ಮಾಸ್ಕೋ: ಭಾರತದ ವೈವಿಧ್ಯತೆಯಿಂದ ನಾನು ಆಕರ್ಷಿತನಾಗಿದ್ದೇನೆ. ನಿಜಕ್ಕೂ ಅದು ಅದ್ಭುತ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಬಣ್ಣಿಸಿದ್ದಾರೆ.
ಪುಟಿನ್ ಕಾಲಕಾಲಕ್ಕೆ ಭಾರತದ ಸಾಂಸ್ಕೃತಿಕ ವೈವಿಧ್ಯತೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಇತ್ತೀಚೆಗೆ, ನಾಯಕ ಪ್ರಧಾನಿ ನರೇಂದ್ರ ಮೋದಿಯವರೊಂದಿಗಿನ ತಮ್ಮ ಸಂಭಾಷಣೆಯನ್ನು ನೆನಪಿಸಿಕೊಂಡಿದ್ದಾರೆ. ಭಾರತದ ಭಾಷಾ ವೈವಿಧ್ಯತೆಯನ್ನು ಶ್ಲಾಘಿಸಿದ್ದಾರೆ. ದೇಶದ ಅರ್ಧಕ್ಕಿಂತ ಹೆಚ್ಚು ಜನರು ತಮ್ಮದೇ ಆದ ಭಾಷೆಗಳನ್ನು ಮಾತನಾಡುತ್ತಾರೆ ಎಂದು ತಿಳಿಸಿದ್ದಾರೆ.
ಭಾರತೀಯ ನಾಗರಿಕತೆಯನ್ನು ತೆಗೆದುಕೊಳ್ಳಿ. ಅದು ಅತ್ಯಂತ ಹಳೆಯದು. ಅದು ತುಂಬಾ ಆಸಕ್ತಿದಾಯಕವಾಗಿದೆ. ನಾನು ಅದರ ಬಗ್ಗೆ ಹೆಚ್ಚು ಕಲಿತಂತೆ, ನಾನು ಹೆಚ್ಚು ಆಕರ್ಷಿತನಾಗುತ್ತೇನೆ ಎಂದು ಪುಟಿನ್ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
ಇತ್ತೀಚೆಗೆ ಪ್ರಧಾನಿ ಮೋದಿಯವರೊಂದಿಗಿನ ಸಂಭಾಷಣೆಯ ಸಮಯದಲ್ಲಿ, ಭಾರತದ ಅಧಿಕೃತ ಭಾಷೆಯನ್ನು ಎಷ್ಟು ಜನರು ಮಾತನಾಡುತ್ತಾರೆ ಎಂದು ಕೇಳಿದ್ದಾಗಿ ತಿಳಿಸಿದ್ದಾರೆ.
ನಾನು ಇತ್ತೀಚೆಗೆ ಪ್ರಧಾನಿ ಮೋದಿಯವರೊಂದಿಗೆ ಮಾತನಾಡಿದ್ದೆ. ದೇಶದ ಎಷ್ಟು ನಾಗರಿಕರು ಅಧಿಕೃತ ಭಾಷೆಯನ್ನು ಮಾತನಾಡುತ್ತಾರೆ? ಎಂದು ಕೇಳಿದೆ. ಅವರು ಸುಮಾರು 60 ಕೋಟಿ ಜನರು ಎಂದು ಉತ್ತರಿಸಿದರು. ದೇಶದ ಒಟ್ಟು ಜನಸಂಖ್ಯೆ ಎಷ್ಟು? ಎಂದು ಕೇಳಿದೆ. ಅದಕ್ಕೆ ಮೋದಿ ಅವರು, ಒಂದೂವರೆ ಬಿಲಿಯನ್ (150 ಕೋಟಿ) ಎಂದು ಉತ್ತರಿಸಿದರು ಎಂದು ಸಂಭಾಷಣೆ ಕುರಿತು ಪುಟಿನ್ ಮಾತನಾಡಿದ್ದಾರೆ.
ಒಟ್ಟು ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರು ಮಾತ್ರ ರಾಷ್ಟ್ರದ ಭಾಷೆಯನ್ನು ಮಾತನಾಡುತ್ತಾರಾ ಎಂದು ನಾನು ಆಶ್ಚರ್ಯಚಕಿತನಾಗಿ ಕೇಳಿದೆ. ಮೂರನೇ ಎರಡರಷ್ಟು ಜನ ತಮ್ಮದೇ ಸ್ಥಳೀಯ ಭಾಷೆಗಳನ್ನು ಮಾತನಾಡುತ್ತಾರೆ ಎಂದು ಮೋದಿ ತಿಳಿಸಿದರು ಎಂದು ಹೇಳಿದ್ದಾರೆ.
