ವಾಷಿಂಗ್ಟನ್: ಅಮೆರಿಕವು ಉತ್ತಮ ಆರ್ಥಿಕ ಅಂಕಿಅಂಶಗಳನ್ನು ದಾಖಲಿಸುತ್ತಿದ್ದರೂ ಬಡ್ಡಿದರಗಳನ್ನು ಏರಿಸುವ ಮೂಲಕ ಅಮೆರಿಕದ ಕೇಂದ್ರ ಬ್ಯಾಂಕ್ (Federal Reserve) ದೇಶವನ್ನು ನಾಶಪಡಿಸುತ್ತಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಭಾರತದ ಆರ್ಥಿಕತೆಯನ್ನು(Indian Economy) ಉದಾಹರಣೆಯಾಗಿ ನೀಡಿದ ಅವರು, ಬಡ್ಡಿದರಗಳನ್ನು ಕಡಿಮೆ ಮಾಡಿದರೆ ಅಮೆರಿಕದ ಜಿಡಿಪಿ (GDP) ಶೇ.15-20ರಷ್ಟು ಬೆಳವಣಿಗೆ ಕಾಣಲಿದೆ ಎಂದು ಪ್ರತಿಪಾದಿಸಿದ್ದಾರೆ.
ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, “ನಮ್ಮಲ್ಲಿ ಅತ್ಯಂತ ರಾಜಕೀಯಪ್ರೇರಿತ ಫೆಡರಲ್ ರಿಸರ್ವ್ ಇರುವುದರಿಂದ ಬಡ್ಡಿದರಗಳು (Interest Rate) ತುಂಬಾ ಹೆಚ್ಚಿವೆ. ನಾನು ಅಧ್ಯಕ್ಷರನ್ನು ದೂಷಿಸುತ್ತಿಲ್ಲ, ಆದರೆ ಫೆಡರಲ್ ರಿಸರ್ವ್ ರಾಜಕೀಯ ಮಾಡುತ್ತಿದೆ ಎಂಬುದು ಸತ್ಯ. ನಾವು ಉತ್ತಮ ಆರ್ಥಿಕ ಅಂಕಿಅಂಶಗಳನ್ನು ಪ್ರಕಟಿಸಿದಾಗಲೆಲ್ಲಾ ಅವರು ಬಡ್ಡಿದರಗಳನ್ನು ಏರಿಸುತ್ತಾರೆ. ಅವರು ಒಂದು ಉದ್ದೇಶದಿಂದಲೇ ಹಾಗೆ ಮಾಡುತ್ತಾರೆ. ವಾಸ್ತವವಾಗಿ ಇದಕ್ಕೆ ವಿರುದ್ಧವಾಗಿ ನಡೆಯಬೇಕು” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಮೆರಿಕ(USA) ಉತ್ತಮ ಆರ್ಥಿಕ ಸಾಧನೆ ಮಾಡಿದಾಗ ಬಡ್ಡಿದರಗಳನ್ನು ಕಡಿಮೆ ಮಾಡಲು ದೇಶಕ್ಕೆ ಹೆಚ್ಚಿನ ಅರ್ಹತೆ ಇರುತ್ತದೆ. ಆದರೆ ಇಲ್ಲಿ ತದ್ವಿರುದ್ಧವಾಗಿ ನಡೆಯುತ್ತಿದೆ ಎಂದು ಟ್ರಂಪ್ ಹೇಳಿದ್ದಾರೆ. ದೇಶವನ್ನು ನಾಶಮಾಡಲು ನಾವು ಇದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದೇವೆ. ಇಂತಹ ಅದ್ಭುತ ಅಂಕಿಅಂಶಗಳು ಬಂದಾಗ ದರಗಳನ್ನು ಏರಿಸುತ್ತಲೇ ಹೋಗಬಾರದು. ಬದಲಾಗಿ ದರಗಳನ್ನು ಇಳಿಸಬೇಕು. ಹಾಗೆ ಮಾಡಿದ್ದರೆ ನಮ್ಮ ಜಿಡಿಪಿ ಶೇ. 4ರ ಬದಲಿಗೆ ಶೇ. 15 ಅಥವಾ ಶೇ. 20ರಷ್ಟಿರುತ್ತಿತ್ತು ಮತ್ತು ನಾವು ಸಾಲವನ್ನು ಅತ್ಯಂತ ವೇಗವಾಗಿ ತೀರಿಸಬಹುದಿತ್ತು ಎಂದು ಅವರು ಅಭಿಪ್ರಾಯಪಟ್ಟರು.
#WATCH | 🚨 “India has low interest rates and they have a 7% GDP. We’d have a 14%, 15%, maybe even a 20% GDP.”
US President Donald Trump cited India’s 7% GDP growth and low interest rates to argue that the US economy could grow by as much as 20% if the Federal Reserve cut borrowing costs, while accusing the central bank of holding back economic expansion.
Trump alleged, the Federal Reserve’s approach was restricting the country’s growth potential. “Interest rates are too high because we have a very political Fed. When we have these great numbers, you shouldn’t keep raising the rates. You should lower rates because we’re a better credit,” he said.
#DonaldTrump #India #GDP
— Moneycontrol (@moneycontrolcom) November 21, 2026
ಇದೇ ವೇಳೆ ಭಾರತವನ್ನು ಉಲ್ಲೇಖಿಸಿ ಭಾರತದಲ್ಲಿ ಕಡಿಮೆ ಬಡ್ಡಿದರವಿದ್ದು, ಅಮೆರಿಕದಲ್ಲಿ ಅತ್ಯಂತ ಕಡಿಮೆ ಬಡ್ಡಿದರ ಇರಬೇಕು ಎಂದು ಹೇಳಿದರು. “ನೀವು ಭಾರತವನ್ನು ನೋಡಿದರೆ, ಅಲ್ಲಿ ಕಡಿಮೆ ಬಡ್ಡಿದರವಿದೆ ಮತ್ತು ಶೇ. 7ರಷ್ಟು ಜಿಡಿಪಿ ಹೊಂದಿದ್ದಾರೆ. ನಾವು ಬಡ್ಡಿದರ ಇಳಿಸಿದ್ದರೆ ಶೇ. 14, 15 ಅಥವಾ ಶೇ. 20ರಷ್ಟು ಜಿಡಿಪಿ ಹೊಂದಬಹುದಿತ್ತು. ನಾವು ಇಷ್ಟೆಲ್ಲಾ ಉತ್ತಮ ಸಾಧನೆ ಮಾಡಿದಾಗಲೂ ಫೆಡ್ ಬಡ್ಡಿದರ ಏರಿಸುವುದು ನಿಜಕ್ಕೂ ಬೇಸರದ ಸಂಗತಿ” ಎಂದು ಸಿಟ್ಟು ಹೊರಹಾಕಿದರು.
ಅಮೆರಿಕದಲ್ಲಿ ಏಕೆ ಅತ್ಯಂತ ಕಡಿಮೆ ಬಡ್ಡಿದರ ಇರಬೇಕು ಎಂಬುದಕ್ಕೆ ಕಾರಣವನ್ನೂ ನೀಡಿದ ಅವರು, ಇತರ ದೇಶಗಳನ್ನು ಯಶಸ್ವಿಗೊಳಿಸುವ ದೇಶ ನಮ್ಮದು. ಅವುಗಳಲ್ಲಿ ಕೆಲವನ್ನು ಆರ್ಥಿಕವಾಗಿ ಬಲಿಷ್ಠ ಎಂದು ಪರಿಗಣಿಸಲಾಗಿದೆ, ಆದರೆ ಅವು ಹಾಗಲ್ಲ. ನಮ್ಮಿಂದಾಗಿಯೇ ಅವು ಆ ಮಟ್ಟಕ್ಕೆ ಬೆಳೆದಿವೆ. ಆದ್ದರಿಂದ ನಮಗೆ ಅತ್ಯಂತ ಕಡಿಮೆ ಬಡ್ಡಿದರ ಇರಬೇಕು ಎಂದು ವಾದಿಸಿದರು.
ಫೆಡ್ ವಿರುದ್ಧ ಕಿಡಿ ಯಾಕೆ?
ಬಡ್ಡಿದರ ಕಡಿತಗೊಳಿಸಬೇಕೆಂಬ ಅಧ್ಯಕ್ಷ ಟ್ರಂಪ್ ಅವರ ಬೇಡಿಕೆಯನ್ನು ಕಡೆಗಣಿಸಿ, ಫೆಡರಲ್ ರಿಸರ್ವ್ ಅಧ್ಯಕ್ಷ ಕೆವಿನ್ ವಾರ್ಷ್ ನೇತೃತ್ವದ ಕೇಂದ್ರ ಬ್ಯಾಂಕ್ ಹಣದುಬ್ಬರವನ್ನು ನಿಯಂತ್ರಿಸುವ ಉದ್ದೇಶದಿಂದ ಕಳೆದ ಸೆಪ್ಟೆಂಬರ್ನಲ್ಲಿ (2023ರ ನಂತರ ಮೊದಲ ಬಾರಿಗೆ) ಬಡ್ಡಿದರಗಳನ್ನು ಏರಿಕೆ ಮಾಡಿತ್ತು. ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಅಮೆರಿಕವು ಶೇ. 3.4ರಷ್ಟು ಜಿಡಿಪಿ ಬೆಳವಣಿಗೆಯನ್ನು ದಾಖಲಿಸಿದೆ ಎಂದು ಅಂದಾಜಿಸಲಾಗಿದೆ.
ಇನ್ನೊಂದೆಡೆ ಭಾರತದ ವಿಷಯಕ್ಕೆ ಬಂದರೆ, ಭಾರತೀಯ ರಿಸರ್ವ್ ಬ್ಯಾಂಕ್ (RBI) ಕಳೆದ ಸೆಪ್ಟೆಂಬರ್ನಲ್ಲಿ ನಡೆದ ದ್ವೈಮಾಸಿಕ ಸಭೆಯ ನಂತರ ತನ್ನ ರೆಪೋ ದರವನ್ನು 25 ಮೂಲಾಂಶಗಳಷ್ಟು (Basis Points) ಹೆಚ್ಚಿಸಿ ಶೇ. 5.5ಕ್ಕೆ ನಿಗದಿಪಡಿಸಿತ್ತು. ಇದು ವಿಶ್ವದ ಅತ್ಯಂತ ಕಡಿಮೆ ಬಡ್ಡಿದರಗಳಲ್ಲಿ ಒಂದಾಗಿದ್ದರೂ, ಎಲ್ಲಾ ದೇಶಗಳಿಗಿಂತ ಕಡಿಮೆಯೇನಲ್ಲ. ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಶೇ. 7.8ರಷ್ಟು ಬೆಳವಣಿಗೆ ದಾಖಲಿಸಿರುವ ಭಾರತ, ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಮುಂದುವರಿದಿದೆ.
