ಚಿಕ್ಕಬಳ್ಳಾಪುರ: ಎನ್ಓಸಿ ನೀಡಲು 43,000 ರೂ. ಲಂಚ (Bribe) ಪಡೆಯುತ್ತಿದ್ದ ಗುಡಿಬಂಡೆ ಉಪವಲಯ ಅರಣ್ಯಾಧಿಕಾರಿಯನ್ನು (DRF) ಲೋಕಾಯುಕ್ತ (Lokayukta) ಅಧಿಕಾರಿಗಳು ರೆಡ್ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಡಿಆರ್ಎಫ್ ವಿಶ್ವನಾಥ್ ಲೋಕಾಯುಕ್ತ ಬಲೆಗೆ ಬಿದ್ದ ಅಧಿಕಾರಿ. ಕಲ್ಲು ಚಪ್ಪಡಿ ತೆಗೆಯುವುದಕ್ಕೆ ಎನ್ಓಸಿ ನೀಡಲು ಮೂವರು ಜನರಿಂದ 1.5 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಕೊನೆಗೆ 43,000 ರೂ. ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಇದನ್ನೂ ಓದಿ: 3 ಲಕ್ಷ ಲಂಚ ಪಡೆಯುವಾಗ ʻಲೋಕಾʼ ದಾಳಿ – ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಅಧಿಕಾರಿ
ಚಿಕ್ಕಬಳ್ಳಾಪುರ ಲೋಕಾಯುಕ್ತ ಎಸ್ಪಿ ಶಿವಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ. ಇದನ್ನೂ ಓದಿ: ಲಂಚಕ್ಕಾಗಿ 500 ಕೋಟಿ ರಕ್ಷಣಾ ಒಪ್ಪಂದದ ಮಾಹಿತಿ ಸೋರಿಕೆ ಆರೋಪ – ಮ್ಯೂನಿಷನ್ಸ್ ಇಂಡಿಯಾ CEO ಸೇರಿ ಮೂವರು ಅರೆಸ್ಟ್
