ಒಟ್ಟಾವಾ: ಕೆನಡಾದ ಸರ್ರೆ ನಗರದ ವಾಲ್ಮಾರ್ಟ್ ಮಳಿಗೆಯ ಹೊರಗೆ ಭಾರತೀಯ ಮೂಲದ ದಂಪತಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಇದನ್ನು ಪೂರ್ವನಿಯೋಜಿತವಾಗಿ ನಡೆಸಲಾದ ದಾಳಿ ಎಂದು ಪೊಲೀಸರು ಶಂಕಿಸಿದ್ದಾರೆ.
ನವೆಂಬರ್ 15ರ ರಾತ್ರಿ 10:38ರ ಸುಮಾರಿಗೆ ವಾಲ್ಮಾರ್ಟ್ ಪಾರ್ಕಿಂಗ್ ಸ್ಥಳದಲ್ಲಿ ಡೆಲ್ಟಾ ಪಟ್ಟಣದ ನಿವಾಸಿಗಳಾದ ಗಗನ್ಪ್ರೀತ್ (ಗ್ಯಾರಿ) ರೆಹಾಲ್ (23) ಮತ್ತು ಸುಖ್ಜೀತ್ ಕೌರ್ (24) ಎಂಬ ದಂಪತಿ ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ತಕ್ಷಣವೇ ಸ್ಥಳಕ್ಕೆ ಧಾವಿಸಿದ ತುರ್ತು ಸಿಬ್ಬಂದಿ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸಾಗಿಸಿದರಾದರೂ, ಇಬ್ಬರೂ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಪ್ರಕರಣದ ತನಿಖೆಯನ್ನು ಕೆನಡಾದ ಪ್ರಮುಖ ತನಿಖಾ ಘಟಕವಾದ ‘ಇಂಟಿಗ್ರೇಟೆಡ್ ಹೋಮಿಸೈಡ್ ಇನ್ವೆಸ್ಟಿಗೇಷನ್ ಟೀಮ್’ (IHIT) ಕೈಗೆತ್ತಿಕೊಂಡಿದೆ. ಶಸ್ತ್ರಾಸ್ತ್ರ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ರೆಹಾಲ್ ಪೊಲೀಸರಿಗೆ ಪರಿಚಿತನಾಗಿದ್ದರೆ, ಕೌರ್ ಅವರಿಗೆ ಕೆನಡಾದಲ್ಲಿ ಹೆಚ್ಚಿನ ಸಂಪರ್ಕಗಳಿರಲಿಲ್ಲ ಎನ್ನಲಾಗಿದೆ.ಇದನ್ನೂ ಓದಿ: ಹುಬ್ಬಳ್ಳಿ ಅಂಜಲಿ ಅಂಬಿಗೇರ ಕೊಲೆ ಕೇಸ್; ಗಿರೀಶ್ನನ್ನು ದೋಷಿ ಎಂದು ಕೋರ್ಟ್ ತೀರ್ಪು
ಗುಂಡಿನ ದಾಳಿ ನಡೆದ 13 ನಿಮಿಷಗಳ ಬಳಿಕ ಸಮೀಪದಲ್ಲೇ ಕಾರೊಂದಕ್ಕೆ ಬೆಂಕಿ ಹಚ್ಚಲಾಗಿದ್ದು, ದುಷ್ಕರ್ಮಿಗಳು ಕೃತ್ಯಕ್ಕೆ ಬಳಸಿದ ವಾಹನವನ್ನೇ ಸುಟ್ಟುಹಾಕಿರಬಹುದು ಎಂದು ತನಿಖಾಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸಿಸಿಟಿವಿ ಅಥವಾ ಡ್ಯಾಶ್ ಕ್ಯಾಮೆರಾ ದೃಶ್ಯಗಳಿದ್ದರೆ ನೀಡುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.ಇದನ್ನೂ ಓದಿ: ‘ನಿತೀಶ್ ಸೇತು’ ಉದ್ಘಾಟನೆಗೆ ತೇಜಸ್ವಿ ಯಾದವ್ ಆಹ್ವಾನ ಕೊಟ್ಟಿಲ್ಲ ಅಂತ ಮೋದಿ ಫ್ಲೆಕ್ಸ್ ಹರಿದು RJD ಕಾರ್ಯಕರ್ತರ ಆಕ್ರೋಶ
