ಬೆಳಗಾವಿ: ಬಸವಣ್ಣನ ಕುರಿತು ಅವಹೇಳನಕಾರಿ ಬರಹ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಲೇಖಕ ರವಿ ಹಂಜ್ಗೆ (Ravi Hanj) ನೋಟಿಸ್ ಜಾರಿ ಮಾಡಲಾಗಿದೆ.
ನ.26ರ ಒಳಗಾಗಿ ಖುದ್ದು ವಿಚಾರಣೆಗೆ ಹಾಜರಾಗುವಂತೆ ಬೆಳಗಾವಿಯ ಮಾರ್ಕೆಟ್ ಠಾಣೆ ಪೊಲೀಸರು ನೋಟಿಸ್ ನೀಡಿದ್ದಾರೆ. ಇದನ್ನೂ ಓದಿ: ‘ಬಸವ ಮಂಟಪ’ ಲೇಖಕ ರವಿ ಹಂಜ್ ಹತ್ಯೆ ಮಾಡಿದ್ರೆ 5 ಲಕ್ಷ ರೂ. ಬಹುಮಾನ: ಪ್ರಕಾಶ್ ಮಹಾಜನ್ ವಿವಾದಾತ್ಮಕ ಹೇಳಿಕೆ
ಪುಸ್ತಕ ಕುರಿತು ವಿವಾದ ಭುಗಿಲೆದ್ದಿತ್ತು. ಬೆಳಗಾವಿ ಪೊಲೀಸರ ಲೂಕೌಟ್ ನೋಟಿಸ್ ಹಿನ್ನೆಲೆ ಶನಿವಾರ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ರವಿ ಹಂಜ್ ಬಂಧಿಸಲಾಯಿತು.
ಈ ವೇಳೆ ವಿಮಾನ ನಿಲ್ದಾಣ ಸೆಕ್ಯುರಿಟಿ ಮೂಲಕ ಹಂಜ್ಗೆ ನೋಟಿಸ್ ನೀಡಲಾಗಿದೆ. ಇ-ಮೇಲ್ ಮಾಡಿ ನೋಟಿಸ್ ನೀಡಿ ಪೊಲೀಸರು ರಿಸೀವ್ಡ್ ಪಡೆದಿದ್ದಾರೆ. ಇದನ್ನೂ ಓದಿ: ದುಬೈಗೆ ಪರಾರಿಯಾಗಲು ಯತ್ನಿಸುತ್ತಿದ್ದ ಲೇಖಕ ರವಿ ಹಂಜ್ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಬಂಧನ
