರಿಸುವಲ್ಲಿ ಅರಣ್ಯ ಇಲಾಖೆ ವಿಫಲವಾಗಿದೆ. ನಾನು ಓರ್ವ ಶಾಸಕನಾಗಿ ಅಧಿಕಾರಿಗಳಿಗೆ ಮನವಿ ಮಾಡುತ್ತೇನೆ. ನಿಮ್ಮ ಜವಬ್ದಾರಿ ನಿರ್ವಹಿಸಿ, ಆಗದಿದ್ದರೆ ಬೇರೆಯವರಿಗೆ ಅವಕಾಶ ಮಾಡಿಕೊಡಿ ಎಂದು ಖಾರವಾಗಿ ಹೇಳಿದ್ದಾರೆ. ಇದನ್ನೂ ಓದಿ: ಹಾಸನದ ಗಜಪಡೆಯನ್ನು ಚಿಕ್ಕಮಗಳೂರಿಗೆ ನುಗ್ಗಿಸಿದ್ದಕ್ಕೆ ಆಕ್ರೋಶ – ರಾಜೀನಾಮೆ ಪತ್ರ ಹಿಡಿದು ಸ್ಪೀಕರ್ ಕಚೇರಿಗೆ ಬಂದ ನಯನಾ ಮೋಟಮ್ಮ
ಇದೇ ವೇಳೆ, ಟೆಕ್ನಿಕಲ್ ಆಗಿ ನಯನಾ ಮೋಟಮ್ಮ ಅವರ ರಾಜೀನಾಮೆ ಪತ್ರ ಸರಿ ಇತ್ತ ಎಂಬ ಪ್ರಶ್ನೆಗೆ, ನನಗೆ ಆ ಬಗ್ಗೆ ಗೊತ್ತಿಲ್ಲ. ಅವರು ವಕೀಲರು, ಅವರು ಲಾ ಕಾಲೇಜಿನಲ್ಲಿ ಓದಿದ್ದು. ನಾನು ಸರ್ಕಾರಿ ಶಾಲೆಯಲ್ಲಿ ಓದಿದ್ದು ಎಂದು ಮಾರ್ಮಿಕವಾಗಿ ಹೇಳಿ ನಕ್ಕಿದ್ದಾರೆ.
