– ಚಾಲಕನ ಸಮಯಪ್ರಜ್ಞೆಯಿಂದ ಬೈಕ್ ಸವಾರ ಬಚಾವ್
ಬೆಂಗಳೂರು: ನಗರದ (Bengaluru) ಮಾರತಹಳ್ಳಿ (Marathahalli) ಔಟರ್ ರಿಂಗ್ ರೋಡ್ ಬಳಿ ಕಾರೊಂದು ಬೈಕ್ಗೆ ಡಿಕ್ಕಿಯಾಗಿದೆ. ಈ ವೇಳೆ ಬೈಕ್ ಸವಾರ ರಸ್ತೆಗೆ ಬಿದ್ದಿದ್ದಾನೆ. ಇದೇ ಸಮಯದಲ್ಲಿ ಹಿಂದಿನಿಂದ ಬರುತ್ತಿದ್ದ ಬಿಎಂಟಿಸಿ ವೋಲ್ವೋ ಬಸ್ ರಸ್ತೆಯಲ್ಲಿ ಬಿದ್ದಿದ್ದ ಬೈಕ್ ಸವಾರನ ಎದೆ ಬಳಿಗೆ ಬಂದು ನಿಂತಿದೆ. ಬಸ್ ಚಾಲಕನ ಸಮಯಪ್ರಜ್ಞೆಯಿಂದ ಬೈಕ್ ಸವಾರ ಬಚಾವ್ ಆಗಿದ್ದಾನೆ.
ಓವರ್ಟೇಕ್ ಮಾಡುವ ಭರದಲ್ಲಿ ಕಾರಿನ ಚಾಲಕ ಪಕ್ಕದಲ್ಲಿ ಬರುತ್ತಿದ್ದ ಬೈಕ್ಗೆ ಕಾರನ್ನು ಟಚ್ ಮಾಡಿದ್ದಾನೆ. ಈ ವೇಳೆ ನಿಯಂತ್ರಣ ಕಳೆದುಕೊಂಡು ಬೈಕ್ ಸವಾರ ಬಿದ್ದಿದ್ದಾನೆ. ಅಪಘಾತದ ಬಳಿಕ ಕಾರು ಚಾಲಕ, ಕಾರನ್ನು ನಿಲ್ಲಿಸದೇ (Hit & Run) ಪರಾರಿಯಾಗಿದ್ದಾನೆ. ಇದನ್ನೂ ಓದಿ: ಲವ್ ಮ್ಯಾರೇಜ್ ವಿಚಾರಕ್ಕೆ ಎರಡು ಸಮುದಾಯದ ನಡುವೆ ಮಾರಾಮಾರಿ – ಹಲವರಿಗೆ ಗಂಭೀರ ಗಾಯ
ಅದೃಷ್ಟವಶಾತ್ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಅಪಘಾತದ ದೃಶ್ಯ ಮತ್ತೊಂದು ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಬಾಗಲೂರು ಶೂಟೌಟ್ ಪ್ರಕರಣ – ಸ್ಕ್ರ್ಯಾಪ್ ದಂಧೆ ವೈಷಮ್ಯಕ್ಕೆ ಕೊಲೆ, ಪ್ರಮುಖ ಆರೋಪಿ ಬಂಧನ
