ಬೆಂಗಳೂರು: ಬಾಗಲೂರಿನಲ್ಲಿ ಕಾರಿನಲ್ಲೇ ವ್ಯಕ್ತಿಯನ್ನು ಗುಂಡಿಕ್ಕಿ (Bagalur Shootout) ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ನವೀದ್ ಇಲಾಹಿ ಬೇಗ್ ಹಾಗೂ ಆತನ ಸಹಚರ ಮುಬಾರಕ್ನನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.
ಸ್ಕ್ರ್ಯಾಪ್ ವ್ಯವಹಾರದ (Scrap Business) ವೈಷಮ್ಯವೇ ಈ ಕೊಲೆಗೆ ಪ್ರಮುಖ ಕಾರಣ ಎಂದು ತಿಳಿದುಬಂದಿದೆ. ಗಂಗೊಂಡನಹಳ್ಳಿಯಲ್ಲಿ ಗುಜರಿ ವ್ಯಾಪಾರ ನಡೆಸುತ್ತಿದ್ದ ನವೀದ್, ಬನ್ನೇರುಘಟ್ಟ ಮೂಲದ ಇಮ್ರಾಜ್ ಪಾಷಾಗೆ ಮೈಸೂರು ರಸ್ತೆ ಹಾಗೂ ಬ್ಯಾಟರಾಯನಪುರ ಭಾಗದಲ್ಲಿ ವ್ಯವಹಾರ ನಡೆಸದಂತೆ ಎಚ್ಚರಿಕೆ ನೀಡಿದ್ದ. ಆದರೆ, ಇಮ್ರಾಜ್ ತನ್ನ ವ್ಯಾಪಾರ ವಿಸ್ತರಿಸಿದ್ದರಿಂದ ಕೋಪಗೊಂಡ ನವೀದ್, ಮಾತುಕತೆ ನೆಪದಲ್ಲಿ ಕರೆಸಿ ತನ್ನ ಲೈಸೆನ್ಸ್ಡ್ ಪಿಸ್ತೂಲ್ನಿಂದ ಗುಂಡು ಹಾರಿಸಿ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಹೆನ್ನಂಗಿಯಲ್ಲಿ ಕಾಡಾನೆ ದಾಳಿಗೆ ರೈತ ಬಲಿ – ಎನ್ಆರ್ಪುರ ಸಂಪೂರ್ಣ ಬಂದ್
ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಿಜಯನಗರದ ಟೆಲಿಕಾಂ ಲೇಔಟ್ ನಿವಾಸದಲ್ಲಿ ವಶಕ್ಕೆ ಪಡೆಯಲಾಗಿದೆ. ಆರೋಪಿ ಕಾಂಗ್ರೆಸ್ ಪಕ್ಷದ ನಾಯಕರೊಂದಿಗೆ ಗುರುತಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಸದ್ಯ ಪಿಸ್ತೂಲ್ ವಶಪಡಿಸಿಕೊಂಡು ಎಫ್ಎಸ್ಎಲ್ಗೆ ಕಳುಹಿಸಿರುವ ಪೊಲೀಸರು, ಆರೋಪಿಯನ್ನು ಕೋರ್ಟ್ಗೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆಯಲು ಸಿದ್ಧತೆ ನಡೆಸಿದ್ದಾರೆ. ಇದನ್ನೂ ಓದಿ: KPSC Scam| ಸಿಸಿಟಿವಿ ಇಲ್ಲದ ಕೊಠಡಿಯಲ್ಲಿ ನಡೆಯುತ್ತಿತ್ತು ಅಭ್ಯರ್ಥಿಗಳ ಸಂದರ್ಶನ!

