-ಮ್ಯಾನ್ಮಾರ್, ಬ್ರೂನೈಗೆ ಬೀದರ್ನ ಬಿದ್ರಿ ಕಲಾಕೃತಿಗಳ ಉಡುಗೊರೆ
ಮನಿಲಾ: ಪ್ರಧಾನಮಂತ್ರಿ ನರೇಂದ್ರ ಮೋದಿ (PM Modi) ಅವರು ಫಿಲಿಪೈನ್ಸ್ ಭೇಟಿ ವೇಳೆ ನಡೆದ ಕ್ವಾಡ್ ಶೃಂಗಸಭೆಯಲ್ಲಿ ವಿವಿಧ ದೇಶಗಳ ನಾಯಕರಿಗೆ ಭಾರತದ ವೈವಿಧ್ಯಮಯ ಕರಕುಶಲ ಪರಂಪರೆಯನ್ನು ಎತ್ತಿಹಿಡಿಯುವ ಕರಕುಶಲ ವಸ್ತುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.
ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರಿಗೆ ಗೋಲ್ಡನ್ ಪಿಚ್ವಾಯಿ ಚಿತ್ರಕಲೆಯನ್ನು ನೀಡಿದ್ದು, ಇದು ಭಾರತದ ಸಾಂಪ್ರದಾಯಿಕ ಕಲೆ ಮತ್ತು ನುರಿತ ಕುಶಲಕರ್ಮಿಗಳ ಕರಕುಶಲತೆಯನ್ನು ಎತ್ತಿ ತೋರಿಸುತ್ತದೆ. ಇದನ್ನೂ ಓದಿ: ಭಾರತದ ಆರ್ಥಿಕತೆ ಸತ್ತು ಹೋಗಿದೆ ಎಂದು ಟೀಕಿಸಿದ ರಾಹುಲ್ ಗಾಂಧಿ; ಅಂಕಿ-ಅಂಶಗಳ ಸಮೇತ ಬಿಜೆಪಿ ತಿರುಗೇಟು
ರಾಜಸ್ಥಾನದ ನಾಥದ್ವಾರದಲ್ಲಿ ಹುಟ್ಟಿಕೊಂಡಿರುವ ಗೋಲ್ಡನ್ ಪಿಚ್ವಾಯಿ ಚಿತ್ರಕಲೆಯು ಸಾಂಪ್ರದಾಯಿಕ ಭಾರತೀಯ ಬಟ್ಟೆಯ ಕಲೆಯ ಪ್ರಸಿದ್ಧ ರೂಪವಾಗಿದ್ದು, ಇದು ಅತ್ಯಂತ ಸೂಕ್ಷ್ಮವಾದ ವಿವರಣೆಗಳು, ರೋಮಾಂಚಕ ಬಣ್ಣಗಳು ಮತ್ತು ವಿಸ್ತೃತ ರಚನೆಗಳಿಗೆ ಹೆಸರುವಾಸಿಯಾಗಿದೆ. ಈ ಕಲಾಕೃತಿಯನ್ನು ಬಟ್ಟೆಯ ಮೇಲೆ ಖನಿಜ ವರ್ಣದ್ರವ್ಯಗಳನ್ನು ಬಳಸಿ ರಚಿಸಲಾಗುತ್ತದೆ. ಜೊತೆಗೆ ಚಿನ್ನದ ಬಳಕೆಯು ಈ ಚಿತ್ರಕಲೆಗೆ ವಿಶಿಷ್ಟವಾದ ಹೊಳಪನ್ನು ನೀಡುತ್ತದೆ.
ಆಸ್ಟ್ರೇಲಿಯಾದ ಪ್ರಧಾನಿಗೆ ಜೈಪುರ ಬ್ಲೂ ಪಾಟರಿ:
ಪ್ರಧಾನಿ ಮೋದಿ ಅವರು ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರಿಗೆ ರಾಜಸ್ಥಾನದ ಶ್ರೀಮಂತ ಕರಕುಶಲ ಪರಂಪರೆಗೆ ಸಂಬಂಧಿಸಿದ ಮತ್ತೊಂದು ವಿಶಿಷ್ಟ ಕಲೆಯಾದ ಸಾಂಪ್ರದಾಯಿಕ ಜೈಪುರ ಬ್ಲೂ ಪಾಟರಿ ಕರಕುಶಲ ವಸ್ತುವನ್ನು ಉಡುಗೊರೆಯಾಗಿ ನೀಡಿದರು. ಜೈಪುರ ಬ್ಲೂ ಪಾಟರಿಯು ಸಾಂಪ್ರದಾಯಿಕ ಮಡಿಕೆಗಳಲ್ಲಿ ವಿಭಿನ್ನವಾದ ಒಂದು ಅನನ್ಯ ಕಲಾ ಪ್ರಕಾರವಾಗಿದೆ.ಇದನ್ನೂ ಓದಿ: ವಿಡಿಯೋ ಕರೆ, ಅಶ್ರುವಾಯು, ಗುಂಡಿನ ಚಕಮಕಿ – ಮಸೀದಿಯಲ್ಲಿ ಅಡಗಿದ್ದ ಉಗ್ರನನ್ನು ಹೊರಗೆ ಕರೆತಂದಿದ್ದು ಹೇಗೆ?
ಜಪಾನ್ ಪ್ರಧಾನಿಗೆ ರಾಯಲ್ ಬ್ಲೂ ಬನಾರಸಿ ಕಟನ್ ಸಿಲ್ಕ್ ಸ್ಟೋಲ್:
ಜಪಾನ್ ಪ್ರಧಾನಿ ಸನೇ ತಕೈಚಿ ಅವರಿಗೆ, ಪ್ರಧಾನಮಂತ್ರಿ ಮೋದಿ ಅವರು ರಾಯಲ್ ಬ್ಲೂ ಬನಾರಸಿ ಕಟನ್ ಸಿಲ್ಕ್ ಸ್ಟೋಲ್ ಅನ್ನು ನೀಡಿದ್ದಾರೆ. ಉತ್ತಮ ಗುಣಮಟ್ಟದ ಕಟನ್ ಸಿಲ್ಕ್ನಿಂದ ನೇಯಲಾದ ಈ ಸ್ಟೋಲ್ ಬನಾರಸ್ನ ಶತಮಾನಗಳ ಹಳೆಯ ಜವಳಿ ತಯಾರಿಕೆಯ ಪರಂಪರೆಯನ್ನು ಪ್ರತಿನಿಧಿಸುತ್ತದೆ.
ಮ್ಯಾನ್ಮಾರ್, ಬ್ರೂನೈಗೆ ಬೀದರ್ನ ಬಿದ್ರಿ ಕಲಾಕೃತಿಗಳ ಉಡುಗೊರೆ:
ಫಿಲಿಪೈನ್ಸ್ನ ಮನಿಲಾ ಭೇಟಿಯ ವೇಳೆ ಮ್ಯಾನ್ಮಾರ್ ಮತ್ತು ಬ್ರೂನೈಗೆ ಬೀದರ್ನ ಬಿದ್ರಿ ಕಲಾಕೃತಿಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಮ್ಯಾನ್ಮಾರ್ಗೆ ಬೆಳ್ಳಿಯ ಕೆತ್ತನೆಯುಳ್ಳ ಬಿದ್ರಿ ಕಲೆಯುಳ್ಳ ಹೂಜಿಯ ಉಡುಗೊರೆ ಹಾಗೂ ಬ್ರೂನೈಗೆ ಸುಲ್ತಾನ್ ಹಾಜಿ ಹಸನಲ್ ಬೊಲ್ಕಿಯಾ ಅವರಿಗೂ ಬಿದ್ರಿ ಕಲೆಯ ಬೆಳ್ಳಿಯ ಹೂಜಿ ಕೊಡುಗೆ ನೀಡಿದ್ದಾರೆ.ಇದನ್ನೂ ಓದಿ: ಡಿಸಿಸಿ ಬ್ಯಾಂಕ್ನಲ್ಲಿ 400 ಕೋಟಿ ಗೋಲ್ಮಾಲ್ ಆರೋಪ – ಮಾಜಿ ಅಧ್ಯಕ್ಷನ ವಿರುದ್ಧ ಕೊತ್ತೂರು ಮಂಜುನಾಥ್ ವಾಗ್ದಾಳಿ!
ಸತು ಮತ್ತು ತಾಮ್ರದ ಮಿಶ್ರಲೋಹದಿಂದ ತಯಾರಿಸುವ ಸಾಂಪ್ರದಾಯಿಕ ಲೋಹದ ಕಲೆ ಇದಾಗಿದ್ದು, ಕಲಾಕೃತಿಯ ಮೇಲೆ ಶುದ್ಧ ಬೆಳ್ಳಿಯ ಸೂಕ್ಷ್ಮ ಕೆತ್ತನೆ ಮಾಡಲಾಗಿದೆ. ವಿಶೇಷ ಸಂಸ್ಕರಣೆಯಿಂದ ಮೂಡಿಬರುವ ಕಪ್ಪು ಬಣ್ಣದ ಹಿನ್ನೆಲೆ, ಬೆಳ್ಳಿಯ ವಿನ್ಯಾಸವು ಇದರ ಆಕರ್ಷಣೆಯಾಗಿದ್ದು, ಬೀದರ್ ಕೋಟೆಯ ವಾಸ್ತುಶಿಲ್ಪದಿಂದ ಪ್ರೇರಿತ ಹೂವಿನ ಹಾಗೂ ಜ್ಯಾಮಿತೀಯ ವಿನ್ಯಾಸಗಳು ಹೊಂದಿವೆ. ಕರ್ನಾಟಕದ ಬೀದರ್ನ ಸಾಂಪ್ರದಾಯಿಕ ಕರಕುಶಲ ಕಲೆ ಭೌಗೋಳಿಕ ಸೂಚ್ಯಂಕ (ಜಿಐ) ಮಾನ್ಯತೆ ಪಡೆದಿದ್ದು, ಅಂತಾರಾರಾಷ್ಟ್ರೀಯ ವೇದಿಕೆಯಲ್ಲಿ ಮನ್ನಣೆ ಪಡೆಯುತ್ತಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಎರಡು ದಿನಗಳ ಕಾಲ ಫಿಲಿಪೈನ್ಸ್ಗೆ ಭೇಟಿ ನೀಡಿದ್ದು, ಈ ವೇಳೆ ಅವರು 23ನೇ ಆಸಿಯಾನ್-ಭಾರತ ಶೃಂಗಸಭೆ, 21ನೇ ಪೂರ್ವ ಏಷ್ಯಾ ಶೃಂಗಸಭೆ ಮತ್ತು ಕ್ವಾಡ್ ನಾಯಕರ ಸಭೆಯಲ್ಲಿ ಭಾಗವಹಿಸಿದರು. ಅಲ್ಲದೆ, ಅವರು ಮನಿಲಾದಲ್ಲಿರುವ ಐತಿಹಾಸಿಕ ಗುರುದ್ವಾರ ಖಾಲ್ಸಾ ದಿವಾನ್ಗೆ ಭೇಟಿ ನೀಡಿ, ಅದರ ಪುನರಾಭಿವೃದ್ಧಿ ಕಾರ್ಯದ ಆರಂಭವನ್ನು ಸೂಚಿಸುವ ಸಮಾರಂಭದಲ್ಲಿ ಪಾಲ್ಗೊಂಡರು.ಇದನ್ನೂ ಓದಿ: ರಾಜ್ಯದಲ್ಲಿ ಹೈಕ್ವಾಲಿಟಿ ಪೆಟ್ರೋಲ್ನಲ್ಲೂ ಎಥೆನಾಲ್ ಮಿಶ್ರಣ – ಕೇಂದ್ರ ಸರ್ಕಾರಕ್ಕೆ ಸಚಿವ ರಿಜ್ವಾನ್ ಅರ್ಷದ್ ಪತ್ರ!
