ಬೀದರ್: ಕಬ್ಬಿನ ದರ (Sugarcane Price) ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಇಂದು ಬೀದರ್ ಬಂದ್ಗೆ (Bidar Bandh) ಕರೆ ನೀಡಲಾಗಿದೆ.
ಸರ್ಕಾರದಿಂದ ಸ್ಪಷ್ಟ ಭರವಸೆ ಸಿಗದ ಹಿನ್ನೆಲೆ ಇಂದು ಬೀದರ್ ಬಂದ್ಗೆ ಕರೆ ಕೊಡಲಾಗಿದೆ. ಜಿಲ್ಲಾ ರೈತ ಸಂಘಟನೆಗಳ ಸಮನ್ವಯ ಸಮಿತಿಯಿಂದ ಬಂದ್ಗೆ ಕರೆ ನೀಡಿದ್ದು, ಜಿಲ್ಲೆಯಾದ್ಯಂತ ರಸ್ತೆ ತಡೆ ಚಳವಳಿಗೆ ರೈತರು ಸಿದ್ಧತೆ ನಡೆಸಿದ್ದಾರೆ. ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಸ್ತೆ ರೋಕೋಗೆ ನಿರ್ಧರಿಸಲಾಗಿದೆ. ಶಾಸಕ ದರ್ಶನ್ ಪುಟ್ಟಣ್ಣಯ್ಯ, ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರಪ್ಪ ಈ ಹೋರಾಟದಲ್ಲಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಮೈಸೂರಿನಲ್ಲಿ ಮುಂದುವರಿದ ಮುನಿಸು: ಸಿದ್ದರಾಮಯ್ಯ ನೇತೃತ್ವದ ಸಭೆಗೆ ಮಹದೇವಪ್ಪ ಗೈರು!
ನಗರದ ಅಂಬೇಡ್ಕರ್ ವೃತದಲ್ಲಿ ಟೈರ್ಗೆ ಬೆಂಕಿ ಹಚ್ಚಿ ಬೃಹತ್ ಪ್ರತಿಭಟನೆ ನಡೆಯಲಿದೆ. ಇದಾದ ಬಳಿಕ ಹೈದರಾಬಾದ್ ಟು ಮುಂಬೈ ರಾಷ್ಟ್ರೀಯ ಹೆದ್ದಾರಿ ಮಂಗಲಗಿ ಟೋಲ್ ಬಳಿ ರೈತರು ರಸ್ತೆ ತಡೆ ನಡೆಸಲಿದ್ದಾರೆ. ಪ್ರತಿ ಟನ್ ಕಬ್ಬಿಗೆ 4,000 ರೂ ಮುಂಗಡ ಪಾವತಿಗೆ ಆಗ್ರಹಿಸಿದ್ದು, ಎಸ್ಎಪಿ ಅಡಿ ಪ್ರತಿ ಟನ್ಗೆ 1,000 ರೂ. ಹೆಚ್ಚುವರಿ ನೆರವಿಗೆ ಒತ್ತಾಯಿಸಲಾಗಿದೆ. ಹಳ್ಳಿಖೇಡ್ (ಬಿ)ಯಲ್ಲಿರುವ ಸಕ್ಕರೆ ಕಾರ್ಖಾನೆ ಲೀಸ್ಗೆ ನೀಡಿ ಪುನರಾರಂಭಕ್ಕೆ ಆಗ್ರಹ ಹಾಗೂ ಹುಮನಾಬಾದ್ ತಾಲೂಕಿನಲ್ಲಿರುವ ಬಿಎಸ್ ಎಸ್ಕೆ ಕಾರ್ಖಾನೆಯಲ್ಲಿ ರೈತರು ಪಾವತಿಸಿದ ವಿಮಾ ಕಂತಿಗೆ ಶೇ.100ರಷ್ಟು ಪರಿಹಾರಕ್ಕೆ ಬೇಡಿಕೆ ಸಲ್ಲಿಸಿದ್ದು, ಬರಪೀಡಿತ ಜಿಲ್ಲೆಯ ರೈತರ ಸಂಪೂರ್ಣ ಸಾಲ ಮನ್ನಾಕ್ಕೆ ಒತ್ತಾಯಿಸಲಾಗಿದೆ. ಇದನ್ನೂ ಓದಿ: ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ 3ನೇ ದಿನ – ಬೇಡಿಕೆ ಈಡೇರುವವರೆಗೂ ಕದಲಲ್ಲ ಎಂದು ಪಟ್ಟು
ಎನ್ಡಿಆರ್ಎಫ್ & ಎಸ್ಡಿಆರ್ಎಫ್ ನಿಯಮದಡಿ ರೈತರಿಗೆ ಬೆಳೆ ಪರಿಹಾರ ನೀಡಬೇಕು. ಸ್ವಾಮೀನಾಥನ್ ವರದಿ ತಕ್ಷಣ ಕಾಯ್ದೆ ಮಾಡಬೇಕು. ಜಿಲ್ಲೆಯ ರೈತರ ಮಕ್ಕಳ ಶಾಲಾ-ಕಾಲೇಜುಗಳ ಶುಲ್ಕ ಮನ್ನಾ ಮಾಡಬೇಕೆಂದು ಆಗ್ರಹಿಸಲಾಗಿದೆ. ರೈತರ ಈ ಹೋರಾಟಕ್ಕೆ ವ್ಯಾಪಾರಸ್ಥರು, ಸಂಘಟನೆಗಳು, ಸಾರ್ವಜನಿಕರು ಬೆಂಬಲ ನೀಡಬೇಕೆಂದು ಸಂಘಟನೆ ಮನವಿ ಮಾಡಿದೆ. ಇದನ್ನೂ ಓದಿ: 2035ರ ವೇಳೆಗೆ ಕ್ರೈಸ್ತರನ್ನು ಹಿಂದಿಕ್ಕಿ ವಿಶ್ವದ ಅತಿದೊಡ್ಡ ಧರ್ಮವಾಗಲಿದೆ ಇಸ್ಲಾಂ
