ಬೆಂಗಳೂರು: ಉಳಿಕೆ ಮೂಲ ವೃಂದದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು (PU College Principal) ಹಾಗೂ ವಸತಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ಹುದ್ದೆಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಇಂದು ಯಶಸ್ವಿಯಾಗಿ ಲಿಖಿತ ಪರೀಕ್ಷೆ ನಡೆಸಿತು.
ಪ್ರಾಂಶುಪಾಲರ ಹುದ್ದೆಗೆ ಅರ್ಜಿ ಸಲ್ಲಿಸಿದ್ದ 2,850 ಮಂದಿಯ ಪೈಕಿ 2,349 (82% ರಷ್ಟು) ಮಂದಿ ಪರೀಕ್ಷೆಗೆ ಹಾಜರಾಗಿದ್ದರು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ. ಇದನ್ನೂ ಓದಿ: ನ.15 ರಂದು ನಡೆದಿದ್ದ ಗೆಜೆಟೆಡ್ ಪ್ರೊಬೇಷನರಿ ಹುದ್ದೆ ನೇಮಕಾತಿ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶ ಪ್ರಕಟ
ವಸತಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರ ಉಳಿಕೆ ಮೂಲ ವೃಂದದ ಹುದ್ದೆಗಳಿಗೆ ಬೆಳಿಗ್ಗೆ ನಡೆದ ಸಾಮಾನ್ಯ ಜ್ಞಾನ ಪತ್ರಿಕೆಯನ್ನು ಅರ್ಜಿ ಸಲ್ಲಿಸಿದ್ದ 84,581 ಅಭ್ಯರ್ಥಿಗಳ ಪೈಕಿ 59,046 (70%) ಮಂದಿ ಬರೆದಿದ್ದಾರೆ. ಹಾಗೆಯೇ ಕನ್ನಡ ವಿಷಯದ ಪರೀಕ್ಷೆಯನ್ನು 12,234 ಅಭ್ಯರ್ಥಿಗಳ ಪೈಕಿ 9,771 (80%) ಮಂದಿ ಹಾಗೂ ವಿಜ್ಞಾನ ವಿಷಯದ ಪತ್ರಿಕೆಯನ್ನು 10,744 ಅಭ್ಯರ್ಥಿಗಳ ಪೈಕಿ 7,459 (69%) ಮಂದಿ ಬರೆದರು ಎಂದು ಅವರು ವಿವರಿಸಿದ್ದಾರೆ. ಇದನ್ನೂ ಓದಿ: ಆಶಾ ಕಾರ್ಯಕರ್ತೆಯರ ಪ್ರತಿಭಟನೆ – ಫ್ರೀಡಂ ಪಾರ್ಕ್ಗೆ ಮನೆ ಮಂದಿ ಕರೆಸುವುದಾಗಿ ವಾರ್ನಿಂಗ್
